ಹುಬ್ಬಳ್ಳಿ: ಒಂದೆಡೆ ಕರ್ನಾಟಕದಲ್ಲಿ ಮುಂಬರುವ ವಿಧಾನಸಭೆ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಮತ್ತೊಂದೆಡೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಚರ್ಚೆ ಜೋರಾಗಿದೆ. ಅಲ್ಲದೇ ಇದು ಭಾರೀ ಕುತೂಹಲ ಮೂಡಿಸಿದೆ. ಸಿದ್ದರಾಮಯ್ಯ ಅವರು ಕೋಲಾರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಕೇವಲ ಸುಳಿವು ಮಾತ್ರ ಕೊಟ್ಟಿದ್ದಾರೆ. ಆದ್ರೆ, ಸಿದ್ದರಾಮಯ್ಯ ನೂರಕ್ಕೆ 99%ರಷ್ಟು ವರುಣಾ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುತ್ತಾರೆ ಎಂದು ಬಿಜೆಪಿ ಹಿರಿಯ ನಾಯಕರೊಬ್ಬರು ಭವಿಷ್ಯ ನುಡಿದಿದ್ದಾರೆ.
ಹುಬ್ಬಳ್ಳಿಯಲ್ಲಿ ಇಂದು)ನ.27) ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ನಾಯಕ ಬಸವರಾಜ್ ಹೊರಟ್ಟಿ, ನನಗೆ ಬಹಳ ಚೆನ್ನಾಗಿ ರಾಜಕಾರಣ ಗೊತ್ತಿದೆ. ಸಿದ್ದರಾಮಯ್ಯ ನೂರಕ್ಕೆ 99%ರಷ್ಟು ವರುಣಾ ಕ್ಷೇತ್ರದಿಂದಲೇ ನಿಲ್ಲುತ್ತಾರೆ. ಬಹಳ ಪಾಪ್ಯುಲರ್ ಆದ್ರೆ ಹೀಗೆ ಆಗತ್ತೆ. ಸಿದ್ದರಾಮಯ್ಯ ಬದಾಮಿಗೆ ಜಾತಿ ಮೇಲೆ ಬಂದು ನಿಂತ್ರು ಎಂದು ಹೇಳಿದರು.
ಸೋಲು ಗೆಲವು ಮುಖ್ಯ ಅಲ್ಲ ಎಂದು ಸಿದ್ದರಾಮಯ್ಯಗೆ ನಾನು ಹೇಳಿದ್ದೆ. ಒಂದು ಕ್ಷೇತ್ರ ಆಯ್ಕೆ ಮಾಡಕೊಬೇಕು. ಹೀಗಾಗಿ ಅವರು ವರುಣಾಗೆ ನಿಲ್ಲುತ್ತಾರೆ. ಸಿದ್ದರಾಮಯ್ಯ ,ಡಿಕೆಶಿವಕುಮಾರ್ ಇಬ್ಬರು ಮುಖ್ಯಮಂತ್ರಿ ಆಗಬೇಕು ಅಂತಿದ್ದಾರೆ. ಏನಾದ್ರೂ ಮಾಡಿ ಸಿದ್ದರಾಮಯ್ಯ ಹೋಗಲಿ ಅಂತಾ ಡಿಕೆಶಿವಕುಮಾರ್, ಡಿಕೆ ಶಿವಕುಮಾರ್ ಹೋಗಲಿ ಅಂತಾ ಸಿದ್ದರಾಮಯ್ಯ. ಆ ಕಾರಣಕ್ಕೆ ಹೀಗೆ ಆಗ್ತಿದೆ ಎಂದು ಹೊರಟ್ಟಿ ಲೇವಡಿ ಮಾಡಿದರು.
ಸಭಾಪತಿ ಸ್ಥಾನ ಕೊಡುವುದಾಗಿ ಬಿಜೆಪಿ ಹೇಳಿತ್ತು. ಬಿಜೆಪಿಯವರು ನನಗೆ ಕೊಟ್ಟ ಮಾತು ಉಳಸಿಕೊಂಡಿಲ್ಲ. ಮಾತು ಕೊಟ್ಟಂಗೆ nಡೆಯಬೇಕಿತ್ತು.ಇದೀಗ ನನಗೆ ಅದರ ಮೇಲೆ ಅಸೆನೇ ಹೋಗಿದೆ ಎಂದ ಬಸವರಾಜ ಹೊರಟ್ಟಿ ಅಸಮಾಧಾನ ಹೊರಹಾಕಿದರು.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ