ಬೆಂಗಳೂರು: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ತಮ್ಮನ್ನು ಭೇಟಿ ಮಾಡಲು ಬರುವವರಿಂದ ಪುಷ್ಪಗುಚ್ಛ, ಹೂಮಾಲೆ ಮತ್ತು ಶಾಲು ಸ್ವೀಕರಿಸುತ್ತಿಲ್ಲ. ಬದಲಾಗಿ, ಗ್ರಾಮೀಣ ಗ್ರಂಥಾಲಯಗಳಿಗೆ ನೀಡಲು ಉಡುಗೊರೆಯಾಗಿ ಪುಸ್ತಕಗಳನ್ನು ನೀಡುವಂತೆ ವಿನಂತಿಸಿಕೊಂಡಿದ್ದರು.
ತಮಗೆ ಉಡುಗೊರೆಯಾಗಿ ಬಂದ ಪುಸ್ತಕಗಳೆಲ್ಲವನ್ನು ಪ್ರಿಯಾಂಕ್ ಖರ್ಗೆ ಶೇಖರಿಸುತ್ತಾ ಬಂದರು. ಕಳೆದ ಆರು ತಿಂಗಳಲ್ಲಿ ಬಂದ ಎಲ್ಲ ಪುಸ್ತಕಗಳನ್ನು ಸಂಕ್ರಾಂತಿ ಹಬ್ಬದ ದಿನದಂದು ತಾವೇ ಒಂದೆಡೆ ಜೋಡಿಸಿಟ್ಟು ಸಂಭ್ರಮಿಸಿದರು. ಈ ಪುಸ್ತಕಗಳನ್ನು ಸಚಿವರು ಗ್ರಾಮ ಪಂಚಾಯತಿ ಗ್ರಂಥಾಲಯಗಳಿಗೆ ಕಳುಹಿಸಿಕೊಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.