Home Uncategorized ಸಿಇಟಿ ಪರೀಕ್ಷೆ: ಕರ್ನಾಟಕದವರಾಗಿದ್ದು, ಬೇರೆ ರಾಜ್ಯದಲ್ಲಿ ವಾಸವಿದ್ದವರು ಕನ್ನಡ ಭಾಷಾ ಪರೀಕ್ಷೆಗೆ ಅರ್ಹರು

ಸಿಇಟಿ ಪರೀಕ್ಷೆ: ಕರ್ನಾಟಕದವರಾಗಿದ್ದು, ಬೇರೆ ರಾಜ್ಯದಲ್ಲಿ ವಾಸವಿದ್ದವರು ಕನ್ನಡ ಭಾಷಾ ಪರೀಕ್ಷೆಗೆ ಅರ್ಹರು

35
0

ಬೆಂಗಳೂರು: ಅಭ್ಯರ್ಥಿ ಮತ್ತವರ ಪೋಷಕರ ಮಾತೃಭಾಷೆ ಕನ್ನಡ, ತುಳು, ಕೊಡವ ಅಥವಾ ಬ್ಯಾರಿ ಆಗಿದ್ದು, ಅವರ ಪೋಷಕರು ಕರ್ನಾಟಕದವರೇ ಆಗಿದ್ದರೂ, ಬೇರೆ ರಾಜ್ಯದಲ್ಲಿ ಓದಿ, ಅರ್ಹತೆ ಪರೀಕ್ಷೆಯ ಪ್ರಮಾಣ ಪತ್ರಗಳನ್ನು ಪಡೆದಿದ್ದಲ್ಲಿ ಅಂತಹ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಹಾಗೆಯೇ ಅಭ್ಯರ್ಥಿಯ ಮಾತೃಭಾಷೆ ಕನ್ನಡ, ತುಳು, ಕೊಡವ ಅಥವಾ ಬ್ಯಾರಿ ಆಗಿದ್ದು, ಕನ್ನಡ ಮಾತನಾಡುವ ಮಹಾರಾಷ್ಟ್ರದ ಸೋಲಾಪುರ್, ಅಕ್ಕಲ್‍ಕೋಟ್, ಜಾಥ್, ಗಾದಿಂಗ್‍ಲಾಜ್‍ನ ತಾಲ್ಲೂಕುಗಳಲ್ಲಿ ಮತ್ತು ಕೇರಳದ ಕಾಸರಗೋಡ್, ಹೊಸದುರ್ಗ, ಮಂಜೇಶ್ವರ ತಾಲ್ಲೂಕುಗಳಲ್ಲಿ 1ನೆ ತರಗತಿಯಿಂದ 12ನೆ ತರಗತಿಯ ಒಳಗೆ ಕನಿಷ್ಟ ಏಳು ವರ್ಷ ಓದಿದ ಅಭ್ಯರ್ಥಿಗಳು ಕನ್ನಡ ಭಾಷಾ ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ ಎಂದು ಕೆಇಎ ತಿಳಿಸಿದೆ.

LEAVE A REPLY

Please enter your comment!
Please enter your name here