Home Uncategorized ವೈದ್ಯರ ನಿರ್ಲಕ್ಷ್ಯದಿಂದ ವೃದ್ಧೆ ಸಾವು ಆರೋಪ: ಆಸ್ಪತ್ರೆಯಲ್ಲೇ ಕುಟುಂಬಸ್ಥರು, ಸಿಬ್ಬಂದಿ ನಡುವೆ ಗಲಾಟೆ

ವೈದ್ಯರ ನಿರ್ಲಕ್ಷ್ಯದಿಂದ ವೃದ್ಧೆ ಸಾವು ಆರೋಪ: ಆಸ್ಪತ್ರೆಯಲ್ಲೇ ಕುಟುಂಬಸ್ಥರು, ಸಿಬ್ಬಂದಿ ನಡುವೆ ಗಲಾಟೆ

31
0

ಬಾಗಲಕೋಟೆ: ಜಿಲ್ಲೆಯ ಕೆರೂಡಿ ಖಾಸಗಿ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ವೃದ್ಧೆ ಮೃತಪಟ್ಟಿರುವ ಆರೋಪ ಕೇಳಿ ಬಂದಿದೆ. ಆಸ್ಪತ್ರೆ ಆವರಣದಲ್ಲಿ ಸಿಬ್ಬಂದಿ ಮತ್ತು ಮೃತರ ಕುಟುಂಬಸ್ಥರ ಮಧ್ಯೆ ಗಲಾಟೆಯಾಗಿದೆ. ಶಾಂತಮ್ಮ ಅಚನೂರು ಎಂಬ 60 ವರ್ಷದ ವೃದ್ಧೆ ವೈದ್ಯರ ನಿರ್ಲಕ್ಷ್ಯದಿಂದ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದೆ.

ಸೂಕ್ತ ಚಿಕಿತ್ಸೆ ನೀಡಿಲ್ಲವೆಂದು ಮೃತ ಶಾಂತಮ್ಮ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಈ ವೇಳೆ ಆಸ್ಪತ್ರೆಯ ಸಿಬ್ಬಂದಿ, ಮೃತ ವೃದ್ಧೆಯ ಕುಟುಂಬಸ್ಥರ ತಳ್ಳಾಟ ನೂಕಾಟವಾಗಿದೆ. ಸ್ಥಳಕ್ಕೆ ನಗರ ಠಾಣೆ ಪೊಲೀಸರು ಆಗಮಿಸಿ ಪರಿಸ್ಥಿತಿ ಶಾಂತಗೊಳಿಸಿದ್ದಾರೆ. ಮೃತ ಶಾಂತಮ್ಮ ಅಚನೂರು ಬಾಗಲಕೋಟೆ ತಾಲೂಕಿನ ಶಿರೂರು ನಿವಾಸಿ. ಇವರು ಸಂಜೆ 5.30ಕ್ಕೆ ಕೆರೂಡಿ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಆದ್ರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಆಸ್ಪತ್ರೆ ಹೊರಗಡೆ ಕುಳಿತು ಕೂಗಾಡಿ ಮೃತಳ ಕುಟುಂಬಸ್ಥರ ಆಕ್ರೋಶ ಹೊರ ಹಾಕಿದ್ದಾರೆ.

LEAVE A REPLY

Please enter your comment!
Please enter your name here