ಉಡುಪಿ, ಮೇ 22: ಸರಕಾರವು ಕೃಷಿ ಜಮೀನುಗಳನ್ನು ಭೂಪರಿವರ್ತನೆ ಗೊಳಿಸುವ ಸಲುವಾಗಿ ‘ಅಫಿದವಿತ್ ಬೇಸ್ಡ್ ಕನ್ವರ್ಷನ್’ ಹಾಗೂ ‘ಮಾಸ್ಟರ್ ಪ್ಲಾನ್ ಬೇಸ್ಡ್ ಕನ್ವರ್ಷನ್’ ತಂತ್ರಾಂಶದಲ್ಲಿ ಕರ್ನಾಟಕ ಭೂ ಕಂದಾಯ ಕಾಯ್ದೆ 1964ರ ಕಲಂ 95(2)ರಡಿ ಕಲ್ಪಿಸಲಾದ ಅವಕಾಶದಂತೆ ಕೃಷಿ ಭೂಮಿಯನ್ನು ಕೃಷಿಯೇತರ ಉದ್ದೇಶಕ್ಕಾಗಿ ಅಂದರೆ ವಾಸ್ತವ್ಯ, ವಾಣಿಜ್ಯ, ಕೈಗಾರಿಕೆ ಉದ್ದೇಶಗಳಿಗಾಗಿ ಭೂಪರಿವರ್ತನೆಗೊಳಿಸಲು ಸರಳೀಕರಿಸಿ ಆದೇಶ ಹೊರಡಿಸಿದೆ.
ಈ ಸಂಬಂಧ ಮೂಲತಃ ಭೂನ್ಯಾಯ ಮಂಡಳಿಯಿಂದ ಆದೇಶವಾದ ಜಮೀನುಗಳು ಹಾಗೂ ಪಿ.ಟಿ.ಸಿ.ಎಲ್ ಕಾಯ್ದೆಗೆ ಒಳಪಡುವ ಕೃಷಿ ಜಮೀನು ಗಳನ್ನು ಅರ್ಜಿದಾರರು ಮಾಸ್ಟರ್ ಪ್ಲ್ಯಾನ್ ವ್ಯಾಪ್ತಿಯ ಹೊರಗಿನ ಗ್ರಾಮಗಳಿಗೆ ಅಫಿದವಿತ್ ಬೇಸ್ಡ್ ಭೂಪರಿವರ್ತನೆ ಮತ್ತು ಮಾಸ್ಟರ್ ಪ್ಲಾನ್ ವ್ಯಾಪ್ತಿಯ ಒಳಗಿನ ಗ್ರಾಮಗಳಿಗೆ ಮಾಸ್ಟರ್ ಪ್ಲಾನ್ ಬೇಸ್ಡ್ ಭೂಪರಿವರ್ತನೆ ಗಾಗಿ- https://landrecords.karnataka.gov.in/citizenportal/- ನಲ್ಲಿ ಲಾಗಿನ್ ಆಗುವ ಮೂಲಕ ಅಫಿದವಿತ್ ಬೇಸ್ಡ್ ಕನ್ವರ್ಷನ್ ಮಾಡುಲೆನಲ್ಲಿ ಜಿಲ್ಲಾಧಿಕಾರಿಯವರಿಗೆ ಅರ್ಜಿ ಸಲ್ಲಿಸಿದಲ್ಲಿ ಭೂಪರಿವರ್ತನೆ ಆದೇಶವನ್ನು ಆನ್‌ಲೈನ್‌ನಲ್ಲಿ ಪಡೆಯಬಹುದಾಗಿದೆ.
ಅರ್ಜಿದಾರರು ಭೂ ಪರಿವರ್ತನೆಗಾಗಿ ಚಾಲ್ತಿ ವರ್ಷದ ಪಹಣಿ ಪತ್ರಿಕೆ, ಹಕ್ಕು ಬದಲಾವಣೆ ದಾಖಲಾತಿ (ಮ್ಯುಟೇಶನ್ ಪ್ರತಿ), ಭೂ ಪರಿವರ್ತನಾ ಪೂರ್ವ ನಕ್ಷೆ ಹಾಗೂ ನೋಟರಿಯವರಿಂದ ಪ್ರಮಾಣೀಕರಿಸಿದ ಮೂಲ ಅಫಿದವಿತ್ ಪ್ರತಿಯನ್ನು ಆನ್‌ಲೈನ್‌ನಲ್ಲಿ ಸಲ್ಲಿಸಬೇಕು.
ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸುವ ಅರ್ಜಿದಾರರು ಮೊದಲಿಗೆ ಈ ವೆಬ್‌ಸೈಟ್ ಮೂಲಕ ಹೊಸದಾಗಿ ಲಾಗಿನ್ ಐಡಿಯನ್ನು ಸೃಜಿಸಿ, ಮಾಹಿತಿಯನ್ನು ದಾಖಲಿಸಿ ನಂತರದಲ್ಲಿ ಅಫಿದವಿತ್ ಡೌನ್ಲೋಡ್ ಮಾಡಿಕೊಂಡು ನೋಟರಿ ಮೂಲಕ ದೃಢೀಕರಿಸಿ, ಸದ್ರಿ ನೋಟರಿ ಮಾಡಿರುವ ಅಫಿದವಿತ್ ಅನ್ನು ಸೂಕ್ತ ದಾಖಲೆಗಳೊಂದಿಗೆ ಅರ್ಜಿದಾರರು ಸೃಜಿಸಿರುವ ಲಾಗಿನ್ ಮೂಲಕ ಅಪ್ಲೋಡ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಿದ ನಂತರ ಭೂಪರಿವರ್ತನೆಯ ಅರ್ಜಿ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಲು ಹಾಗೂ ಭೂ ಪರಿವರ್ತನೆ ಆದೇಶ ಪ್ರತಿ ಪಡೆಯಲು ಅಫಿದವಿತ್ ಐಡಿ ಹಾಗೂ ರಿಕ್ವೆಸ್ಟ್ ಐಡಿಯನ್ನು ನಮೂದಿಸಿಟ್ಟುಕೊಳ್ಳಬೇಕು. – https://landrecords.karnataka.gov.in/service80/ – ಅಫಿದವಿತ್ ಐಡಿ ನಮೂದಿಸಿ ಭೂಪರಿವರ್ತನೆ ಅರ್ಜಿ ಸ್ಥಿತಿಯನ್ನು ಪರಿಶೀಲಿಸಿ ಕೊಳ್ಳಬಹುದು.
ಸಾರ್ವಜನಿಕರು ಯಾವುದೇ ಮಧ್ಯವರ್ತಿಗಳು ಅಥವಾ ಸೈಬರ್ ಸೆಂಟರ್ ಗಳಿಗೆ ಹೋಗದೆ ನೇರವಾಗಿ ಮೇಲೆ ತಿಳಿಸಿರುವ ವಿಧಾನದಲ್ಲಿ ಭೂಪರಿವರ್ತನೆ ಅರ್ಜಿಯನ್ನು ಸಲ್ಲಿಸಿದ್ದಲ್ಲಿ 30 ದಿನದೊಳಗೆ ಭೂಪರಿವರ್ತನೆ ಅಂತಿಮ ಆದೇಶದ ಪ್ರತಿಯನ್ನು ಆನ್‌ಲೈನ್‌ನಲ್ಲಿ – https://landconversion.karnataka.gov.in/service99/-ಲಿಂಕ್ ಉಪಯೋಗಿಸಿ, ರಿಕ್ವೆಸ್ಟ್ ಐಡಿ/ ಸರ್ವೇ ನಂಬರ್ ನಮೂದಿಸಿ ಪಡೆದುಕೊಳ್ಳಬಹುದು.
ಸಾರ್ವಜನಿಕರು ಯಾವುದೇ ಕಚೇರಿಗಳಿಗೆ ಅಲೆದಾಡದೇ ಈ ಆನ್‌ಲೈನ್ ‘ಅಫಿದವಿತ್ ಬೇಸ್ಡ್ ಕನ್ವರ್ಷನ್’ ಹಾಗೂ ‘ಮಾಸ್ಟರ್ ಪ್ಲಾನ್ ಬೇಸ್ಡ್ ಕನ್ವರ್ಷನ್’ ತಂತ್ರಾಂಶದ ಸದುಪಯೋಗ ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

