Viral Video : ಡಿಸೆಂಬರ್ 8ರಂದು ರಷ್ಯಾದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪಾ ಸಿನೆಮಾ ಬಿಡುಗಡೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸಾಮಿ ಸಾಮಿಯ ಹಾಡಿನ ಜ್ವರ ಈಗಾಗಲೇ ರಷ್ಯಾವನ್ನು ಆವರಿಸಿದೆ. ಊ ಅಂಟಾವಾ ಮತ್ತು ಸಾಮಿ ಸಾಮಿ ಹಾಡನ್ನು ರಷ್ಯನ್ನರು ಆನಂದಿಸುತ್ತಿದ್ದಾರೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ರಷ್ಯನ್ ಬಾಲೆಯರು, ಮಕ್ಕಳು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.
ಮಾಸ್ಕೋದ ರೆಡ್ ಸ್ವೇರ್ನ ಐರಿಹಾಸಿಕ ವಸ್ತುಸಂಗ್ರಹಾಲಯದ ಆವರಣದಲ್ಲಿ ಇವರು ನರ್ತಿಸಿದ್ದಾರೆ. ಈತನಕ ಈ ವಿಡಿಯೋ ಅನ್ನು ಸುಮಾರು 15,000 ಜನ ನೋಡಿದ್ದಾರೆ. ಸುಮಾರು 800 ಜನರು ಇಷ್ಟಪಟ್ಟಿದ್ಧಾರೆ. ಬಹಳ ಚೆಂದದ ನೃತ್ಯ ಎಂದಿ ನೆಟ್ಟಿಗರು ಶ್ಲಾಘಿಸಿದ್ದಾರೆ. ಎಂಥ ಅಂದವಾಗಿದ್ದೀರಿ ಎಂಥ ಚೆಂದ ನರ್ತಿಸುತ್ತಿದ್ದೀರಿ ಎಂದಿದ್ದಾರೆ ಒಬ್ಬರು.
ಇತ್ತೀಚೆಗಷ್ಟೇ ರಷ್ಯಾದಲ್ಲಿ ಪುಷ್ಪಾ ಸಿನೆಮಾದ ರಷ್ಯನ್ ಅವತರಣಿಕೆಯ ಬಿಡುಗಡೆ ಕುರಿತು ಅಲ್ಲು ಅರ್ಜುನ್ ಮತ್ತು ಚಿತ್ರತಂಡ ರಷ್ಯಾದಲ್ಲಿ ಪತ್ರಿಕಾಗೋಷ್ಠಿ ನಡೆಸಿತ್ತು. ಟ್ರೇಲರ್ ನೋಡಿದ ರಷ್ಯಾದ ಸಿನಿಮಾಭಿಮಾನಿಗಳು ಈ ಚಿತ್ರವನ್ನು ಕಾತರದಿಂದ ಎದುರು ನೋಡುತ್ತಿರುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ.
ಈ ವಿಡಿಯೋ ನೋಡಿದ ನಿಮ್ಮ ಅಭಿಪ್ರಾಯವೇನು?
ಮತ್ತಷ್ಟು ವೈರಲ್ ವಿಡಿಯೋಗಾಗಿ ಕ್ಲಿಕ್ ಮಾಡಿ