Home Uncategorized ವಿಶ್ವಕಪ್​ನಲ್ಲಿ ಭಾರತಕ್ಕೆ ಸೋಲಿನ ಭಯ ಹುಟ್ಟಿಸಿದ್ದ ಆಟಗಾರನಿಗೆ ನಾಯಕನ ಪಟ್ಟಕಟ್ಟಿದ ಬಾಂಗ್ಲಾ..!

ವಿಶ್ವಕಪ್​ನಲ್ಲಿ ಭಾರತಕ್ಕೆ ಸೋಲಿನ ಭಯ ಹುಟ್ಟಿಸಿದ್ದ ಆಟಗಾರನಿಗೆ ನಾಯಕನ ಪಟ್ಟಕಟ್ಟಿದ ಬಾಂಗ್ಲಾ..!

22
0

ಭಾರತ ಮತ್ತು ಬಾಂಗ್ಲಾದೇಶದ (India vs Bangladesh) ನಡುವಿನ ಏಕದಿನ ಸರಣಿಯ ಪ್ರಾರಂಭಕ್ಕೆ ಕೆಲವೇ ಗಂಟೆಗಳು ಉಳಿದಿವೆ. ಆದರೆ ಆಟಗಾರರ ಇಂಜುರಿ ಸರಣಿ ಆತಿಥೇಯರಿಗೆ ತಲೆನೋವು ತಂದೊಡ್ಡಿದೆ. ತೊಡೆಸಂದು ಗಾಯದಿಂದಾಗಿ ತಂಡದ ಅನುಭವಿ ಬ್ಯಾಟ್ಸ್‌ಮನ್ ಮತ್ತು ಕ್ಯಾಪ್ಟನ್ ತಮೀಮ್ ಇಕ್ಬಾಲ್ (Tamim Iqbal) ಇಡೀ ಸರಣಿಯಿಂದ ಹೊರಗುಳಿದಿದ್ದಾರೆ. ಇದೀಗ ಅವರ ಅನುಪಸ್ಥಿತಿಯಲ್ಲಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ತಂಡದ ಆರಂಭಿಕ ಆಟಗಾರನಿಗೆ ತಂಡದ ನಾಯಕತ್ವದ ಪಟ್ಟಕಟ್ಟಿದೆ. ಇತ್ತೀಚೆಗೆ, ಟಿ20 ವಿಶ್ವಕಪ್‌ನಲ್ಲಿ (T20 World CUP) ಭಾರತೀಯ ಬೌಲರ್‌ಗಳನ್ನು ಮನಬಂದಂತೆ ಥಳಿಸಿದ್ದ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಲಿಟ್ಟನ್ ದಾಸ್ (Litton Das) ಅವರನ್ನು ಏಕದಿನ ಸರಣಿಯ ನಾಯಕನನ್ನಾಗಿ ಮಾಡಿದೆ.

ಮೂರು ಪಂದ್ಯಗಳ ಏಕದಿನ ಸರಣಿಯು ಡಿಸೆಂಬರ್ 4 ರ ಭಾನುವಾರದಂದು ಢಾಕಾದ ಮಿರ್ಪುರದ ಶೆರ್-ಎ-ಬಾಂಗ್ಲಾ ಕ್ರೀಡಾಂಗಣದಲ್ಲಿ ಪ್ರಾರಂಭವಾಗಲಿದೆ. ಈ ಪಂದ್ಯದೊಂದಿಗೆ, ಲಿಟ್ಟನ್ ದಾಸ್ ತಂಡದ ಉಸ್ತುವಾರಿ ವಹಿಸಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಬಾಂಗ್ಲಾದೇಶವನ್ನು ಲಿಟ್ಟನ್ ದಾಸ್ ಮುನ್ನಡೆಸುತ್ತಿರುವುದು ಇದೇ ಮೊದಲು. ಆದಾಗ್ಯೂ ಲಿಟ್ಟನ್​ಗೆ ಕಳೆದ ವರ್ಷ ಟಿ20 ಪಂದ್ಯದಲ್ಲಿ ತಂಡದ ನಾಯಕತ್ವ ವಹಿಸಿದ್ದ ಅನುಭವವಿದೆ.

‘ಲಿಟ್ಟನ್‌ಗೆ ಆಟದ ಬಗ್ಗೆ ಉತ್ತಮ ತಿಳುವಳಿಕೆ ಇದೆ’

ಲಿಟ್ಟನ್ ಅವರ ನೇಮಕಾತಿಯ ಬಗ್ಗೆ ಮಾಹಿತಿ ನೀಡಿದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಕ್ರಿಕೆಟ್ ಕಾರ್ಯಾಚರಣೆಯ ಮುಖ್ಯಸ್ಥ ಜಲಾಲ್ ಯೂನಸ್, ಲಿಟ್ಟನ್ ತಂಡದ ಅತ್ಯಂತ ಅನುಭವಿ ಆಟಗಾರರಲ್ಲಿ ಒಬ್ಬರು. ಅಲ್ಲದೆ ಅವರಲ್ಲಿರುವ ನಾಯಕತ್ವದ ಸಾಮರ್ಥ್ಯಗಳನ್ನು ಅವರು ಈಗಾಗಲೇ ತೋರಿಸಿದ್ದಾರೆ. ಹಾಗೆಯೇ ಅವರಿಗೆ ಆಟದ ಬಗ್ಗೆ ಉತ್ತಮ ತಿಳುವಳಿಕೆ ಇದೆ ಎಂದಿದ್ದಾರೆ.

ಇದನ್ನೂ ಓದಿ: ‘ಇಷ್ಟೊಂದು ಫೋಟೋ ತಗೊಂಡು ಏನು ಮಾಡ್ತೀರಿ’; ವಿಮಾನ ನಿಲ್ದಾಣದಲ್ಲಿ ಕೋಪಗೊಂಡ ರೋಹಿತ್! ವಿಡಿಯೋ

ಭಾರತಕ್ಕೆ ನಡುಕ ಹುಟ್ಟಿಸಿದ್ದ ದಾಸ್

ಈ ವರ್ಷ ಬಾಂಗ್ಲಾ ಪರ ಉತ್ತಮ ಪ್ರದರ್ಶನ ನೀಡಿರುವ ಬಲಗೈ ಬ್ಯಾಟ್ಸ್‌ಮನ್ ಲಿಟ್ಟನ್ ದಾಸ್, ಈ ವರ್ಷ ಆಡಿರುವ 10 ಏಕದಿನ ಪಂದ್ಯಗಳಲ್ಲಿ 62ರ ಸರಾಸರಿ ರನ್ ಗಳಿಸಿದ್ದಾರೆ. ಇದು ಮಾತ್ರವಲ್ಲ, ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್‌ನಲ್ಲಿ ಲಿಟ್ಟನ್ ಭಾರತದ ವಿರುದ್ಧ ಅಬ್ಬರದ ಇನ್ನಿಂಗ್ಸ್ ಆಡಿದ್ದರು. ಆ ಮಳೆ ಬಾಧಿತ ಪಂದ್ಯದಲ್ಲಿ, ಲಿಟ್ಟನ್ ಕೇವಲ 21 ಎಸೆತಗಳಲ್ಲಿ ಅರ್ಧಶತಕ ಬಾರಿಸಿ ಮಿಂಚಿದ್ದರು. ಇದು ಟಿ20 ವಿಶ್ವಕಪ್‌ನಲ್ಲಿ ಬಾಂಗ್ಲಾದೇಶ ಪರ ಆಟಗಾರನೊಬ್ಬ ಬಾರಿಸಿದ ಅತಿ ವೇಗದ ಅರ್ಧಶತಕವೂ ಆಗಿದೆ. ಈ ಪಂದ್ಯದಲ್ಲಿ ಒಟ್ಟು 27 ಎಸೆತಗಳನ್ನು ಎದುರಿಸಿದ್ದ ದಾಸ್, 60 ರನ್ ಬಾರಿಸಿದ್ದರು. ಒಂದು ಹಂತದಲ್ಲಿ ಭಾರತಕ್ಕೆ ಸೋಲಿನ ಭಯ ಹುಟ್ಟಿಸುವಲ್ಲಿ ಲಿಟ್ಟನ್ ಯಶಸ್ವಿಯಾಗಿದ್ದರು.

ಗಾಯದಿಂದ ತೊಂದರೆಗೀಡಾದ ಬಾಂಗ್ಲಾದೇಶ

ಇಂಜುರಿಯಿಂದಾಗಿ ಈಗಾಗಲೇ ಏಕದಿನ ಸರಣಿಯಿಂದ ಹೊರಗುಳಿದಿರುವ ತಮೀಮ್, ಡಿಸೆಂಬರ್ 14 ರಿಂದ ಪ್ರಾರಂಭವಾಗುವ ಟೆಸ್ಟ್ ಸರಣಿಯಲ್ಲಿ ಆಡುವ ಬಗ್ಗೆಯೂ ಅನುಮಾನವಿದೆ. ಅಂದಹಾಗೆ, ಬಾಂಗ್ಲಾ ತಂಡದಲ್ಲಿ ನಾಯಕ ತಮೀಮ್​ ಜೊತೆಗೆ ತಂಡದ ಫಾಸ್ಟ್ ಬೌಲರ್ ಟಸ್ಕಿನ್ ಅಹ್ಮದ್ ಕೂಡ ಇಂಜುರಿಯಿಂದ ಮೊದಲ ಏಕದಿನ ಪಂದ್ಯದಿಂದ ಹೊರಗುಳಿದಿದ್ದಾರೆ.

ಬಾಂಗ್ಲಾದೇಶ ತಂಡ:  ಲಿಟ್ಟನ್ ದಾಸ್ (ನಾಯಕ), ಅನಾಮುಲ್ ಹಕ್ ಬಿಜೋಯ್, ಶಕಿಬ್ ಅಲ್ ಹಸನ್, ಮುಷ್ಫೀಕುರ್ ರಹೀಮ್, ಅಫೀಫ್ ಹುಸೇನ್, ಯಾಸಿರ್ ಅಲಿ, ಮೆಹಿದಿ ಹಸನ್ ಮಿರಾಜ್, ಮುಸ್ತಫಿಜುರ್ ರೆಹಮಾನ್, ಹಸನ್ ಮಹಮೂದ್, ಎಬಾಡೋತ್ ಹುಸೇನ್, ನಸ್ಮದ್, ನಸ್ಮದ್, ನಸ್ಮದ್ ಶಾಂತೋ, ನೂರುಲ್ ಹಸನ್ ಸೋಹನ್.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

LEAVE A REPLY

Please enter your comment!
Please enter your name here