Home Uncategorized ಸ್ಪೀಕರ್ ಯು .ಟಿ . ಖಾದರ್ ರನ್ನು ಭೇಟಿಯಾದ ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ ನಿಯೋಗ

ಸ್ಪೀಕರ್ ಯು .ಟಿ . ಖಾದರ್ ರನ್ನು ಭೇಟಿಯಾದ ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ ನಿಯೋಗ

34
0

ಮಂಗಳೂರು: ಬ್ಯಾರೀಸ್ ವೆಲ್ಫೇರ್ ಫೋರಂ ಅಬುಧಾಬಿ ಇದರ ನಿಯೋಗವೊಂದು ಸ್ಪೀಕರ್  ಯು .ಟಿ . ಖಾದರ್ ಫರೀದ್ ರನ್ನು ಭೇಟಿಯಾಗಿ ಗಲ್ಫ್ ಕನ್ನಡಿಗರ ಸ್ಥಿತಿ ಗತಿಗಳ ಕುರಿತು ಚರ್ಚಿಸಿತು.

ಫೆಬ್ರವರಿ -2024 ಬ್ಯಾರೀಸ್ ವೆಲ್ಫೇರ್ ಫೋರಂ ನ ವತಿಯಿಂದ ನಡೆಯುವ 8ನೇ ಸರಳ ಸಾಮೂಹಿಕ ವಿವಾಹಕ್ಕೆ ಸ್ಪೀಕರ್ ಅವರನ್ನು  ಆಹ್ವಾನಿಸಲಾಯಿತು.

ಇದಕ್ಕೆ ಸಕಾರಾತ್ಮಕ ವಾಗಿ ಸ್ವಂದಿಸಿದ ಸ್ಪೀಕರ್ ಬಿ ಡಬ್ಲ್ಯೂ ಎಫ್ ನೊಂದಿಗಿನ ತಮ್ಮ ಹಲವಾರು ವರ್ಷಗಳ ಸೌರ್ಹಾದ ಸಂಬಂಧವನ್ನು ಸ್ಮರಿಸಿದರು. ಅವರಿಗೆ ಶಾಲು ಹೊದಿಸಿ ಗೌರವ ಪೂರ್ವಕವಾಗಿ ಸನ್ಮಾನಿಸಲಾಯಿತು.

ನಿಯೋಗದಲ್ಲಿ ಅಧ್ಯಕ್ಷ ಮಹಮ್ಮದ್ ಆಲಿ ಉಚ್ಚಿಲ, ಬಷೀರ್ ಬಜ್ಪೆ , ಹಂಝ ಕಣ್ಣಂಗಾರ್, ಹನೀಫ್ ಉಳ್ಳಾಲ್, ಸಿರಾಜ್ ಮತ್ತು ಯುನಿಟಿ ಹಾಲ್ ಮಾಲಕ ಮೋಹಮ್ಮದ್ ಫೈಝಲ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here