Home Uncategorized ಸಿರಾಜ್ ಮಾರಕ ದಾಳಿಗೆ ಹರಿಣಗಳು ತತ್ತರ; ಕೇವಲ 55 ರನ್‌ ಗೆ ಆಲೌಟ್

ಸಿರಾಜ್ ಮಾರಕ ದಾಳಿಗೆ ಹರಿಣಗಳು ತತ್ತರ; ಕೇವಲ 55 ರನ್‌ ಗೆ ಆಲೌಟ್

26
0

ಕೇಪ್‌ಟೌನ್: ಮುಹಮ್ಮದ್ ಸಿರಾಜ್ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿದ ದಕ್ಷಿಣ ಆಫ್ರಿಕಾ ತಂಡ, ಕೇವಲ 55 ರನ್‌ಗಳಿಗೆ ಆಲೌಟ್ ಆದರು. ಸಿರಾಜ್ ಕೇವಲ 15 ರನ್ ನೀಡಿ ಆರು ವಿಕೆಟ್ ಕಬಳಿಸಿದರು. 

ಕೇವಲ 23.2 ಓವರ್ ಗಳಲ್ಲಿ ದಕ್ಷಿಣ ಆಫ್ರಿಕಾ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡತು.

ತಮ್ಮ ಎರಡನೆಯ ಓವರ್‌ನಲ್ಲಿಯೇ ಹರಿಣಗಳನ್ನು ಕಾಡಿದ ಸಿರಾಜ್, ದಕ್ಷಿಣ ಆಫ್ರಿಕಾದ ಮೊತ್ತ ಕೇವಲ ಐದು ರನ್ ಆಗಿದ್ದಾಗ ಆರಂಭಿಕ ಬ್ಯಾಟರ್ ಮರ್ಕ್ರಮ್ ಅವರನ್ನು ಪೆವಿಲಿಯನ್‌ಗೆ ಅಟ್ಟಿದರು. ನಂತರ ಸಿರಾಜ್‌ ಬೌಲಿಂಗ್ ಇನಿಂಗ್ಸ್ ಉದ್ದಕ್ಕೂ ಆರ್ಭಟಿಸಿತು. ಅವರಿಗೆ ಉತ್ತಮ ಬೆಂಬಲ ನೀಡಿದ ಜಸ್‌ಪ್ರೀತ್ ಬೂಮ್ರಾ ಹಾಗೂ ಮುಕೇಶ್ ಕುಮಾರ್ ಕೂಡಾ ತಲಾ ಎರಡು ವಿಕೆಟ್ ಪಡೆದರು.

LEAVE A REPLY

Please enter your comment!
Please enter your name here