Home Uncategorized ಷೇರುಪೇಟೆ ಹೂಡಿಕೆದಾರರಿಗೆ ಉತ್ತಮ ಅವಕಾಶ: ಈ ವಾರ ಆರಂಭವಾಗಲಿವೆ ಐದು ಕಂಪನಿಗಳ ಐಪಿಒ

ಷೇರುಪೇಟೆ ಹೂಡಿಕೆದಾರರಿಗೆ ಉತ್ತಮ ಅವಕಾಶ: ಈ ವಾರ ಆರಂಭವಾಗಲಿವೆ ಐದು ಕಂಪನಿಗಳ ಐಪಿಒ

42
0

ಮುಂಬಯಿ: ಷೇರು ಮಾರುಕಟ್ಟೆಯಲ್ಲಿ ಈ ವಾರ ಷೇರು ಹೂಡಿಕೆದಾರರಿಗೆ ಲಾಭ ಗಳಿಸಲು ಹಲವಾರು ಅವಕಾಶಗಳು ತೆರೆದುಕೊಳ್ಳಲಿವೆ. ಕೆಲವು ಕಂಪನಿಗಳು ಈ ವಾರ ಷೇರು ಮಾರುಕಟ್ಟೆಯಲ್ಲಿ ಲಿಸ್ಟಿಂಗ್‌ ಆಗಲಿದ್ದರೆ, 5 ಕಂಪನಿಗಳ ಆರಂಭಿಕ ಸಾರ್ವಜನಿಕ ಷೇರು ಕೊಡುಗೆ (ಐಪಿಒ)ಗಳು ಚಂದಾದಾರಿಕೆಗೆ ತೆರೆದುಕೊಳ್ಳಲಿವೆ. ಈ ಐಪಿಒಗಳ ಮೂಲಕ ಒಟ್ಟು 938 ಕೋಟಿ ರೂ. ಸಂಗ್ರಹಿಸುವ ಯೋಜನೆಯನ್ನು ಕಂಪನಿಗಳು ಇದೆ.

ಈ ವಾರ ಬ್ಲ್ಯೂಜೆಟ್‌ ಹೆಲ್ತ್‌ಕೇರ್‌ ಹಾಗೂ ಎಸ್‌ಎಂಇ ವಲಯದ 4 ಐಪಿಒಗಳು ಬರಲಿವೆ. ಇದರಲ್ಲಿ ಪ್ಯಾರಾಗಾನ್‌ ಫೈನ್‌, ಶಾಂತಲಾ ಎಫ್‌ಎಂಸಿಜಿ ಪ್ರೊಡಕ್ಟ್ಸ್‌, ಮೈತ್ರೇಯ ಮೆಡಿಕೇರ್‌ ಮತ್ತು ಆನ್‌ ಡೋರ್‌ ಕಾನ್ಸೆಪ್ಟ್ಸ್‌ ಸೇರಿವೆ. ಪ್ಯಾರಾಗಾನ್‌ ಫೈನ್‌ 51.66 ಕೋಟಿ ರೂ. ಮೌಲ್ಯದ 51.66 ಲಕ್ಷ ಹೊಸ ಈಕ್ವಿಟಿ ಷೇರುಗಳನ್ನು ವಿತರಿಸುತ್ತಿದೆ. ಈ ಐಪಿಒ ಅಕ್ಟೋಬರ್‌ 26 ರಂದು ತೆರೆಯಲಿದ್ದು, ಅ. 30ರಂದು ಮುಕ್ತಾಯವಾಗಲಿದೆ.

ಶಾಂತಲಾ ಎಫ್‌ಎಂಸಿಜಿ ಪ್ರಾಡಕ್ಸ್ಟ್‌ ಮತ್ತು ಆನ್‌ ಡೋರ್‌ಕಾನ್ಸೆಪ್ಟ್ಸ್‌ ಕಂಪನಿಗಳು ಆರಂಭಿಕ ಸಾರ್ವಜನಿಕ ಷೇರು ಕೊಡುಗೆಯ ಮೂಲಕ ಕ್ರಮವಾಗಿ 16 ಕೋಟಿ ರೂ. ಮತ್ತು 31 ಕೋಟಿ ರೂ. ಸಂಗ್ರಹಿಸಲು ಯೋಜಿಸುತ್ತಿವೆ. ಶಾಂತಲಾ ಐಪಿಒ ಅಕ್ಟೋಬರ್‌ 27ರಂದು ತೆರೆಯಲಿದೆ. ಆನ್‌-ಡೋರ್‌ ಕಾನ್ಸೆಪ್ಟ್‌ ಅ. 23ರಂದು ಅಂದರೆ ಸೋಮವಾರವೇ ಆರಂಭವಾಗಿದೆ.

ಬ್ಲ್ಯೂಜೆಟ್‌ ಹೆಲ್ತ್‌ಕೇರ್‌ನ ಆರಂಭಿಕ ಸಾರ್ವಜನಿಕ ಷೇರು ಕೊಡುಗೆ ಇದೇ ಅಕ್ಟೋಬರ್‌ 25ರಂದು ಚಂದಾದಾರಿಕೆಗಾಗಿ ತೆರೆಯಲಿದೆ. ಮತ್ತು ಇದು ಅಕ್ಟೋಬರ್‌ 27ರಂದು ಮುಕ್ತಾಯಗೊಳ್ಳಲಿದೆ. ಕಂಪನಿಯು ಪ್ರತಿ ಷೇರಿನ ಬೆಲೆಯನ್ನು 329 – 346 ರೂ.ಗೆ ನಿಗದಿಪಡಿಸಿದೆ. ಈ ಮೂಲಕ ಕಂಪನಿಯು 840 ಕೋಟಿ ರೂ. ಮೊತ್ತವನ್ನು ಸಂಗ್ರಹಿಸುವ ಗುರಿ ಹೊಂದಿದೆ

The post ಷೇರುಪೇಟೆ ಹೂಡಿಕೆದಾರರಿಗೆ ಉತ್ತಮ ಅವಕಾಶ: ಈ ವಾರ ಆರಂಭವಾಗಲಿವೆ ಐದು ಕಂಪನಿಗಳ ಐಪಿಒ appeared first on Ain Live News.

LEAVE A REPLY

Please enter your comment!
Please enter your name here