Home Uncategorized ಶಿವಮೊಗ್ಗ: ನ್ಯಾಷನಲ್‌ ಸಂಸ್ಥೆಯ ಮೇಲೆ ಈಡಿ ದಾಳಿ

ಶಿವಮೊಗ್ಗ: ನ್ಯಾಷನಲ್‌ ಸಂಸ್ಥೆಯ ಮೇಲೆ ಈಡಿ ದಾಳಿ

20
0

ಶಿವಮೊಗ್ಗ: ತೀರ್ಥಹಳ್ಳಿಯ ‌ನ್ಯಾಷನಲ್ ಸಂಸ್ಥೆ ಮೇಲೆ ಇಡಿ(ಜಾರಿ ನಿರ್ದೇಶನಾಲಯ) ಅಧಿಕಾರಿಗಳು ಮಂಗಳವಾರ ಬೆಳಿಗ್ಗೆ ದಿಢೀರ್ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.

ಸುಲೈಮಾನ್ ಎಂಬವರಿಗೆ ಸೇರಿದ ನ್ಯಾಷನಲ್ ಸಂಸ್ಥೆಯ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ನ್ಯಾಷನಲ್ ಸಂಸ್ಥೆಯ ಗೋಲ್ಡ್ ಪ್ಯಾಲೇಸ್, ಸೂಪರ್ ಬಜಾರ್, ಇಂಡಿಯನ್ ಗ್ಯಾಸ್ ಗೋಡೌನ್, ಹಾಗೂ ಸುಲೈಮಾನ್ ಅವರ ನಿವಾಸದ ಮನೆ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ.

 ಕನ್ ಸ್ಟ್ರಕ್ಷನ್ ವ್ಯವಹಾರ ನಡೆಸುತ್ತಿರುವ ಸುಲೈಮಾನ್ ಪುತ್ರ ಶರೀಫ್, ಶಿವಮೊಗ್ಗದ ವಿಮಾನ ನಿಲ್ದಾಣ ಕಾಮಗಾರಿ ಮಾಡಿದ್ದರು ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here