ಉಡುಪಿ, ಡಿ.23: ಸಾಲ ಮರುಪಾವತಿಸದೆ ಸೊಸೈಟಿಯೊಂದಕ್ಕೆ ವಂಚಿಸಿದ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಬಡಾನಿಡಿಯೂರಿನ ಸರಸು ಸುವರ್ಣ ಸೊಸೈಟಿಯೊಂದರಲ್ಲಿ 30 ಲಕ್ಷ ರೂ. ಸಾಲ ತೆಗೆದುಕೊಂಡಿದ್ದು, ಇದಕ್ಕಾಗಿ ನಿವೇಶನ ಹಾಗೂ ಮನೆಯನ್ನು ಅಡಮಾನವಾಗಿರಿಸಿಕೊಂಡಿದ್ದರು. ಈ ಅಡಮಾನ ಪತ್ರವು ಉಡುಪಿ ಉಪ ನೋಂದಣಾಧಿಕಾರಿಯವರ ಕಚೇರಿಯಲ್ಲಿ ನೋಂದಣಿ ಮಾಡಲಾಗಿದ್ದು, ಆ ನೋಂದಣಿ ಪತ್ರಕ್ಕೆ ವಿನೋದ್ ಅವರು ಸಾಕ್ಷಿಯಾಗಿದ್ದರು. ಈ ಸಾಲ ಸಂಪೂರ್ಣವಾಗಿ ಮರುಪಾವತಿಯಾಗಿರಲಿಲ್ಲ.
ಸೊಸೈಟಿಯಲ್ಲಿ ಸಾಲವಿದ್ದರೂ ಸರಸು ಸುವರ್ಣ ಹಾಗೂ ವಿನೋದ್ ಸೇರಿಕೊಂಡು ಅಡಮಾನವಿರಿಸಿದ ಆಸ್ತಿಯನ್ನು 2022ರಲ್ಲಿ ಆರೋಪಿ ವಿನೋದ್ ತನ್ನ ಹೆಸರಿಗೆ ಅಕ್ರಮವಾಗಿ ವರ್ಗಾಯಿಸಿಕೊಂಡು ಸೊಸೈಟಿಗೆ ದ್ರೋಹ ಎಸಗಿದ್ದಾರೆ ಎಂದು ಸೊಸೈಟಿಯ ಸಿಇಓ ಉಡುಪಿ ನಗರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.