Home Uncategorized ವಿಶೇಷಚೇತನರಿಗೆ ಹಲವಾರು ಯೋಜನೆಗಳಿದ್ದರೂ ಅವುಗಳು ಸೂಕ್ತ ರೀತಿಯಲ್ಲಿ ಜಾರಿಯಾಗುತ್ತಿಲ್ಲ: ಎನ್‌ಎಫ್‌ಬಿ ಪ್ರಧಾನ ಕಾರ್ಯದರ್ಶಿ

ವಿಶೇಷಚೇತನರಿಗೆ ಹಲವಾರು ಯೋಜನೆಗಳಿದ್ದರೂ ಅವುಗಳು ಸೂಕ್ತ ರೀತಿಯಲ್ಲಿ ಜಾರಿಯಾಗುತ್ತಿಲ್ಲ: ಎನ್‌ಎಫ್‌ಬಿ ಪ್ರಧಾನ ಕಾರ್ಯದರ್ಶಿ

18
0

ಅಂಗವಿಕಲರಿಗಾಗಿ ಹಲವಾರು ಯೋಜನೆಗಳಿದ್ದರೂ, ಅವುಗಳು ಸೂಕ್ತ ರೀತಿಯಲ್ಲಿ ಜಾರಿಯಾಗುತ್ತಿಲ್ಲ ಎಂದು ರಾಷ್ಟ್ರೀಯ ಅಂಧರ ಒಕ್ಕೂಟದ (ಎನ್‌ಎಫ್‌ಬಿ) ಪ್ರಧಾನ ಕಾರ್ಯದರ್ಶಿ ಗೌತಮ್ ಅಗರವಾಲ್ ಅವರು ಬುಧವಾರ ಬೇಸರ ವ್ಯಕ್ತಪಡಿಸಿದ್ದಾರೆ. ಬೆಂಗಳೂರು: ಅಂಗವಿಕಲರಿಗಾಗಿ ಹಲವಾರು ಯೋಜನೆಗಳಿದ್ದರೂ, ಅವುಗಳು ಸೂಕ್ತ ರೀತಿಯಲ್ಲಿ ಜಾರಿಯಾಗುತ್ತಿಲ್ಲ ಎಂದು ರಾಷ್ಟ್ರೀಯ ಅಂಧರ ಒಕ್ಕೂಟದ (ಎನ್‌ಎಫ್‌ಬಿ) ಪ್ರಧಾನ ಕಾರ್ಯದರ್ಶಿ ಗೌತಮ್ ಅಗರವಾಲ್ ಅವರು ಬುಧವಾರ ಬೇಸರ ವ್ಯಕ್ತಪಡಿಸಿದ್ದಾರೆ.

ಎಪಿಎಸ್ ಎಜುಕೇಶನ್ ಫೌಂಡೇಶನ್ ಬೆಂಗಳೂರಿನಲ್ಲಿ ಬುಧವಾರ ವಿಶ್ವ ಬ್ರೈಲ್ ದಿನಾಚರಣೆಯ ಆಯೋಜಿಸಿತ್ತು. ಲೂಯಿಸ್ ಬ್ರೈಲ್ (ಬ್ರೈಲ್ ಬರವಣಿಗೆ ವ್ಯವಸ್ಥೆಯನ್ನು ಕಂಡುಹಿಡಿದವರು) ಅವರ 214 ನೇ ಜನ್ಮ ವಾರ್ಷಿಕೋತ್ಸವವನ್ನು ಈ ದಿನ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಗೌತಮ್ ಅವರು, ಸರ್ಕಾರ ಘೋಷಿಸಿರುವ ಎಲ್ಲ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕೆ ಕಾಲಮಿತಿ ಕ್ರಿಯಾ ಯೋಜನೆ ರೂಪಿಸಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಛಲ ಮತ್ತು ಧ್ಯೇಯವಿದ್ದರೆ ವ್ಯಕ್ತಿಯು ಜೀವನದಲ್ಲಿ ಸಾಕಷ್ಟು ಸಾಧನೆ ಮಾಡಬಹುದು ಎಂದು ತಿಳಿಸಿದರು.

ಪುದುಚೇರಿಯಲ್ಲಿ ಡೆಪ್ಯುಟಿ ಕಲೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿರುವ ದೃಷ್ಟಿಹೀನ ವಿಶೇಷಚೇರನ ಐಎಎಸ್ ಅಧಿಕಾರಿ ಸತೇಂದರ್ ಸಿಂಗ್ ಅವರು ಮಾತನಾಡಿ, ವಿಕಲಚೇತನರ ಸಮಸ್ಯೆಗಳು ಸಮಾಜದಲ್ಲಿ ಚರ್ಚೆಯಾಗುವಂತೆ ನೋಡಿಕೊಳ್ಳುವುದು ಮುಖ್ಯ ಎಂದರು. ಸಮಾರಂಭದಲ್ಲಿ 15 ವಿಶೇಷಚೇತನರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

LEAVE A REPLY

Please enter your comment!
Please enter your name here