ಸಹೋದ್ಯೋಗಿಯನ್ನು ರೇಗಿಸಿದ್ದಕ್ಕೆ ಕೋಪಗೊಂಡು ಯುವಕನ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ, ಟ್ರಾವೆಲ್ ಏಜೆನ್ಸಿ ಕೆಲಸಗಾರನೊಬ್ಬ ಹತ್ಯೆ ಮಾಡಿರುವ ಘಟನೆಯೊಂದು ಉಪ್ಪಾರಪೇಟೆ ಪೊಲೀಸ್ ಠಾಮಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ. ಬೆಂಗಳೂರು: ಸಹೋದ್ಯೋಗಿಯನ್ನು ರೇಗಿಸಿದ್ದಕ್ಕೆ ಕೋಪಗೊಂಡು ಯುವಕನ ಮೇಲೆ ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ, ಟ್ರಾವೆಲ್ ಏಜೆನ್ಸಿ ಕೆಲಸಗಾರನೊಬ್ಬ ಹತ್ಯೆ ಮಾಡಿರುವ ಘಟನೆಯೊಂದು ಉಪ್ಪಾರಪೇಟೆ ಪೊಲೀಸ್ ಠಾಮಾ ವ್ಯಾಪ್ತಿಯಲ್ಲಿ ಮಂಗಳವಾರ ನಡೆದಿದೆ.
ಹತ್ಯೆಯಾದ ಯುವಕನನ್ನು ಆಂಧ್ರಪ್ರದೇಶದ ಅನಂತಪುರ ಜಿಲ್ಲೆಯ ಎನ್ ಮುರಳಿ (29) ಎಂದು ಗುರ್ತಿಸಲಾಗಿದೆ. ಪ್ರಕರಣ ಸಂಬಂಧ ಮಂಡ್ಯದ ಶಿವಳ್ಳಿಯ ಎನ್ ರೋಹಿತ್ (24) ಎಂಬಾತನನ್ನು ಬಂಧನಕ್ಕೊಳಪಡಿಸಲಾಗಿದೆ.
ಮಾಗಡಿ ರಸ್ತೆಯ ಮೂಕಾಂಬಿಕಾ ನಗರದ ಮನೋಹರ್ ಹಾಗೂ ಮುರಳಿ ಸ್ನೇಹಿತರಾಗಿದ್ದು, ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಈ ಗೆಳೆತನದಲ್ಲಿ ಸೋಮವಾರ ರಾತ್ರಿ ಆನಂದ್ ರಾವ್ ವೃತ್ತದ ತಿರುಮಲ ಬಾರ್’ಗೆ ಸ್ನೇಹಿತರು ಮದ್ಯ ಸೇವಿಸಿದ್ದರು. ಬಳಿಕ ಈ ಮೊದಲು ಕೆಲಸ ಮಾಡುತ್ತಿದ್ದ ವರ್ಷಾ ಟ್ರಾವೆಲ್ಸ್’ಗೆ ಮನೋಹರ್ ಹಾಗೂ ಮುರುಳಿ ಭೇಟಿ ನೀಡಿದ್ದರು.
ಈ ವೇಳೆ ವೇಳೆ ಆ ಟ್ರಾವೆಲ್ಸ್’ನ ಪರಿಚಿತ ಕ್ಲೀನರ್ ನನ್ನು ಅಪರಿಚಿತ ಅಲಿಯಾಸ್ ವಂಡ್ರೆ ಎಂದು ಮುರುಳಿ ರೇಗಿಸುತ್ತಿದ್ದ. ಇದಕ್ಕೆ ಕ್ಲೀನರ್ ಆಕ್ಷೇಪಿಸಿದಾಗ ಇಬ್ಬರ ನಡುವೆ ಸಣ್ಣ ಮಟ್ಟದ ಜಗಳವಾಗಿದೆ. ಇದೇ ಸಂದರ್ಭದಲ್ಲಿ ಟ್ರಾವೆಲ್ ಏಜೆನ್ಸಿಯಲ್ಲಿದ್ದ ಕೆಲಸಗಾರ ರೋಹಿತ್ ಸ್ಥಳಕ್ಕೆ ಬಂದಿದ್ದು, ರಾಡ್ ನಿಂದ ಮುರಳಿ ಹಾಗೂ ಆತನತ ಸ್ನೇಹಿತ ಮನೋಹರ್ ಮೇಲೆ ಹಲ್ಲೆ ನಡೆಸಿದ್ದಾನೆ. ಈ ವೇಳೆ ಗಂಭೀರವಾಗಿ ಗಾಯಗೊಂಡ ಮುರಳಿಯವರನ್ನು ಕೆಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಿಮ್ಹಾನ್ಸ್’ಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾನೆ. ಇನ್ನು ಗಾಯಗೊಂಡ ಮುರಳಿ ಸ್ನೇಹಿತ ಮನೋಹರ್ ಚಿಕಿತ್ಸೆ ಬಳಿಕ ಮನೆಗೆ ಮರಳಿದ್ದಾರೆ. ಈ ಸಂಬಂಧ ಉಪ್ಪಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು. ಮುಂದಿನ ತನಿಖೆ ಕೈಗೊಂಡಿದ್ದಾರೆ.