ಬೆಳಗಾವಿ;- ವಿದೇಶ ಪ್ರವಾಸಕ್ಕೆ ಹೋಗುವ ಚಿಂತನೆ ಇದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಹೊರ ದೇಶ ಪ್ರವಾಸಕ್ಕೆ ಹೋಗುವ ವಿಚಾರ ಇದೆ. ಹೀಗೆಯೇ ಅಂತ ನಿರ್ಧಾರ ಮಾಡಿಲ್ಲ, ಅದಕ್ಕೆ ಸಮಯ ಬರಬೇಕು. ಪ್ರವಾಸ ಮಾಡುವ ಪ್ಲ್ಯಾನ್ ಇದ್ದೇ ಇದೆ ಎಂದು ಹೇಳಿದ್ದಾರೆ.
ಬಹಳಷ್ಟು ಜನ ಪ್ರವಾಸಕ್ಕೆ ಹೋಗುತ್ತಾರೆ, ನಾವೂ ಹೋಗುತ್ತೇವೆ. ಪಕ್ಷದ ಅಧ್ಯಕ್ಷರು, ಸಿಎಂ ಗಮನಕ್ಕೆ ತಂದು ಪ್ರವಾಸಕ್ಕೆ ಹೋಗ್ತೇವೆ ಎಂದರು.
ಸತೀಶ್ ಜಾರಕಿಹೊಳಿಗೆ ಕಾಂಗ್ರೆಸ್ನಲ್ಲಿ ಹಿಂಸೆ ಆಗ್ತಿದೆ ಎಂಬ ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಆ ರೀತಿ ಏನೂ ಆಗುತ್ತಿಲ್ಲ. ಯಾವುದೇ ಗೊಂದಲಕ್ಕೂ ನಮ್ಮ ಪಕ್ಷದಲ್ಲಿ ಅವಕಾಶ ಇಲ್ಲ ಎಂದರು.
The post ಸಧ್ಯಕ್ಕೆ ವಿದೇಶ ಪ್ರವಾಸಕ್ಕೆ ಹೋಗುವ ಚಿಂತನೆ ಇದೆ – ಸತೀಶ್ ಜಾರಕಿಹೊಳಿ appeared first on Ain Live News.
