Home ಕರ್ನಾಟಕ ಸುರಪುರ ನೂತನ ಶಾಸಕರಾಗಿ ರಾಜಾ ವೇಣುಗೋಪಾಲ ನಾಯಕ್ ಪ್ರಮಾಣ ವಚನ

ಸುರಪುರ ನೂತನ ಶಾಸಕರಾಗಿ ರಾಜಾ ವೇಣುಗೋಪಾಲ ನಾಯಕ್ ಪ್ರಮಾಣ ವಚನ

28
0

ಯಾದಗಿರಿ, ಜೂ.11: ಸುರಪುರ ವಿಧಾನಸಭಾ ಕ್ಷೇತ್ರಕ್ಕೆ ನಡೆದ ಉಪ ಚುನಾವಣೆಯಲ್ಲಿ ಶಾಸಕರಾಗಿ ಆಯ್ಕೆಯಾದ ರಾಜಾ ವೇಣುಗೋಪಾಲ ನಾಯಕ್ ಅವರು ವಿಧಾನ ಸೌಧದ ಮೊದಲನೇಯ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 106ರಲ್ಲಿ ಪ್ರಮಾಣವಚನ ಸ್ವೀಕರಿಸಿದರು.

ವಿಧಾನ ಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಫರೀದ್ ನೂತನ ಶಾಸಕರಾದ ರಾಜಾ ವೇಣುಗೋಪಾಲ ನಾಯಕ್ ಅವರಿಗೆ ಪ್ರಮಾಣವಚನ ಬೋಧಿಸಿ, ಅಭಿನಂದನೆ ಸಲ್ಲಿಸಿದರು.

ಈ ವೇಳೆ, ಸಣ್ಣ ಕೈಗಾರಿಕೆ ಮತ್ತು ಸಾರ್ವಜನಿಕ ಉದ್ಧಿಮೆ ಸಚಿವ ಶರಣಬಸಪ್ಪ ದರ್ಶನಾಪುರ, ಶಾಸಕರುಗಳಾದ ಬಿ.ಬಿ. ಚಿಮ್ಮನಕಟ್ಟೆ, ಅಲ್ಲಮ ಪ್ರಭು ಪಾಟೀಲ್, ಜಗದೇವ ಗುತ್ತೇದಾರ್, ಸಂಸದರಾದ ಕುಮಾರ್ ನಾಯಕ್, ವಿಧಾನ ಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಸೇರಿದಂತೆ ಇತರ ಗಣ್ಯರು ಉಪಸ್ಥಿತರಿದ್ದರು.

 

LEAVE A REPLY

Please enter your comment!
Please enter your name here