Home Uncategorized ಶೆಟ್ಟರ್, ಸವದಿ ಕಾಂಗ್ರೆಸ್ ಸೇರಿದ್ದು ನಮಗೆ ಪ್ಲಸ್ ಆಗತ್ತೆ, ಸಿದ್ದರಾಮಯ್ಯ ಲಿಂಗಾಯತ ಹೇಳಿಕೆಯನ್ನು ನಾನು ತಿರುಚಿಲ್ಲ:...

ಶೆಟ್ಟರ್, ಸವದಿ ಕಾಂಗ್ರೆಸ್ ಸೇರಿದ್ದು ನಮಗೆ ಪ್ಲಸ್ ಆಗತ್ತೆ, ಸಿದ್ದರಾಮಯ್ಯ ಲಿಂಗಾಯತ ಹೇಳಿಕೆಯನ್ನು ನಾನು ತಿರುಚಿಲ್ಲ: ಬೊಮ್ಮಾಯಿ

35
0

ಬಿಜೆಪಿ ತೊರೆದು ಹೋದ ರೆಬೆಲ್ಸ್ ನಾಯಕರ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ದಾವಣಗೆರೆಯಲ್ಲಿಂದು ಮಾತನಾಡಿದ ಅವರು, ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್ ಬಿಜೆಪಿ ತೊರೆದಿದ್ದು ನಮಗೆ ಚುನಾವಣೆಯಲ್ಲಿ ಪ್ಲಸ್ ಪಾಯಿಂಟ್ ಆಗುತ್ತದೆ ಎಂದು ಹೇಳಿದ್ದಾರೆ.  ದಾವಣಗೆರೆ: ಬಿಜೆಪಿ ತೊರೆದು ಹೋದ ರೆಬೆಲ್ಸ್ ನಾಯಕರ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ. ದಾವಣಗೆರೆಯಲ್ಲಿಂದು ಮಾತನಾಡಿದ ಅವರು, ಲಕ್ಷ್ಮಣ ಸವದಿ, ಜಗದೀಶ್ ಶೆಟ್ಟರ್ ಬಿಜೆಪಿ ತೊರೆದಿದ್ದು ನಮಗೆ ಚುನಾವಣೆಯಲ್ಲಿ ಪ್ಲಸ್ ಪಾಯಿಂಟ್ ಆಗುತ್ತದೆ ಎಂದು ಹೇಳಿದ್ದಾರೆ. 

ಇಂದು ನಾಮಪತ್ರ ಹಿಂತೆಗೆತಕ್ಕೆ ಕೊನೆಯ ದಿನವಾಗಿದ್ದು ಇಂದಿನಿಂದ ನಂತರ ಪೂರ್ಣ ಪ್ರಮಾಣದಲ್ಲಿ ಅಭ್ಯರ್ಥಿಗಳ ಪ್ರಚಾರ ಆರಂಭವಾಗಲಿದೆ.ಈ ಬಾರಿ ಜನರು ಬಹಳಷ್ಟು ವಿಚಾರ ಮಾಡಿ ತೀರ್ಮಾನಕ್ಕೆ ಬರುತ್ತಿದ್ದಾರೆ ಎನಿಸುತ್ತಿದೆ. ಜನರ ಬದುಕಿಗೆ ಬಹಳ ಮುಖ್ಯ, ಅವರ ಜೀವನ ಗುಣಮಟ್ಟ ಹೆಚ್ಚಳ ಮುಖ್ಯವಾಗುತ್ತದೆ. ಜನರ ಕೆಲಸ ಮಾಡಿಕೊಡುವವರಿಗೆ ಜನಬೆಂಬಲ ಸಿಗುತ್ತದೆ ಎಂದರು.

ಇದನ್ನೂ ಓದಿ: ಬಿಜೆಪಿ ‘ಟ್ರಿಕಿ’ ಗೇಮ್‌ಪ್ಲಾನ್: ಲಿಂಗಾಯತರು ಬೆಂಬಲಿಸಿದ್ದು ಯಡಿಯೂರಪ್ಪಗಾಗಿ ಹೊರತು ಸಿದ್ಧಾಂತಕ್ಕಲ್ಲ; ಪ್ರಜಾತಂತ್ರದಲ್ಲಿ ‘ಜಾತಿ ಪ್ರಭುತ್ವ’ದ್ದೆ ಮೇಲುಗೈ!

ಸಿದ್ದರಾಮಯ್ಯ ಹೇಳಿಕೆಯನ್ನು ತಿರುಚಿಲ್ಲ: ಲಿಂಗಾಯತರ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯನವರು ನೀಡಿರುವ ಹೇಳಿಕೆಯನ್ನು ಯಾರೂ ತಿರುಚಿಲ್ಲ. ಅವರು ಏನು ಹೇಳಿದ್ದಾರೆ ಎಂಬುದಕ್ಕೆ ವಿಡಿಯೊ ಸಾಕ್ಷಿಯಿದೆ, ಅವರು ತಮ್ಮ ಹೇಳಿಕೆಯನ್ನು ಬದಲಾಯಿಸಿಕೊಂಡಿದ್ದಾರೆ. ಜನರು ದಡ್ಡರಲ್ಲ ಎಂದರು.

LEAVE A REPLY

Please enter your comment!
Please enter your name here