ಸ್ಯಾಮ್-ನಾಗಚೈತನ್ಯ ಡಿವೋರ್ಸ್ (Divorce) ಪಡೆದು 3 ವರ್ಷಗಳಾಗಿದೆ. ಆದರೆ ಮತ್ತೆ ಒಂದಾಗುವ ಮುನ್ಸೂಚನೆ ಸಿಕ್ಕಿದೆ. ಇಬ್ಬರು ಜೊತೆಯಾಗಿದ್ದಾಗ ಹ್ಯಾಶ್ ಎಂಬ ಹೆಸರಿನ ಫ್ರೆಂಚ್ ಬುಲ್ ಡಾಗ್ ಅನ್ನು ಬರಮಾಡಿಕೊಂಡಿದ್ದರು. ಡಿವೋರ್ಸ್ ಬಳಿಕ ಸಮಂತಾ, ಆಗಾಗ ‘ಹ್ಯಾಶ್’ (Hash) ಜೊತೆಗಿನ ಫೋಟೋವನ್ನ ಆಗಾಗ ಹಂಚಿಕೊಳ್ಳುತ್ತಿದ್ದರು.
ಈಗ ಹ್ಯಾಶ್ ಜೊತೆಯಿರುವ ಫೋಟೋವನ್ನ ನಾಗಚೈತನ್ಯ ಶೇರ್ ಮಾಡಿದ್ದಾರೆ. ಹ್ಯಾಶ್ ಕಾರಿನಲ್ಲಿ ಕುಳಿತು ಸೂರ್ಯಾಸ್ತವನ್ನು ಎಂಜಾಯ್ ಮಾಡುತ್ತಿರುವ ಫೋಟೋ ಹಂಚಿಕೊಂಡು, ‘ವೆಬ್’ ಎಂದು ಅಡಿಬರಹ ನೀಡಿ ನಟ ಪೋಸ್ಟ್ ಮಾಡಿದ್ದಾರೆ
ಈ ಪೋಸ್ಟ್ ನೋಡ್ತಿದ್ದಂತೆ, ಇಬ್ಬರು ಸಂಬಂಧ ಸುಧಾರಿಸುವ ಹಂತದಲ್ಲಿದ್ದಾರೆ ಎನ್ನಲಾಗುತ್ತಿದೆ. ಮತ್ತೆ ಜೊತೆಯಾಗುವ ಸೂಚನೆ ಕೊಡ್ತಿದ್ದಾರೆ ಎಂದೇ ಫ್ಯಾನ್ಸ್ ಊಹೆ ಮಾಡ್ತಿದ್ದಾರೆ.
ಕೆಲ ದಿನಗಳ ಹಿಂದೆ ಸಮಂತಾ(Samantha) ಇನ್ಸ್ಟಾಗ್ರಾಂನಲ್ಲಿ ಮಾಜಿ ಪತಿ ಜೊತೆಗಿನ ಫೋಟೋ ರೀ ಸ್ಟೋರ್ ಆಗಿತ್ತು. ಈಗ ನಾಗಚೈತನ್ಯ ಪೋಸ್ಟ್ ನೋಡಿ ಇಲ್ಲಿ ಏನೋ ಮತ್ತೆ ಸಮ್‌ಥಿಂಗ್ ಸಮ್‌ಥಿಂಗ್ ನಡೆಯುತ್ತಿದೆ ಎಂದು ಖುಷಿಪಡ್ತಿದ್ದಾರೆ ಫ್ಯಾನ್ಸ್. ಈ ಬಗ್ಗೆ ಸ್ಯಾಮ್-ಚೈ ಪ್ರತಿಕ್ರಿಯೆ ನೀಡುವವರೆಗೂ ಕಾಯಬೇಕಿದೆ.
The post ಸಮಂತಾ-ನಾಗಚೈತನ್ಯ ನಡುವೆ ಪ್ಯಾಚ್ ಅಪ್ ಆಗಿದ್ಯಾ?: ಸದ್ಯದಲ್ಲೇ ಸಿಗಲಿದೆ ಗುಡ್ ನ್ಯೂಸ್! appeared first on Ain Live News.