ಬೆಂಗಳೂರು:
‘ಉಕ್ಕಿನ ಮನುಷ್ಯ’ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಸಚಿವರು ಶುಭಾಶಯ ಕೋರಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿ, ನಾಡಿನ ಸಮಸ್ತ ಜನತೆಗೆ ರಾಷ್ಟ್ರೀಯಏಕತಾದಿವಸ ದ ಶುಭಾಶಯಗಳು.
ನಾಡಿನ ಸಮಸ್ತ ಜನತೆಗೆ ರಾಷ್ಟ್ರೀಯ ಏಕತಾ ದಿನದ ಶುಭಕಾಮನೆಗಳು. ಸ್ವಾತಂತ್ರ್ಯ ಹೋರಾಟಗಾರ ’ಉಕ್ಕಿನ ಮನುಷ್ಯ’ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿಯಂದು, ರಾಷ್ಟ್ರದ ಏಕತೆಯ ಹರಿಕಾರನಿಗೆ ಅನಂತ ನಮನಗಳನ್ನು ಸಲ್ಲಿಸೋಣ. ಭಾರತದ ಅಖಂಡತೆಗಾಗಿ ಅಸಾಮಾನ್ಯ ಸಾಧನೆಗಳನ್ನು ಸಾಧಿಸಿದ ಪಟೇಲ್ ಅವರನ್ನು ದೇಶ ಎಂದಿಗೂ ಮರೆಯಲಾಗದು. #NationalUnityDay pic.twitter.com/GctMzrmlY1
— B.S. Yediyurappa (@BSYBJP) October 31, 2020
‘ಉಕ್ಕಿನ ಮನುಷ್ಯ’ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜಯಂತಿಯಂದು ಅವರಿಗೆ ಗೌರವ ನಮನಗಳು. ಭಾರತದ ಪ್ರಥಮ ಉಪಪ್ರಧಾನಿಗಳಾಗಿ, ಪ್ರಥಮ ಗೃಹಸಚಿವರಾಗಿ ನೂರಾರು ರಾಜಸಂಸ್ಥಾನಗಳನ್ನು ಭಾರತ ಒಕ್ಕೂಟದಲ್ಲಿ ವಿಲೀನಗೊಳಿಸುವ ಮಹತ್ಕಾರ್ಯವನ್ನು ಸಾಧಿಸಿದ ಅವರ ಸಾಧನೆ ಚರಿತ್ರಾರ್ಹವಾದದ್ದು ಎಂದು ತಿಳಿಸಿದ್ದಾರೆ.