Home Uncategorized ವೃತ್ತಿ ವೈಷಮ್ಯದಿಂದ ಬಾಣಸಿಗನ ಹತ್ಯೆ: ಮೂವರು ಆರೋಪಿಗಳ ಬಂಧನ

ವೃತ್ತಿ ವೈಷಮ್ಯದಿಂದ ಬಾಣಸಿಗನ ಹತ್ಯೆ: ಮೂವರು ಆರೋಪಿಗಳ ಬಂಧನ

19
0

ವೃತ್ತಿ ವೈಷಮ್ಯ ಹಿನ್ನೆಲೆಯಲ್ಲಿ ಬಾಣಿಸಿಗನನ್ನು ಹತ್ಯೆ ಮಾಡಿದ್ದ ಮೃತನ ಮೂವರು ಆರೋಪಿಗಳನ್ನು ಪೀಣ್ಯ ಠಾಣೆ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ. ಬೆಂಗಳೂರು: ವೃತ್ತಿ ವೈಷಮ್ಯ ಹಿನ್ನೆಲೆಯಲ್ಲಿ ಬಾಣಿಸಿಗನನ್ನು ಹತ್ಯೆ ಮಾಡಿದ್ದ ಮೃತನ ಮೂವರು ಆರೋಪಿಗಳನ್ನು ಪೀಣ್ಯ ಠಾಣೆ ಪೊಲೀಸರು ಶನಿವಾರ ಬಂಧನಕ್ಕೊಳಪಡಿಸಿದ್ದಾರೆ.
    
ಚಿಕ್ಕಬಿದರಕಲ್ಲು ನಿವಾಸಿಗಳಾದ ಸತೀಶ್, ದೇವರಾಜ ಹಾಗೂ ಶಿವಕುಮಾರ್ ಅಲಿಯಾಸ್ ಪುಟ್ಟ ಬಂಧಿತ ಆರೋಪಿಗಳಾಗಿದ್ದಾರೆ.

ಕೆಲ ದಿನಗಳ ಹಿಂದೆ ವೃತ್ತಿ ವೈಷಮ್ಯ ಹಿನ್ನೆಲೆಯಲ್ಲಿ ತಮ್ಮ ಗೆಳೆಯ ಆನಂದ್ (33) ನನ್ನು ಆರೋಪಿಗಳು ಹತ್ಯೆ ಮಾಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು, ತಾಂತ್ರಿಕ ಮಾಹಿತಿ ಆಧರಿಸಿ ಆರೋಪಿಗಳನ್ನು ಪತ್ತೆ ಹಚ್ಚಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಹತ್ಯೆಯಾದ ಆನಂದ್ ಮತ್ತು ಪ್ರಮುಖ ಆರೋಪಿ ಸತೀಶ್ ಕೇಟರಿಂಗ್ ವ್ಯವಹಾರ ನಡೆಸುತ್ತಿದ್ದರು. ಕೆಲಕಾಲ ಬಳಿಕ ಆನಂದ್ ತನ್ನದೇ ಸ್ವಂತ ವ್ಯಹಾರ ನಡೆಸಲು ಆರಂಭಿಸಿದ್ದರು. ಇದರಿಂದ ಸತೀಶ್ ಹಾಗೂ ಆನಂದ್ ನಡುವಿನ ಸಂಪರ್ಕ ದೂರಾಗಿತ್ತು.

ಸ್ವಂತ ವ್ಯವಹಾರ ಆರಂಭಿಸಿದ್ದ ಆನಂದ್, ಯಶಸ್ಸು ಗಳಿಸಿದ್ದರು. ಇತ್ತ ಸತೀಶ್’ಗೆ ಕೇಟರಿಂಗ್ ಗುತ್ತಿಗೆ ಸಿಗದೆ ಆನಂದ್ ಮೇಲೆ ಅಸೂಯೆ ಪಡಲು ಆರಂಭಿಸಿದ್ದ. ನಂತರ ಆನಂದ್ ಹತ್ಯೆಗೆ ಸಂಚು ರೂಪಿಸಿದ್ದ. ಈ ವೇಳೆ ತನ್ನ ಸ್ನೇಹಿತ ಪುಟ್ಟ ಹಾಗೂ ದಯಾನಂದ ನೆರವು ಪಡೆದುಕೊಂಡಿದ್ದ.

ಇದರಂತೆ ತಮ್ಮ ವಿವಾಹ ವಾರ್ಷಿಕೋತ್ಸವ ಹಿನ್ನೆಲೆಯಲ್ಲಿ ಪಾರ್ಟಿ ನೀಡುವಂತೆ ಆರೋಪಿ ಸತೀಶ್, ಆನಂದ್ ಬಳಿ ಕೇಳಿದ್ದಾನೆ. ನಂತರ ಆನಂದ್ ಮನೆಯಲ್ಲಿ ಆಹಾರ ಸಿದ್ಧಪಡಿಸಿ, ಮದ್ಯ ಖರೀದಿಸಿ ಚನ್ನನಾಯಕನಪಾಳ್ಯಕ್ಕೆ ತೆಗೆದುಕೊಂಡು ಹೋಗಿದ್ದರು. ಸ್ಥಳಕ್ಕೆ ತರಳಿದ ಬಳಿಕ ಸತೀಶ್ ಆನಂದ್ ಅವರ ಖಾಸಗಿ ಅಂಗಕ್ಕೆ ಒದ್ದು ಹತ್ಯೆ ಮಾಡಿದ್ದಾನೆ. ನಂತರ ಮೂವರೂ ಸೇರಿ ಮೃತದೇಹಕ್ಕೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಮರುದಿನ ಅರೆಬೆಂದ ಸ್ಥಿತಿಯಲ್ಲಿ ಬಿದ್ದಿದ್ದ ಅಪರಿಚಿತ ವ್ಯಕ್ತಿಯ ಮೃತದೇಹ ಕಂಡು ಸ್ಥಳೀಯರು ಪೊಲೀಸರಿಗೆ  ಮಾಹಿತಿ ನೀಡಿದ್ದರು.

ತಮಿಳುನಾಡಿನಲ್ಲಿದ್ದ ತಮ್ಮ ತವರು ಮನೆಗೆ ಹೋಗಿದ್ದ ಆನಂದ್ ಅವರ ಪತ್ನಿ, ಭಾನುವಾರ ತಮಿಳುನಾಡಿನಿಂದ ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣಕ್ಕೆ ಬಂದಿಳಿದ್ದರು. ಈ ವೇಳೆ ತಮ್ಮ ಪತಿಗೆ ಹಲವು ಬಾರಿ ಫೋನ್ ಮಾಡಿದ್ದಾರೆ. ಆದರೆ, ಪತಿ ಫೋನ್ ತೆಗೆಯದ ಕಾರಣ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.

ಇದೇ ವೇಳೆ ಪೀಣ್ಯ ಠಾಣಾ ವ್ಯಾಪ್ತಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ ವಿಚಾರ ತಿಳಿದ ಪೊಲೀಸರು, ಆ ಮೃತದೇಹ ನೋಡುವಂತೆ ಆನಂದ್ ಅವರ ಪತ್ನಿಗೆ ತಿಳಿಸಿದ್ದರು.

ಕೊನೆಗೆ ಮೃತದೇಹದ ಗುರುತು ಪತ್ತೆಯಾಯಿತು. ಬಳಿಕ ಮೃತನ ಮೊಬೈಲ್ ಕರೆಗಳನ್ನು ಪರಿಶೀಲಿಸಿದಾಗ ಹತ್ಯೆ ಹಿಂದಿನ ದಿನ ಆತನಿಗೆ ಗೆಳೆಯ ಸತೀಶ್ ಕರೆ ಮಾಡಿದ್ದ ಸಂಗತಿ ತಿಳಿದುಬಂದಿದೆ. ಆ ಸುಳಿವು ಆಧರಿಸಿ, ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆರೋಪಿಗಳು ಬಾಯ್ಬಿಟ್ಟಿದ್ದಾರೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

LEAVE A REPLY

Please enter your comment!
Please enter your name here