ಬೆಂಗಳೂರು: ರಾಜ್ಯ ಬಿಜೆಪಿ ವಕ್ತಾರರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ವಿಸ್ತಾರ ಚಾನಲ್ ಸಂಪಾದಕ ಹರಿಪ್ರಕಾಶ್ ಕೋಣೆಮನೆ ಸೇರಿದಂತೆ, 11 ಮಂದಿಯನ್ನು ಮುಖ್ಯ ವಕ್ತಾರ ಹಾಗೂ ವಕ್ತಾರರಾಗಿ ನೇಮಕ ಮಾಡಲಾಗಿದೆ. ರಾಜ್ಯಾಧ್ಯಕ್ಷರಾದ ಬಿ ವೈ ವಿಜಯೇಂದ್ರ ವಕ್ತಾರರು, ವಿವಿಧ ವಿಭಾಗಗಳಿಗೆ ಸಂಚಾಲಕ ಹಾಗೂ ಸಹಸಂಚಾಲಕರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.
ಮುಖ್ಯ ವಕ್ತಾರರಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಅಶ್ವತ್ಥ ನಾರಾಯಣ ಅವರನ್ನು ನೇಮಕ ಮಾಡಲಾಗಿದೆ. ವಕ್ತಾರರಾಗಿ ವಿಸ್ತಾರ ಚಾನಲ್ ಸಂಪಾದಕ ಹರಿಪ್ರಕಾಶ್ ಕೋಣೆಮನೆ, ಛಲವಾದಿ ನಾರಾಯಣ ಸ್ವಾಮಿ ನೇಮಕಗೊಂಡಿದ್ದಾರೆ. ತೇಜಸ್ವಿನಿ ಗೌಡ, ಕೆ.ಎಸ್ ನವೀನ್, ಎಂ.ಜಿ ಮಹೇಶ್, ಎಚ್.ಎನ್ ಚಂದ್ರಶೇಖರ್, ನರೇಂದ್ರ ರಂಗಪ್ಪ, ಸುರಭಿ ಹೊದಿಗೆರೆ, ಅಶೋಕ್ ಕೆ.ಎಂ ಗೌಡ, ಎಚ್ ವೆಂಕಟೇಶ್ ದೊಡ್ಡೇರಿ ಅವರನ್ನು ನೇಮಕ ಮಾಡಲಾಗಿದೆ.
ಸಾಮಾಜಿಕ ಜಾಲತಾಣ ಸಂಚಾಲಕರಾಗಿ ಪ್ರಶಾಂತ್ ಮಾಕನೂರು, ಸಹ ಸಂಚಾಲಕರಾಗಿ ನರೇಂದ್ರ ಮೂರ್ತಿ, ಮಾಹಿತಿ ತಂತ್ರಜ್ಞಾನ ವಿಭಾಗದ ಸಂಚಾಲಕರಾಗಿ ನಿತಿನ್ ರಾಜ್ ನಾಯಕ್, ಸಹ ಸಂಚಾಲಕರಾಗಿ ಶ್ಯಾಮಲಾ ರಘುನಂದನ್ ಅವರನ್ನು ನೇಮಿಸಲಾಗಿದೆ.
ಮಾಧ್ಯಮ ವಿಭಾಗದ ಸಂಚಾಲಕರಾಗಿ ಕರುಣಾಕರ ಖಾಸಲೆ ಹಾಗೂ ಸಹ ಸಂಚಾಲಕರಾಗಿ ಪ್ರಶಾಂತ್ ಕೆಡಂಜಿ ಅವರಿಗೆ ಸ್ಥಾನ ನೀಡಲಾಗಿದೆ.
