Home Uncategorized ಸಂಗೀತ ನಗರಿ ರುದ್ರಪಟ್ಟಣ ಸಮಗ್ರ ಅಭಿವೃದ್ಧಿಯಾಗಲಿದೆ: ಎ ಮಂಜು

ಸಂಗೀತ ನಗರಿ ರುದ್ರಪಟ್ಟಣ ಸಮಗ್ರ ಅಭಿವೃದ್ಧಿಯಾಗಲಿದೆ: ಎ ಮಂಜು

32
0

ಅರಕಲಗೂಡು ತಾಲೂಕಿನ ಸಂಗೀತ ಗ್ರಾಮ ಎಂದು ಕರೆಯಲ್ಪಡುವ ರುದ್ರಪಟ್ಟಣವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಅರಕಲಗೂಡು ಜೆಡಿಎಸ್ ಶಾಸಕ ಎ ಮಂಜು ಅವರು ಹೇಳಿದ್ದಾರೆ. ಹಾಸನ: ಅರಕಲಗೂಡು ತಾಲೂಕಿನ ಸಂಗೀತ ಗ್ರಾಮ ಎಂದು ಕರೆಯಲ್ಪಡುವ ರುದ್ರಪಟ್ಟಣವನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುವುದು ಎಂದು ಅರಕಲಗೂಡು ಜೆಡಿಎಸ್ ಶಾಸಕ ಎ ಮಂಜು ಅವರು ಹೇಳಿದ್ದಾರೆ.

ರುದ್ರಪಟ್ಟಣದಲ್ಲಿ ವಾರ್ಷಿಕ ಸಂಗೀತ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಎ ಮಂಜು, ಸಂಗೀತ ನಗರಿ ರುದ್ರಪಟ್ಟಣದಲ್ಲಿ ಸಂಗೀತ ಶಾಲೆ ಸ್ಥಾಪಿಸಲು ಕ್ರಮಕೈಗೊಳ್ಳಲಾಗುವುದು ಎಂದರು.

ಇದನ್ನು ಓದಿ: ಜೆಡಿಎಸ್ ಸೇರುವುದಕ್ಕೂ ಮುನ್ನವೇ ಸ್ವಗ್ರಾಮದಿಂದ ಎ ಮಂಜು ಪ್ರಚಾರ ಆರಂಭ

ತಂಬೂರಿ[ಸಂಗೀತ ವಾದ್ಯ] ಆಕಾರದಲ್ಲಿ ದೇವಾಲಯವನ್ನು ನಿರ್ಮಿಸಿದ ಆರ್‌ಕೆ ಪದ್ಮನಾಭ ಅವರನ್ನು ಶ್ಲಾಘಿಸಿದ ಎ ಮಂಜು, ರುದ್ರಪಟ್ಟಣದಲ್ಲಿ ದಶಕಗಳಿಂದ ವಾರ್ಷಿಕ ಸಂಗೀತೋತ್ಸವ ನಡೆಸುತ್ತಿದ್ದಾರೆ. ವಿಶ್ವವಿಖ್ಯಾತ ಸಂಗೀತಗಾರರ ಕೊಡುಗೆಯಿಂದ ರುದ್ರಪಟ್ಟಣವು ವಿಶ್ವ ಭೂಪಟದಲ್ಲಿ ಗುರುತಿಸಲ್ಪಟ್ಟಿದೆ ಎಂದರು.

ಅಕ್ಕಪಕ್ಕದ ಗ್ರಾಮಗಳಿಗೆ ನದಿ ನೀರು ತರುವ ಬಹುಗ್ರಾಮ ಯೋಜನೆ ಸೇರಿದಂತೆ ತಾವು ಸಚಿವರಾಗಿದ್ದಾಗ ಮಾಡಿದ ಹಲವು ಅಭಿವೃದ್ಧಿ ಕಾರ್ಯಗಳನ್ನು ಸ್ಮರಿಸಿದ ಮಾಜಿ ಸಚಿವರು, ಕಾಂಗ್ರೆಸ್ ಮತ್ತು ಬಿಜೆಪಿ ತೊರೆದು ಜೆಡಿಎಸ್ ನಿಂದ ಸ್ಪರ್ಧಿಸಿದರೂ ಜನ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿದ್ದಾರೆ ಎಂದು ಹೇಳಿದರು.

ಅಪ್ಪ ಮತ್ತು ಮಕ್ಕಳು ಒಂದೇ ಪಕ್ಷದಲ್ಲಿರುವುದು ಸಾಮಾನ್ಯ. ಆದರೆ ನಾವಿಬ್ಬರು ಅಪ್ಪ, ಮಕ್ಕಳು ಅಕ್ಕಪಕ್ಕದ ತಾಲೂಕಿನಲ್ಲಿ ಬೇರೆ ಬೇರೆ ಪಕ್ಷಗಳಿಂದ ಸ್ಪರ್ಧಿಸಿ ಗೆಲುವು ಸಾಧಿಸಿರುವುದು ನನ್ನ ಮತ್ತು ಮಂಥರ್ ಗೌಡರ ವಿಶೇಷತೆ ಎಂದು ಎ. ಮಂಜು ಹೇಳಿದರು.

LEAVE A REPLY

Please enter your comment!
Please enter your name here