ಬೆಂಗಳೂರು:
ಕೇರಳ ರಾಜ್ಯದ ಶಬರಿಮಲೈನಲ್ಲಿ ಜರುಗುವ 2020-21 ನೇ ಸಾಲಿನ ಮಂಡಲ-ಮಕರವಿಳಕ್ಕು ವರ್ಷದ ಕಾರ್ಯಕ್ರಮಕ್ಕೆ ತೆರಳುವ ಭಕ್ತಾದಿಗಳ ಆರೋಗ್ಯ ರಕ್ಷಣೆಗಾಗಿ ಹಾಗೂ ಸಾರ್ವಜಿನಕರ ಗಮನಕ್ಕೆ ಕೇರಳ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ.
ಎಲ್ಲಾ ಯತ್ರಾರ್ಥಿಗಳು https://sabarimalaonline.org/ ವೆಬ್‍ಸೈಟ್‍ನ ಪೋರ್ಟಲ್‍ನಲ್ಲಿ ಕಡ್ಡಾಯವಾಗಿ ಹೆಸರು ನೋಂದಣಿ ಮಾಡಿಸಿಕೊಳ್ಳಬೇಕು. ಪ್ರಥಮವಾಗಿ ಪ್ರತಿದಿನ ಒಂದು ಸಾವಿರ ಯಾತ್ರಾರ್ಥಿಗಳಿಗೆ ಮಾತ್ರ ಅವಕಾಶವಿದ್ದು, ವಾರಾಂತ್ಯದಲ್ಲಿ ಪ್ರತಿ ದಿನ ಎರಡು ಸಾವಿರ ಯಾತ್ರಾರ್ಥಿಗಳಿಗೆ ಅವಕಾಶ ಇರುತ್ತದೆ. ಅದರಂತೆ ಮೊದಲು ನೋಂದಣಿ ಮಾಡಿಕೊಂಡವರಿಗೆ ಮೊದಲ ಆದ್ಯತೆ ಇರುತ್ತದೆ.
ಭೇಟಿ ನೀಡುವ 48 ಗಂಟೆ ಅವಧಿಯ ಮೊದಲು ಕೋವಿಡ್-19 ಸೋಂಕು ದೃಢಪಟ್ಟಿಲ್ಲ ಎಂಬ ವೈದ್ಯಕೀಯ ಪ್ರಮಾಣ ಪತ್ರ ಹೊಂದಿರುವುದು ಕಡ್ಡಾಯವಾಗಿದೆ. ಪ್ರವೇಶ ಸ್ಥಳದಲ್ಲಿ Angtigen Test ಅವಕಾಶ ಕಲ್ಪಿಸಲಾಗಿದ್ದು, ಅದರ ವೆಚ್ಚವನ್ನು ಯಾತ್ರಾರ್ಥಿಗಳೇ ಭರಿಸಬೇಕಾಗಿರುತ್ತದೆ. ಹತ್ತು ವರ್ಷಗಳ ಒಳಪಟ್ಟು ಮತ್ತು 60-65 ವರ್ಷಗಳಿಗೆ ಮೇಲ್ಪಟ್ಟವರಿಗೆ ಹಾಗೂ co-morbidities (ಅನಾರೋಗ್ಯದ/ಕಾಯಿಲೆಯ ಲಕ್ಷಣಗಳು) ಇರುವಂತಹವರಿಗೆ ಯಾತ್ರಾ ಪ್ರದೇಶಕ್ಕೆ ಅನುಮತಿ ಇರುವುದಿಲ್ಲ.
ಬಿಪಿಇಲ್ ಕಾರ್ಡ್, ಆಯಷ್ಮಾನ್ ಕಾರ್ಡ್ ಇತ್ಯಾದಿ ಕಾರ್ಡ್ ಹೊಂದಿರುವವರು ಯಾತ್ರೆಗೆ ತೆರಳುವ ಸಮಯದಲ್ಲಿ ಅದನ್ನು ಹೊಂದಿರಬೇಕು. ತುಪ್ಪದ ಅಭಿಷೇಕ, ಪಂಪಾನದಿ ಸ್ನಾನ, ಸನ್ನಿಧಾನದಲ್ಲಿ ರಾತ್ರಿ ತಂಗುವುದು ಹಾಗೂ ಪಂಪಾ ಮತ್ತು ಗಣಪತಿ ಕೋವಿಲ್‍ಗೆ ಅವಕಾಶವಿರುವುದಿಲ್ಲ. ಯಾತ್ರಾರ್ಥಿಗಳ ಪ್ರಯಾಣಕ್ಕೆ ಎರುವೆಲು ಮತ್ತು ವೇದಸಾರಿಕ್ಕರ ಮಾರ್ಗದಲ್ಲಿ ಮಾತ್ರ ಅವಕಾಶ ಇರುತ್ತದೆ ಎಂದು ಅಧಿಕೃತ ಪ್ರಕಟಣೆ ಹೊರಡಿಸಿದೆ.