ಒತ್ತಡದ ನಡುವೆಯೂ ಸಂಜು ಸ್ಯಾಮ್ಸನ್ ಅವರ ಅದ್ಭುತ 97 ರನ್ಗಳು ಭಾರತವನ್ನು ಟಿ20 ವಿಶ್ವಕಪ್ 2026ರ ಸೆಮಿಫೈನಲ್ಗೆ ಕೊಂಡೊಯ್ದವು ಮಾತ್ರವಲ್ಲದೆ, ಸಾಂಪ್ರದಾಯಿಕ ಎದುರಾಳಿ ಎಂದೇ ಬಿಂಬಿತವಾಗಿರುವ ಪಾಕಿಸ್ತಾನದಿಂದಲೂ ಪ್ರಶಂಸೆಗೆ ಪಾತ್ರವಾಗಿದೆ. ಹಲವಾರು ಪಾಕಿಸ್ತಾನಿ ಅಭಿಮಾನಿಗಳು ಎಕ್ಸ್ನಲ್ಲಿ ಸಂಜು ಸ್ಯಾಮ್ಸನ್ ಅವರ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. ವೆಸ್ಟ್ ಇಂಡೀಸ್ ನೀಡಿದ್ದ 196 ರನ್ ಗುರಿಯನ್ನು ಬೆನ್ನಟ್ಟಲು ಸ್ಯಾಮ್ಸನ್ ಅವರ ಆಟವು ನೆರವಾಯಿತು ಅಂತಿಮವಾಗಿ ತಂಡವು ಐದು ವಿಕೆಟ್ ಅಂತರದ ಜಯ ಸಾಧಿಸಿತು. ಪಂದ್ಯದ ನಂತರ, ಸಾಮಾಜಿಕ ಮಾಧ್ಯಮಗಳಲ್ಲಿ ಪಾಕಿಸ್ತಾನದ ಅನೇಕರು ಹೆಚ್ಚಿನ ಒತ್ತಡದ ಪಂದ್ಯದಲ್ಲಿ ಸ್ಟೈಲಿಶ್ ಬ್ಯಾಟ್ಸ್ಮನ್ರನ್ನು ಹೊಗಳಿದ್ದಾರೆ.
‘ಸಂಜು ಸ್ಯಾಮ್ಸನ್ ಇಂದು ರಾತ್ರಿ ಅದ್ಭುತ ಆಟವಾಡಿದರು. ದೊಡ್ಡ ಪಂದ್ಯಗಳ ಟೆಂಪರ್ಮೆಂಟ್ ಹೇಗಿರುತ್ತದೆ ಎಂಬುದು ಇದರಿಂದ ತಿಳಿಯುತ್ತದೆ’ ಎಂದು ಪಾಕಿಸ್ತಾನಿ ಅಭಿಮಾನಿಯೊಬ್ಬರು X ನಲ್ಲಿ ಬರೆದಿದ್ದಾರೆ.
‘ಒತ್ತಡದಲ್ಲಿಯೂ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಭಾರತದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯೊಂದಿಗೆ ಮತ್ತೊಬ್ಬ ಅಭಿಮಾನಿ ಹೋಲಿಕೆ ಮಾಡಿದ್ದಾರೆ. ‘ಈ ಇನಿಂಗ್ಸ್ ನನಗೆ ವಿರಾಟ್ ಕೊಹ್ಲಿಯ ಕ್ಲಾಸಿಕ್ ಚೇಸ್ಗಳನ್ನು ನೆನಪಿಸಿತು – ಕಾಮ್, ಲೆಕ್ಕಾಚಾರ ಮತ್ತು ನಿರ್ಭೀತ’ ಎಂದು ಮತ್ತೊಬ್ಬ ಬಳಕೆದಾರರು ಪೋಸ್ಟ್ ಮಾಡಿದ್ದಾರೆ.
‘ತಂಡದ ಒಳಗೆ ಮತ್ತು ಹೊರಗೆ ಇರುವುದು ಸುಲಭವಲ್ಲ. ಆದರೆ, ಸಂಜು ತಂಡಕ್ಕೆ ಅಗತ್ಯವಿದ್ದಾಗ ತನಗೆ ಸಿಕ್ಕ ಅವಕಾಶ ಚೆನ್ನಾಗಿ ಬಳಸಿಕೊಂಡಿದ್ದಾರೆ. ಗೌರವ,’ ಎಂದು ಮತ್ತೊಬ್ಬ ಅಭಿಮಾನಿ ಕಾಮೆಂಟ್ ಮಾಡಿದ್ದಾರೆ.
‘ಸಂಜು ಸ್ಯಾಮ್ಸನ್ ಅವರದ್ದು ಎಂತಹ ಇನಿಂಗ್ಸ್. ಪೈಪೋಟಿಗಳನ್ನು ಬದಿಗಿಟ್ಟರೆ, ಇದು ಒತ್ತಡದಲ್ಲಿ ಶುದ್ಧ ಕ್ಲಾಸ್ ಪ್ರದರ್ಶನವಾಗಿತ್ತು’ ಎಂದು ಮತ್ತೊಂದು ಪೋಸ್ಟ್ನಲ್ಲಿ ಬರೆಯಲಾಗಿದೆ.
ಸ್ಯಾಮ್ಸನ್ 50 ಎಸೆತಗಳಲ್ಲಿ 97 ರನ್ ಗಳಿಸಿ ಅಜೇಯರಾಗಿ ಉಳಿದರು. ಅಂತಿಮವಾಗಿ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ ಜಯ ಸಾಧಿಸಿ ಸೆಮಿಫೈನಲ್ನಲ್ಲಿ ಸ್ಥಾನ ಗಳಿಸಿತು.
