Home Uncategorized ಶಬೀರ್ ಖಾನ್

ಶಬೀರ್ ಖಾನ್

31
0

ಮಂಗಳೂರು: ಎಸ್ ಡಿಪಿಐ ವಾರ್ಡ್ ಸಮಿತಿ ಸದಸ್ಯ ಮುಹಮ್ಮದ್ ಶಬೀರ್ ಖಾನ್ (52) ಹೃದಯಾಘಾತದಿಂದ ಗುರುವಾರ ನಿಧನ ಹೊಂದಿದರು.

ಮೂಲತಃ ಅಜ್ಜಿನಡ್ಕ ಕೋಟೆಕಾರ್ ನಿವಾಸಿಯಾಗಿರುವ ಅವರು, ಪ್ರಸ್ತುತ ತೊಕ್ಕೊಟ್ಟುವಿನಲ್ಲಿ ವಾಸವಾಗಿದ್ದರು.

ಸಾಮಾಜಿಕ ಧಾರ್ಮಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿದ್ದ ಇವರು, ಎಸ್ ಡಿಪಿಐ ಕೋಟೆಕಾರು ವಾರ್ಡ್ ಸಮಿತಿಯ ಕೋಶಾಧಿಕಾರಿಯಾಗಿದ್ದು, ಕಿಂಗ್ ಡಮ್ ಟವರ್ ಅಪಾರ್ಟ್ ಮೆಂಟ್ ಸಮಿತಿಯ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಮರ್ಹೂಮ್ ಟಿ.ಕೆ. ಅಬ್ದುಲ್ಲಾ ಮತ್ತು ಮರಿಯಮ್ಮ ದಂಪತಿಯ ಪುತ್ರರಾಗಿರುವ ಇವರು ತಾಯಿ, ಪತ್ನಿ, ಮೂವರು ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಎಸ್ ಡಿಪಿಐ ಸಂತಾಪ: ಪಕ್ಷದ ನಿಷ್ಠಾವಂತ ಕಾರ್ಯಕರ್ತ, ಹಸನ್ಮುಖಿ ವ್ಯಕ್ತಿತ್ವದ ಮುಹಮ್ಮದ್ ಶಬೀರ್ ಅವರ ನಿಧನವು ಪಕ್ಷಕ್ಕೆ ಮತ್ತು ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ, ಬಂದು ಬಳಗಕ್ಕೆ ಅಗಲುವಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಸೃಷ್ಟಿಕರ್ತ ದಯಪಾಲಿಸಿ ಅನುಗ್ರಹಿಸಲಿ ಎಂದು ಎಸ್‌ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಅನ್ವರ್ ಸಾದತ್ ಸಂತಾಪ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here