Home Uncategorized ಸಂಪೂರ್ಣವಾಗಿ ಮನುಷ್ಯನ ಮಲದಿಂದ ತಯಾರಿಸಿದ ವಿಮಾನ ಇಂಧನವನ್ನು ಸಂಶೋಧಿಸಿದ ವಿಮಾನ ಯಾನ ಸಂಸ್ಥೆ

ಸಂಪೂರ್ಣವಾಗಿ ಮನುಷ್ಯನ ಮಲದಿಂದ ತಯಾರಿಸಿದ ವಿಮಾನ ಇಂಧನವನ್ನು ಸಂಶೋಧಿಸಿದ ವಿಮಾನ ಯಾನ ಸಂಸ್ಥೆ

49
0

ಹೊಸದಿಲ್ಲಿ: ಸಂಪೂರ್ಣವಾಗಿ ಮನುಷ್ಯನ ಮಲ ವಿಸರ್ಜನೆಯಿಂದ ವೈಮಾನಿಕ ಇಂಧನವನ್ನು ನೂತನ ವಿಮಾನ ಯಾನ ಸಂಸ್ಥೆಯೊಂದು ಸಂಶೋಧಿಸಿದೆ. ಗ್ಲೌಸ್ಟರ್ ಶೈರ್ ನಲ್ಲಿನ ಪ್ರಯೋಗಾಲಯದಲ್ಲಿ ತ್ಯಾಜ್ಯವನ್ನು ಸೀಮೆ ಎಣ್ಣೆಯಾಗಿ ಪರಿವರ್ತಿಸುವಲ್ಲಿ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ ಎಂದು BBC ಸುದ್ದಿ ಸಂಸ್ಥೆ ವರದಿ ಮಾಡಿದೆ.

“ನಾವು ಬದಲಿ ಇಂಧನಕ್ಕಾಗಿ ವ್ಯಾಪಕವಾಗಿ ದೊರೆಯುವ ಹಾಗೂ ಕಡಿಮೆ ಮೌಲ್ಯದ ಉತ್ಪನ್ನಗಳನ್ನು ಬಳಸಬೇಕಿತ್ತು ಮತ್ತು ಖಂಡಿತವಾಗಿ ಮನುಷ್ಯನ ಮಲವು ವ್ಯಾಪಕವಾಗಿ ದೊರೆಯುವ ಉತ್ಪನ್ನವಾಗಿದೆ” ಎಂದು ಫೈರ್ ಫ್ಲೈ ಗ್ರೀನ್ ಫ್ಲುಯೆಲ್ಸ್ ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೇಮ್ಸ್ ಹೈಗೇಟ್ ಹೇಳಿದ್ದಾರೆ.

ಈ ಇಂಧನದೊಂದಿಗೆ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸಿರುವ ಅಂತಾರಾಷ್ಟ್ರೀಯ ವಿಮಾನ ಯಾನ ನಿಯಂತ್ರಕರು, ಈ ಇಂಧನವು ಬಹುತೇಕ ಪಳೆಯುಳಿಕೆ ವಿಮಾನ ಇಂಧನವನ್ನೇ ಹೋಲುತ್ತದೆ ಎಂದು ಹೇಳಿದ್ದಾರೆ. ಕ್ರ್ಯಾನ್ ಫೀಲ್ಡ್ ವಿಶ‍್ವವಿದ್ಯಾಲಯದ ಸಹಭಾಗಿತ್ವದಲ್ಲಿ ಫೈರ್ ಫ್ಲೈ ಸಂಸ್ಥೆಯು ಇಂಧನದ ಮೇಲಿನ ಇಂಗಾಲದ ಚಕ್ರದ ಪರಿಣಾಮವನ್ನು ಮೌಲ್ಯಮಾಪನ ಮಾಡುವ ಪ್ರಯೋಗ ನಡೆಸಿತ್ತು. ಈ ಪ್ರಯೋಗಗಳು ಫೈರ್ ಫ್ಲೈ ಸಂಶೋಧಿಸಿರುವ ಇಂಧನವು ಹಾಲಿ ಪ್ರಮಾಣೀಕೃತ ವೈಮಾನಿಕ ಇಂಧನಕ್ಕಿಂತ ಶೇ. 90ರಷ್ಟು ಕಡಿಮೆ ಇಂಗಾಲದ ಹೆಜ್ಜೆಗಳನ್ನು ಮೂಡಿಸುತ್ತದೆ ಎಂದು ದೃಢಪಡಿಸಿವೆ.

ಗ್ಲೌಸೆಸ್ಟರ್ ಶೈರ್ ಪ್ರಯೋಗಾಲಯದಲ್ಲಿ ಕಡಿಮೆ ಇಂಗಾಲದ ಇಂಧನವನ್ನು ಸಂಶೋಧಿಸಲು ಎರಡು ದಶಕಗಳನ್ನು ವ್ಯಯಿಸಿರುವ ಹೈಗೇಟ್, ಹೊಸ ಇಂಧನವು ಪಳೆಯುಳಿಕೆ ಆಧಾರಿತ ಸೀಮೆಎಣ್ಣೆಯೊಂದಿಗೆ ರಾಸಾಯನಿಕ ಹೋಲಿಕೆಗಳನ್ನು ಹೊಂದಿದ್ದರೂ, ಈ ಇಂಧನವು ಯಾವುದೇ ಪಳೆಯುಳಿಕೆ ಇಂಗಾಲವನ್ನು ಹೊಂದಿಲ್ಲದೆ ಇರುವುದರಿಂದ ಪಳೆಯುಳಿಕೆ ಮುಕ್ತ ಇಂಧನವಾಗಿದೆ ಎಂದು ಶ್ಲಾಘಿಸಿದ್ದಾರೆ.

ನೂತನ ಜೈವಿಕ ಸೀಮೆಎಣ್ಣೆಯನ್ನು ವಾಷಿಂಗ್ಟನ್ ಸ್ಟೇಟ್ ಯೂನಿವರ್ಸಿಟಿಯೊಂದಿಗೆ ಕಾರ್ಯಾಚರಿಸುತ್ತಿರುವ ಜರ್ಮನ್ ಏರೋಸ್ಪೇಸ್ ಸೆಂಟರ್ ನಲ್ಲಿರುವ ಡಿಎಲ್ಆರ್ ಇನ್ಸ್ಟಿಟ್ಯೂಟ್ ಆಫ್ ಕಂಬಸ್ಚನ್ ಟೆಕ್ನಾಲಜಿಯಲ್ಲಿ ಸ್ವತಂತ್ರವಾಗಿ ಪರೀಕ್ಷಿಸಲಾಗಿದೆ.

LEAVE A REPLY

Please enter your comment!
Please enter your name here