Home ಶಿವಮೊಗ್ಗ ಸಿಗಂದೂರು ವಿವಾದ; ಯಾವುದೇ ಕಾರಣಕ್ಕೂ ದೇವಾಲಯವನ್ನು ಮುಜರಾಯಿ ವ್ಯಾಪ್ತಿಗೆ ತರುವುದಿಲ್ಲ; ಮುಖ್ಯಮಂತ್ರಿ ಭರವಸೆ

ಸಿಗಂದೂರು ವಿವಾದ; ಯಾವುದೇ ಕಾರಣಕ್ಕೂ ದೇವಾಲಯವನ್ನು ಮುಜರಾಯಿ ವ್ಯಾಪ್ತಿಗೆ ತರುವುದಿಲ್ಲ; ಮುಖ್ಯಮಂತ್ರಿ ಭರವಸೆ

31
0

ಬೆಂಗಳೂರು:

ಸಿಗಂದೂರು ಗೊಂದಲ ವಿಚಾರ ಕುರಿತಂತೆ ಶಾಸಕ ಹರತಾಳು ಹಾಲಪ್ಪ, ರೇಣುಕಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ಸುಮಾರು 20 ವಿವಿಧ ಜನಾಂಗಗಳ ಸ್ವಾಮೀಜಿಗಳ ನಿಯೋಗ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ದೇವಾಲಯದಲ್ಲಿ ಸದ್ಯ ಎದ್ದಿರುವ ಮೇಲುಸ್ತುವಾರಿ ಸಮಿತಿ ಕುರಿತ ಗೊಂದಲ ನಿವಾರಣೆ, ಭಕ್ತರ ನೀಡುವ ಹಣಕಾಸು, ದೇಣಿಗೆ ವಿಚಾರದಲ್ಲಿ ಪಾರದರ್ಶಕತೆ ತರುವ ಬಗ್ಗೆ ಪ್ರಮುಖವಾಗಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಯಿತು.

Singadur Swami meets CM

ಇವರ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ದೇವಾಲಯವನ್ನು ಯಾವುದೇ ಕಾರಣಕ್ಕೂ ಮುಜರಾಯಿ ವ್ಯಾಪ್ತಿಗೆ ತರುವ ಪ್ರಶ್ನೆಯೇ ಇಲ್ಲ. ಇಲ್ಲಿ ಭಕ್ತರು ನೀಡುವ ಹಣಕಾಸು ವಿಚಾರದಲ್ಲಿ ಪಾರದರ್ಶಕತೆ ತರಬೇಕು ಎಂಬುದು ಭಕ್ತರ ಇಚ್ಛೆಯಾಗಿದ್ದರಿಂದ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಲಹಾ ಸಮಿತಿ ರಚನೆ ಮಾಡಲಾಗಿದೆ. ಈಗ ರಚನೆಯಾಗಿರುವ ಸಮಿತಿಯಲ್ಲಿ ತಮ್ಮ ಮನವಿಯಂತೆ ಈಡಿಗ ಜನಾಂಗಕ್ಕೆ ಸೇರಿದ ಶ್ರೀ ರೇಣುಕಾನಂದ ಸ್ವಾಮೀಜಿಯವರನ್ನು ಸೇರ್ಪಡೆಗೊಳಿಸಲಾಗುವುದು. ಇವರು ಕೊಡುವ ಸಲಹೆ,

ಮಾರ್ಗದರ್ಶನವನ್ನು ತೆಗೆದುಕೊಂಡು ಸಮಿತಿ ಕಾರ್ಯ ಕೈಗೊಳ್ಳಲಿದೆ‌. ಈಗ ರಚನೆಯಾಗಿರುವ ಸಮಿತಿ ಸದ್ಯ ನಾಲ್ಕು ತಿಂಗಳವರೆಗೆ ಮುಂದುವರೆಯಲಿದೆ. ಬಳಿಕ ಸಮಿತಿ ಇರಬೇಕೋ ಅಥವಾ ಅದನ್ನು ಕೈ ಬಿಡಬೇಕೊ ಎಂಬ ಬಗ್ಗೆ ನಿರ್ಧರಿಸಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.

Singadur Swami meets CM1

ಬಂಜಾರ ಸಮಾಜದ ಸೇವಾಲಾಲ್ ಅರೇಮಲ್ಲಾಪುರದ ಪ್ರಣಯಾನಂದ ಸ್ವಾಮೀಜಿ, ಭಗೀರಥ ಮಠದ ಪುರುಷೋತ್ತಮ ಪುರಿ ಸ್ವಾಮೀಜಿ, ಕುಂಚಿಟಿಗ ಗುರುಪೀಠದ ಶಾಂತವೀರ ಸ್ವಾಮಿ, ಹೊಸದುರ್ಗ ಕನಕಗುರು ಪೀಠದ ಈಶ್ವರಾನಂದ ಪುರ ಸ್ವಾಮೀಜಿ, ತಿಗಳರ ಲಕ್ಷ್ಮೀನರಸಿಂಹ ಸ್ವಾಮಿ, ಮಡಿವಾಳರ ಮಾಚಿದೇವ ಶ್ರೀಗಳು, ಗಾಣಿಗರ ಡಾ‌ ಬಸವ ಕುಮಾರ ಸ್ವಾಮೀಜಿ, ಚಿತ್ರದುರ್ಗದ ಮೇದಾರ ಪೀಠದ ಬಸವ ಛಲವಾದಿಸ್ವಾಮಿ, ತೀರ್ಥಹಳ್ಳಿ ಮುಖಂಡರಾದ ಬೇಗುವಳ್ಳಿ ಸತೀಶ್ ಸೇರಿದಂತೆ ಅನೇಕರು ಹಾಜರಿದ್ದರು.

LEAVE A REPLY

Please enter your comment!
Please enter your name here