ಆನ್‌ಲೈನ್ ವಂಚನೆ ಎಂಬುದು ಈಗೀಗ ಇನ್ನಷ್ಟು ವ್ಯಾಪಕವಾಗುತ್ತಿದೆ. ಅಮಾಯಕರನ್ನು ಕ್ಷಣಾರ್ಧದಲ್ಲಿ ವಂಚಿಸುವ ಮತ್ತು ಕಣ್ಣು ಮುಚ್ಚಿ ಕಣ್ಣು ತೆರೆಯುವಷ್ಟರಲ್ಲಿ ಹಣ ಕದಿಯುವ ಚೋರರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಆನ್‌ಲೈನ್ ವಂಚನೆಯಿಂದ ಹಣ ಕಳೆದುಕೊಳ್ಳುವವರ ಸಂಖ್ಯೆ ಅಧಿಕವಾಗುತ್ತಲೇ ಇದೆ. ಇದೀಗ ಈ ಪಟ್ಟಿಗೆ ಇನ್ನೊಂದು ಸೇರ್ಪಡೆಯಾಗಿದೆ.
ಸುರಕ್ಷಿತವಾಗಿ ಇರುವುದು ಹೇಗೆ…?
ಇಂತಹ ಮೋಸಗಳು ಯಾವ ರೀತಿ ನಡೆಯುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಆದರೆ, ನಮ್ಮ ಎಚ್ಚರಿಕೆಯಿಂದ ನಾವು ಇರುವುದು ಬಹಳ ಮುಖ್ಯ. ಆಗ ಮಾತ್ರ ಇಂತಹ ವಂಚನೆಯಿಂದ ನಾವು ಪಾರಾಗಬಹುದು.
ಮೊದಲನೆಯದಾಗಿ ನಿಮ್ಮ ಬ್ಯಾಂಕ್ ಖಾತೆಯ ವಿಷಯ ಬಂದಾಗ ಯಾವುದೇ ಅಪರಿಚಿತ ಕರೆ, ಸಂದೇಶಗಳಿಗೆ ಸ್ಪಂದಿಸಬೇಡಿ. ಯಾರೊಂದಿಗೂ ನಿಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ಹಂಚಿಕೊಳ್ಳಬೇಡಿ.
ಬ್ಯಾಂಕ್ ಅಧಿಕಾರಿಗಳು ಎಂದು ಹೇಳಿಕೊಂಡು ಕರೆ ಮಾಡುವವರೊಂದಿಗೆ ಯಾವುದೇ ಕಾರಣಕ್ಕೂ ಒಟಿಪಿಯನ್ನು ಶೇರ್ ಮಾಡಬೇಡಿ.
ಬ್ಯಾಂಕ್ ಖಾತೆಯ ವಿಷಯದಲ್ಲಿ ಯಾವುದೇ ರೀತಿಯ ಸಹಾಯಕ್ಕಾಗಿ ಅಧಿಕೃತ ವೆಬ್‌ಸೈಟ್ ಮತ್ತು ನಿಮ್ಮ ಬ್ಯಾಂಕ್‌ನ ಸಂಬಂಧ ವ್ಯವಸ್ಥಾಪಕರನ್ನು ಮಾತ್ರ ನಂಬಿರಿ.
ಅಧಿಕೃತ ವೆಬ್‌ಸೈಟ್‌ನಲ್ಲಿರುವ ಸಹಾಯವಾಣಿ ಸಂಖ್ಯೆಯ ಹೊರತಾಗಿ ಆನ್‌ಲೈನ್‌ನಲ್ಲಿ ಸಿಗುವ ಇತರ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡಬೇಡಿ.
ನೀವು ಆನ್‌ಲೈನ್ ಬ್ಯಾಂಕಿಂಗ್‌ನಲ್ಲಿ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಬ್ಯಾಂಕ್‌ನ ಹತ್ತಿರದ ಶಾಖೆಗೆ ಭೇಟಿ ನೀಡುವುದು ಉತ್ತಮ.
ಅಪರಿಚಿತ ವ್ಯಕ್ತಿಗಳು ಸೂಚಿಸುವ ಯಾವುದೇ ರಿಮೋಟ್ ಆಕ್ಸೆಸ್ ಸಾಫ್ಟ್‌ವೇರ್ ಅಥವಾ ಇತರ ಅಪ್ಲಿಕೇಷನ್‌ಗಳನ್ನು ಇನ್‌ಸ್ಟಾಲ್ ಮಾಡಲು ಹೋಗಬೇಡಿ. ಬರೀ ಬ್ಯಾಂಕ್ ಖಾತೆ ಮಾತ್ರವಲ್ಲದೆ ನಿಮ್ಮ ಇತರ ಖಾಸಗಿ ಮಾಹಿತಿಗೂ ಇವರು ಕನ್ನ ಹಾಕಿ ದುರುಪಯೋಗಪಡಿಸಿಕೊಳ್ಳಬಹುದು.
ವಿಶ್ವಾಸಾರ್ಹ ಸಹಾಯವಾಣಿ ಸಂಖ್ಯೆಗಳಿಗೆ ಕರೆ ಮಾಡುತ್ತಿದ್ದೇವೆ ಮತ್ತು ಇ-ಮೇಲ್ ಸಂದೇಶ ಕಳುಹಿಸುತ್ತಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಿ.
The post ಸಾಫ್ಟ್‌ವೇರ್ ಇನ್‌ಸ್ಟಾಲ್ ಮಾಡಲು ಹೋಗಿ ಆನ್‌ಲೈನ್ ವಂಚನೆ: ಸುರಕ್ಷಿತವಾಗಿ ಇರುವುದು ಹೇಗೆ…? appeared first on Ain Live News.