Home Uncategorized ಸಮಂತಾ ಬಗ್ಗೆ ಹುಟ್ಟಿಕೊಂಡಿತು ಮತ್ತಷ್ಟು ವದಂತಿ; ಬೇಸರದಲ್ಲೇ ಸ್ಪಷ್ಟನೆ ನೀಡಿದ ತಂಡ

ಸಮಂತಾ ಬಗ್ಗೆ ಹುಟ್ಟಿಕೊಂಡಿತು ಮತ್ತಷ್ಟು ವದಂತಿ; ಬೇಸರದಲ್ಲೇ ಸ್ಪಷ್ಟನೆ ನೀಡಿದ ತಂಡ

27
0

ನಟಿ ಸಮಂತಾ (Samantha) ಅವರು ಇತ್ತೀಚೆಗೆ ಸಿನಿಮಾಗಿಂತ ವೈಯಕ್ತಿಕ ವಿಚಾರಕ್ಕೆ ಹೆಚ್ಚು ಹೈಲೈಟ್ ಆಗುತ್ತಿದ್ದಾರೆ. ಮೊದಲು ವಿಚ್ಛೇದನ ವಿಚಾರಕ್ಕೆ ಸಮಂತಾ ಹೆಚ್ಚು ಸುದ್ದಿ ಆದರು. ವಿಚ್ಛೇದನ (Divorce) ಏಕಾಗಿರಬಹುದು ಎಂಬ ಬಗ್ಗೆ ಒಂದಷ್ಟು ಸುದ್ದಿ ಹುಟ್ಟಿಕೊಂಡಿತು. ಈಗ Myositis ಹೆಸರಿನ ಅಪರೂಪದ ಕಾಯಿಲೆಯಿಂದ ಸಮಂತಾ ಬಳಲುತ್ತಿದ್ದಾರೆ. ಈ ವಿಚಾರವನ್ನು ಸಮಂತಾ ಅವರೇ ರಿವೀಲ್ ಮಾಡಿದ್ದರು. ಈಗ ಸಮಂತಾ ಬಗ್ಗೆ ಮತ್ತೊಂದಷ್ಟು ವದಂತಿಗಳು ಹುಟ್ಟಿಕೊಂಡಿವೆ. ಇದಕ್ಕೆ ಅವರ ತಂಡದವರು ಬೇಸರದಿಂದಲೇ ಸ್ಪಷ್ಟನೆ ನೀಡಿದ್ದಾರೆ.

Myositis ಅನ್ನೋದು ತುಂಬಾನೇ ಅಪಾಯಕಾರಿ ಸಮಸ್ಯೆ. ಸ್ನಾಯುಗಳಲ್ಲಿ ತೀವ್ರವಾಗಿ ನೋವು ಕಾಣಿಸಿಕೊಳ್ಳುತ್ತದೆ. ಸಮಂತಾಗೆ ಈ ಕಾಯಿಲೆ ಇರುವುದು ಆರಂಭದ ಹಂತದಲ್ಲೇ ತಿಳಿದಿದೆ. ಸೂಕ್ತ ಚಿಕಿತ್ಸೆ ಪಡೆದರೆ ಈ ಕಾಯಿಲೆಯನ್ನು ಗುಣಪಡಿಸಬಹುದು ಎಂದು ವೈದ್ಯರು ಹೇಳಿದ್ದಾರೆ. ಇದರ ಚಿಕಿತ್ಸೆಗಾಗಿ ಅವರು ಕೊರಿಯಾ ತೆರಳುತ್ತಾರೆ ಎಂದು ಕೂಡ ವರದಿ ಆಗಿದೆ. ಈ ರೋಗದ ಕಾರಣದಿಂದ ಸಮಂತಾ ಅವರನ್ನು ಕೆಲ ಪ್ರಾಜೆಕ್ಟ್​ಗಳಿಂದ ಹೊರಗಿಡಲಾಗಿದೆ ಎಂದು ವರದಿ ಆಗಿತ್ತು. ಆದರೆ, ಅದು ಕೇವಲ ವದಂತಿ ಎನ್ನುವ ಸ್ಪಷ್ಟನೆ ಸಿಕ್ಕಿದೆ.

ಸಮಂತಾ ಅವರ ನಟನೆಯ ‘ಶಾಕುಂತಲಂ’ ಸಿನಿಮಾದ ಶೂಟಿಂಗ್ ಮುಗಿದು ಬಹಳ ಸಮಯ ಕಳೆದಿದೆ. ಆದರೆ, ಸಿನಿಮಾ ರಿಲೀಸ್ ಆಗಿಲ್ಲ. ಇನ್ನು, ವಿಜಯ್ ದೇವರಕೊಂಡ ಜತೆಗಿನ ‘ಖುಷಿ’ ಚಿತ್ರದ ಎರಡನೇ ಹಂತದ ಶೂಟಿಂಗ್ ಇನ್ನಷ್ಟೇ ಆರಂಭಗೊಳ್ಳಬೇಕಿದೆ. ಈ ಮಧ್ಯೆ ಅವರು ಹಿಂದಿ ಚಿತ್ರ ಕೂಡ ಒಪ್ಪಿಕೊಂಡಿದ್ದಾರೆ. ಇದರಿಂದ ಸಮಂತಾ ಔಟ್ ಆಗಿದ್ದಾರೆ ಎನ್ನಲಾಗಿತ್ತು. ಸಮಂತಾ ತಂಡದ ಮಹೇಂದ್ರ ಅವರು ಅಲ್ಲಗಳೆದಿದ್ದಾರೆ.

‘ಸಮಂತಾ ವಿಶ್ರಾಂತಿಯಲ್ಲಿದ್ದಾರೆ. ಸಂಕ್ರಾಂತಿ ಬಳಿಕ ಖುಷಿ ಚಿತ್ರದ ಶೂಟಿಂಗ್​ನಲ್ಲಿ ಭಾಗಿ ಆಗುತ್ತಾರೆ. ನಂತರ ಬಾಲಿವುಡ್ ಪ್ರಾಜೆಕ್ಟ್ ಮುಂದುವರಿಸುತ್ತಾರೆ. ಹಿಂದಿ ಸಿನಿಮಾದ ಶೂಟಿಂಗ್​ ಜನವರಿಯಿಂದ ಆರಂಭ ಆಗಬೇಕಿತ್ತು. ಆದರೆ, ಇತರ ಕಾರಣದಿಂದ ಸಿನಿಮಾ ಸೆಟ್ಟೇರುವುದು ಆರು ತಿಂಗಳು ತಡ ಆಗುತ್ತಿದೆ. ಹೀಗಾಗಿ, ಮೇ ತಿಂಗಳಿಂದ ಸಮಂತಾ ಚಿತ್ರದ ಶೂಟಿಂಗ್​ನಲ್ಲಿ ಭಾಗಿ ಆಗಲಿದ್ದಾರೆ’ ಎಂದಿದ್ದಾರೆ ಮಹೇಂದ್ರ.

ಇದನ್ನೂ ಓದಿ:ಸಮಂತಾ ನಟನೆಯ‘ಯಶೋದಾ’ ಚಿತ್ರಕ್ಕೆ ಕೋರ್ಟ್​​ನಿಂದ ತಡೆ; ಒಟಿಟಿ ರಿಲೀಸ್​​ಗೆ ಸಂಕಷ್ಟ

‘ಸಿನಿಮಾ ತಂಡದವರ ಜತೆ ನಾವು ನಿರಂತರವಾಗಿ ಸಂಪರ್ಕದಲ್ಲಿದ್ದೇವೆ. ಪ್ಲ್ಯಾನ್ ಪ್ರಕಾರವೇ ನಡೆದುಕೊಳ್ಳುತ್ತೀರಿ ಎಂದರೆ ನೀವು ಮುಂದುವರಿಯಬಹುದು, ನಮಗಾಗಿ ಕಾಯುವುದು ಬೇಡ ಎಂದು ಅವರಿಗೆ ನಾವು ಹೇಳಿದ್ದೆವು. ಆದರೆ, ತಂಡದವರು ಸಮಂತಾಗಾಗಿ ಕಾಯುತ್ತೇವೆ ಎಂದು ಹೇಳಿದ್ದಾರೆ. ಸಮಂತಾ ಅವರನ್ನು ಸಿನಿಮಾದಿಂದ ಹೊರಗಿಡಲಾಗಿದೆ ಎಂಬ ವಿಚಾರದಲ್ಲಿ ಸತ್ಯವಿಲ್ಲ’ ಎಂದು ಮಹೇಂದ್ರ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

LEAVE A REPLY

Please enter your comment!
Please enter your name here