Home Uncategorized ಸಿಕಲ್ ಸೆಲ್ ಕಾಯಿಲೆ : ಒಂದು ಕೋಟಿ ಜನರ ತಪಾಸಣೆ

ಸಿಕಲ್ ಸೆಲ್ ಕಾಯಿಲೆ : ಒಂದು ಕೋಟಿ ಜನರ ತಪಾಸಣೆ

14
0

ಹೊಸದಿಲ್ಲ: ಭಾರತದಲ್ಲಿ ಈವರೆಗೆ ಒಂದು ಕೋಟಿಗೂ ಅಧಿಕ ಜನರನ್ನು ‘ಸಿಕಲ್ ಸೆಲ್’ ಕಾಯಿಲೆ ತಪಾಸಣೆಗೆ ಒಳಪಡಿಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.

ರಕ್ತದಲ್ಲಿ ದೋಷಪೂರಿತ ಹೀಮೊಗ್ಲೋಬಿನ್ ಇರುವುದು ಈ ಕಾಯಿಲೆಯ ಪ್ರಮುಖ ಲಕ್ಷಣವಾಗಿದೆ. ರಾಷ್ಟ್ರೀಯ ಸಿಕಲ್ ಸೆಲ್ ಅನೀಮಿಯ ಎಲಿಮಿನೇಶನ್ ಮಿಶನ್ ಯೋಜನೆಯಡಿ ಈವರೆಗೆ ಒಂದು ಕೋಟಿಗೂ ಅಧಿಕ ಜನರನ್ನು ಈ ರೋಗದ ತಪಾಸಣೆಗೆ ಒಳಪಡಿಸಲಾಗಿದೆ. ಮೂರು ವರ್ಷಗಳಲ್ಲಿ ಏಳು ಕೋಟಿ ಜನರನ್ನು ಈ ರೋಗದ ತಪಾಸಣೆಗೆ ಒಳಪಡಿಸುವ ಗುರಿಯನ್ನು ಯೋಜನೆ ಹೊಂದಿದೆ.

ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಕಳೆದ ವರ್ಷದ ಜುಲೈ ಒಂದರಂದು ಮಧ್ಯಪ್ರದೇಶದ ಶಾಹ್ಡೊಲ್ನಲ್ಲಿ ಚಾಲನೆ ನೀಡಿದ್ದರು. ಈ ರೋಗವನ್ನು 2047ರ ವೇಳೆಗೆ ಹೋಗಲಾಡಿಸುವುದು ಯೋಜನೆಯ ಉದ್ದೇಶವಾಗಿದೆ.

LEAVE A REPLY

Please enter your comment!
Please enter your name here