ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ಹೆಣ್ಮಕ್ಕಳಿಗೆ ಭಾರೀ ಲಾಭ ಕೊಟ್ಟಿದೆ. ಆದರೆ ಹಲವೆಡೆ ಪ್ರಯಾಣಿಕರಿಗೆ ಅನೇಕ ರೀತಿಯ ಸಮಸ್ಯೆಗಳು ಎದುರಾಗಿವೆ. ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆ ಹೆಣ್ಮಕ್ಕಳಿಗೆ ಭಾರೀ ಲಾಭ ಕೊಟ್ಟಿದೆ. ಆದರೆ ಹಲವೆಡೆ ಪ್ರಯಾಣಿಕರಿಗೆ ಅನೇಕ ರೀತಿಯ ಸಮಸ್ಯೆಗಳು ಎದುರಾಗಿವೆ.
ಮಹಿಳಾ ಪ್ರಯಾಣಿಕರ ಸಂಖ್ಯೆ ಹೆಚ್ಚಾದ ಹಿನ್ನೆಲೆ ರಾಜ್ಯದಲ್ಲಿ ಕೆಲವು ಗೊಂದಲಗಳು ಉಂಟಾಗುತ್ತಿವೆ ತಳ್ಳಾಟ, ನೂಕಾಟ ಸೇರದಂತೆ ಜಡೆ ಜಗಳ ಸಹ ನಡೆದಿದೆ. ಕೆಲವು ಭಾಗಗಳಲ್ಲಿ ತಳ್ಳಾಟ, ನೂಕಾಟದಿಂದ ಬಸ್ ಬಾಗಿಲು, ಕಿಟಕಿಯ ಸರಪಳಿ ಕಿತ್ತುಕೊಂಡು ಬಂದಿದೆ. ಅಷ್ಟೇ ಅಲ್ಲಇದೀಗ ಫ್ರೀ ಬಸ್ನಲ್ಲಿ ಸೀಟ್ಗಾಗಿ ಮಾರಾಮಾರಿ ನಡೆದೇ ಬಿಟ್ಟಿದೆ.
ಮಹಿಳೆಯರು ಸೀಟ್ ವಿಚಾರಕ್ಕೆ ಜುಟ್ಟು ಹಿಡಿದು ಬಡಿದಾಡಿಕೊಂಡಿದ್ದಾರೆ. ಜಗಳ ಬಿಡಿಸಲು ಹೋದ ಗಂಡಸರು ಹೈರಾಣಗಿದ್ದಾರೆ. ಮೈಸೂರಿನ ಕೆಎಸ್ ಆರ್ ಟಿಸಿ ಬಸ್ ನಲ್ಲಿ ಮಹಿಳಾ ಪ್ರಯಾಣಿಕರು ಜುಟ್ಟು ಹಿಡಿದು ಜಗಳವಾಡಿಕೊಳ್ಳಲಾಗಿದೆ. ಫ್ರೀ ಬಸ್ನಲ್ಲಿ ಸೀಟ್ ಸಿಗದೇ ಜಟಾಪಟಿ ಹೆಚ್ಚಾಗುತ್ತಿದೆ. ಲೇಡೀಸ್ ಸೀಟ್ ಫೈಟ್ನ ದೃಶ್ಯ ಭಾರೀ ವೈರಲ್ ಆಗುತ್ತಿದೆ.
ಉಚಿತ ಪ್ರಯಾಣದ ವೇಳೆ ಬಸ್ ಸೀಟಿಗಾಗಿ ಮಹಿಳೆಯರು ಪರಸ್ಪರ ಜಡೆ ಹಿಡಿದು ಮಾರಾಮಾರಿ ನಡೆಸಿದ್ದಾರೆ..#KannadaNews #BreakingNews #KannadaLiveTv #LatestNews #KarnatakaNews #viralvideo#fighting @CMofKarnataka pic.twitter.com/AhrzHvzSyx— ಸತೀಶ್ ಕಂದಗಲ್ ಪುರ (@sathisho2555) June 20, 2023