Home Uncategorized ಸಮಸ್ತ ಶತಮಾನೋತ್ಸವ: ಜ.28ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಉದ್ಘಾಟನಾ ಸಮ್ಮೇಳನ

ಸಮಸ್ತ ಶತಮಾನೋತ್ಸವ: ಜ.28ರಂದು ಬೆಂಗಳೂರು ಅರಮನೆ ಮೈದಾನದಲ್ಲಿ ಉದ್ಘಾಟನಾ ಸಮ್ಮೇಳನ

21
0

ಕಲ್ಲಿಕೋಟೆ: 2026ರಲ್ಲಿ ನಡೆಯಲಿರುವ ಸಮಸ್ತ ಕೇರಳ ಜಮೀಯತುಲ್ ಉಲಮಾದ ಶತಮಾನೋತ್ಸವದ ಕಾರ್ಯ ಕ್ರಮದ ಉದ್ಘಾಟನಾ ಮಹಾ ಸಮ್ಮೇಳನವು ಜ.28ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದ್ದು, ಸಮಾವೇಶದಲ್ಲಿ ಒಂದು ಲಕ್ಷ ಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದು ಕಲ್ಲಿಕೋಟೆಯಲ್ಲಿ ನಡೆದ ಸಮಸ್ತ ಮತ್ತು ಪೋಷಕ ಸಂಘಟನೆಗಳ ರಾಜ್ಯ ಪದಾಧಿಕಾರಿಗಳ ಸಭೆಯ ಬಳಿಕ ಸಮಸ್ತ ಅಧ್ಯಕ್ಷ ಸೈಯ್ಯದುಲ್ ಉಲಮಾ ಸೈಯ್ಯದ್ ಜಿಫ್ರಿ ಮುತ್ತುಕೋಯ ತಂಙಳ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಬೆಂಗಳೂರಿನಲ್ಲಿ ನಡೆಯಲಿರುವ ಸಮ್ಮೇಳನದಲ್ಲಿ ಕರ್ನಾಟಕ ರಾಜ್ಯದ 1500 ವಿಖಾಯ ಸ್ವಯಂಸೇವಕರನ್ನು ಸಮಾಜಕ್ಕೆ ಸಮರ್ಪಿಸಲಾಗುವುದು. ಅಲ್ಲದೆ ಮುಂದಿನ ಎರಡು ವರ್ಷಗಳಲ್ಲಿ ವ್ಯಾಪಕ ಕಾರ್ಯಕ್ರಮಗಳನ್ನು ಆಯೋಜಿಸಲು ರೂಪುರೇಷೆಗಳನ್ನು ಸಿದ್ಧಪಡಿಸಲಾಗಿದ್ದು, ಸಮಸ್ತ ಹಾಗೂ ಪೋಷಕ ಸಂಘಟನೆಗಳ ಚಟುವಟಿಕೆಗಳನ್ನು ರಾಷ್ಟ್ರೀಯ ಮತ್ತು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಮತ್ತಷ್ಟು ಬಲಪಡಿಸಲಾಗುವುದು. ಸಮ್ಮೇಳನದ ಪ್ರಚಾರದ ಅಂಗವಾಗಿ ಜನವರಿ 19 ರಂದು, ಎಲ್ಲಾ ಜುಮಾ ಮಸೀದಿಗಳಲ್ಲಿ ಅಗಲಿ ಪ್ರಾರ್ಥನಾ ಮಜ್ಲಿಸ್ ಮತ್ತು ಧ್ವಜ ದಿನವನ್ನು ನಡೆಸಲಾಗುತ್ತದೆ ಎಂದು ಜಿಫ್ರಿ ತಂಙಳ್ ತಿಳಿಸಿದರು.

ಸಮ್ಮೇಳನದ ವಿವಿಧ ಭಾಷೆಯ ಪೋಸ್ಟರ್‌ಗಳನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಿದರು.

ಸಮಸ್ತ ಕೇರಳ ಜಮೀಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಪ್ರೊ. ಕೆ. ಆಲಿಕುಟ್ಟಿ ಮುಸ್ಲಿಯಾರ್ ಅಧ್ಯಕ್ಷತೆ ವಹಿಸಿದ್ದರು. ಅಧ್ಯಕ್ಷ ಜಿಫ್ರಿ ಮುತ್ತುಕೋಯ ತಂಙಳ್ ಉದ್ಘಾಟಿಸಿದರು. ಸಮಸ್ತ ಕೇರಳ ಇಸ್ಲಾಮಿಕ್ ಧಾರ್ಮಿಕ ಶಿಕ್ಷಣ ಮಂಡಳಿ ಪ್ರಧಾನ ಕಾರ್ಯದರ್ಶಿ ಎಂ.ಟಿ.ಅಬ್ದುಲ್ಲಾ ಮುಸ್ಲಿಯಾರ್ ಸ್ವಾಗತಿಸಿದರು.

ಸಮಸ್ತ ಕಾರ್ಯದರ್ಶಿ ಕೆ. ಉಮರ್ ಫೈಝಿ ಮುಕ್ಕಂ, ಸುನ್ನೀ ಯುವ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಸೈಯದ್ ಮುಹಮ್ಮದ್ ಕೋಯ ತಂಙಳ್ ಜಮಲುಲ್ಲೈಲಿ, ಸಮಸ್ತ ಕೇಂದ್ರದ ಮುಶಾವರ ಸದಸ್ಯರಾದ ಕೆ.ಟಿ.ಹಂಝ ಮುಸ್ಲಿಯಾರ್, ಕೊಡಗು ಅಬ್ದುರ್ರಹ್ಮಾನ್ ಮುಸ್ಲಿಯಾರ್, ಡಾ. ಬಹಾವುದ್ದೀನ್ ಮುಹಮ್ಮದ್ ನದ್ವಿ, ವಾಕೋಟ್ ಮೊಯ್ತೀನ್‌ಕುಟ್ಟಿ ಫೈಝಿ, ಸಿ.ಕೆ.ಅಬ್ದುರ್ರಹ್ಮಾನ್ ಫೈಝಿ ಅರಿಪ್ರ ಸೇರಿದಂತೆ ಪೋಷಕ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ವಿದ್ಯಾಭ್ಯಾಸ ಮಂಡಳಿಯಂವ್ಯವಸ್ಥಾಪಕ ಕೆ. ಮೊಯ್ದೀನ್ ಕುಟ್ಟಿ ಮಾಸ್ಟರ್ ವಂದಿಸಿದರು.

LEAVE A REPLY

Please enter your comment!
Please enter your name here