Home ಕರ್ನಾಟಕ ಶಿವಮೊಗ್ಗದಲ್ಲಿ ಮುಸ್ಲಿಮರಿಂದ ಸಂಭ್ರಮ, ಸಡಗರದ ಈದುಲ್‌ ಫಿತರ್ ಆಚರಣೆ

ಶಿವಮೊಗ್ಗದಲ್ಲಿ ಮುಸ್ಲಿಮರಿಂದ ಸಂಭ್ರಮ, ಸಡಗರದ ಈದುಲ್‌ ಫಿತರ್ ಆಚರಣೆ

33
0

ಶಿವಮೊಗ್ಗ: ಒಂದು ತಿಂಗಳ ರಮಝಾನ್ ಉಪವಾಸ ಮುಗಿಸಿ ಮುಸ್ಲಿಂ ಸಮುದಾಯ ಗುರುವಾರ ನಗರ ಸೇರಿದಂತೆ ಜಿಲ್ಲೆಯಾದ್ಯಂತ‌ ಸಂಭ್ರಮ, ಸಡಗರದಿಂದ ಈದುಲ್‌ ಫಿತರ್ ಆಚರಣೆ ಮಾಡಿದರು.

ಹೊಸ ಉಡುಗೆ ತೊಟ್ಟಿದ್ದ ಸಾವಿರಾರು ಮುಸ್ಲಿಂ ಬಾಂಧವರು ನಗರದ ಸವಳಂಗ ರಸ್ತೆಯ ಈದ್ಗಾ ಮೈದಾನ ಹಾಗೂ ದ್ರೌಪದ ವೃತ್ತದಲ್ಲಿರುವ ಮೈದಾನ ಮತ್ತು ಗೋಪಾಳದಲ್ಲಿನ ಮೈದಾನದಲ್ಲಿ ಬೆಳಿಗ್ಗೆ 10ಕ್ಕೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು. 

ಮಕ್ಕಳು, ವಯಸ್ಕರರ ಆದಿಯಾಗಿ ಪರಸ್ಪರ ಒಬ್ಬರನ್ನೊಬ್ಬರು ಆಲಂಗಿಸಿಕೊಂಡು ಈದ್ ಶುಭಾಶಯ ವಿನಿಮಯ ಮಾಡಿಕೊಂಡರು.

LEAVE A REPLY

Please enter your comment!
Please enter your name here