Home Uncategorized ಶಾಲೆಗೆ ಹೋಗಿದ್ದ 14 ವರ್ಷದ ಬೆಳಗಾವಿಯ ಬಾಲಕಿ ಕಿಡ್ನಾಪ್: ಗುಜರಾತ್​ಗೆ ಕರೆದೊಯ್ದು ಅತ್ಯಾಚಾರ

ಶಾಲೆಗೆ ಹೋಗಿದ್ದ 14 ವರ್ಷದ ಬೆಳಗಾವಿಯ ಬಾಲಕಿ ಕಿಡ್ನಾಪ್: ಗುಜರಾತ್​ಗೆ ಕರೆದೊಯ್ದು ಅತ್ಯಾಚಾರ

20
0

ಬೆಳಗಾವಿ: ಬೆಳಗಾವಿಯ(Belagavi) ಖಾಸಗಿ ಶಾಲೆಯೊಂದರಲ್ಲಿ ವ್ಯಾಸಂಗ ಮಾಡುತ್ತಿದ್ದ 14 ವರ್ಷದ ಬಾಲಕಿಯನ್ನು ಯುವಕನೊಬ್ಬ ಅಪಹರಿಸಿ ಗುಜರಾತ್‌ಗೆ ಕರೆದೊಯ್ದು ಅತ್ಯಾಚಾರ(Rape) ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಕಳೆದ 4 ದಿನಗಳ ಹಿಂದೆ ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಇದೀಗ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಶಾಲೆಗೆ ಹೋಗಿದ್ದ 14 ವರ್ಷದ ಬಾಲಕಿ ವಾಪಸ್ ಮನೆ ಬರದೇ ಕಾಣೆಯಾಗಿದ್ದಳು,.ಇದರಿಂದ ಆಂತಂಕಗೊಂಡ ಬಾಲಕಿ ತಂದೆ, ಬೆಳಗಾವಿಯ ಕ್ಯಾಂಪ್ ಠಾಣೆಯಲ್ಲಿ ಮಗಳು ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಈ ಪ್ರಕರಣದ ತನಿಖೆ ಕೈಗೊಂಡ ಪೊಲೀಸರಿಗೆ ಬಾಲಕಿ ಗುಜರಾತ್​ನ(gujarat) ಅಹಮದಾಬಾದ್​ನಲ್ಲಿರುವುದು ಮಾಹಿತಿ ಸಿಕ್ಕಿದೆ. ಕೂಡಲೇ ಕಾರ್ಯಪ್ರವೃತವಾದ ಖಡೇಬಜಾರ್ ಎಸಿಪಿ ಚಂದ್ರಪ್ಪ ನೇತೃತ್ವದ ತಂಡ, ಆರೋಪಿಯನ್ನು ಬಂಧಿಸಿ ಬಾಲಕಿಯನ್ನು ರಕ್ಷಣೆ ಮಾಡಿ ಬೆಳಗಾವಿಗೆ ಕರೆದುಕೊಂಡು ಬಂದಿದ್ದಾರೆ.

ಇದನ್ನೂ ಓದಿ: ಪತ್ನಿ ಜೊತೆ ಅನೈತಿಕ ಸಂಬಂಧ ಶಂಕೆ; ಒಡಹುಟ್ಟಿದ ಅಣ್ಣನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಂದ ತಮ್ಮ

ಪೋಷಕರೊಂದಿಗೆ ಬೆಳಗಾವಿಯಲ್ಲಿ ವಾಸವಿದ್ದ ಗುಜರಾತ್​ ಮೂಲದ 19 ವರ್ಷದ ಆಕಾಶ್ ದೋಡಿಯಾ ಎನ್ನುವ ಯುವಕ, ಬಾಲಕಿಯನ್ನು ಅಪಹರಿಸಿ ಗುಜರಾತ್​ನ ಅಹಮದಾಬಾದ್​ನ ತಮ್ಮ ಸಂಬಂಧಿಕರ ಮನೆಗೆ ಕರೆದುಕೊಂಡು ಹೋಗಿದ್ದಾನೆ. ನಂತರ ಎರಡು ದಿನ ನಿರಂತರವಾಗಿ ಬಾಲಕಿ ಮೇಲೆ ನಿರಂತರವಾಗಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದ್ದು. ಈ ಬಗ್ಗೆ ಪೊಲೀಸರು ಆಕಾಶ್ ದೋಡಿಯಾ ಪೋಕ್ಸೋ ಕಾಯ್ದೆ ದೂರು ದಾಖಲಿಸಿಕೊಂಡು ಜೈಲಿಗೆ ಕಳುಹಿಸಿದ್ದಾರೆ.

ಇನ್ನು ಸಂತ್ರಸ್ತೆ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ತನಿಖೆ ಚುರುಕುಗೊಳಿಸಿದ್ದು, ಆರೋಪಿ ಬಾಲಕಿ ಮೇಲೆ ಲೌಂಗಿಕ ದೌರ್ಜನ್ಯ ಎಸಗಿದ್ದಾನೋ ಅಥವಾ ಇಲ್ಲ ಎನ್ನುವ ಬಗ್ಗೆ ಸಂತ್ರಸ್ತೆಯ ವೈದ್ಯಕೀಯ ಪರೀಕ್ಷೆ ವರದಿ ಬಂದ ಬಳಿಕ ಸತ್ಯಾಸತ್ಯತೆ ತಿಳಿಯಲಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

LEAVE A REPLY

Please enter your comment!
Please enter your name here