ಬೆಂಗಳೂರು: ನಗರದ ಬ್ರೂಕ್‍ಫೀಲ್ಡ್ ಬಳಿಯ ರಾಮೇಶ್ವರಂ ಕೆಫೆಯಲ್ಲಿ ಸ್ಫೋಟ ಪ್ರಕರಣದ ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಫೆ ಪುನಾರಂಭವನ್ನು ಮಾ.8ರ ಬದಲು ಬೇರೆ ದಿನಾಂಕಕ್ಕೆ ಮುಂದೂಡಿಕೆ ಮಾಡಲಾಗಿದೆ ಎಂದು ಮಾಲಕ ರಾಘವೇಂದ್ರ ರಾವ್ ಮಾಹಿತಿ ನೀಡಿದ್ದಾರೆ.
ಸೋಮವಾರ ಈ ಬಗ್ಗೆ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ಮಾ.8ರಂದು ಕೆಫೆಯನ್ನು ಪುನರಾರಂಭಿಸಲು ಮುಂದಾಗಿದ್ದೆ. ಆದರೆ, ಸಿಸಿಬಿ ಅಧಿಕಾರಿಗಳ ತಂಡ ವಿವಿಧ ಆಯಾಮಗಳಲ್ಲಿ ಪ್ರಕರಣದ ತನಿಖೆಯನ್ನು ಕೈಗೊಂಡಿರುವ ಹಿನ್ನೆಲೆ ಎನ್‍ಒಸಿ ನೀಡಲು ಪೊಲೀಸರು ನಿರಾಕರಿಸಿರುವುದರಿಂದ ಪುನಾರಂಭವನ್ನು ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.
ಸ್ಫೋಟದ ಘಟನೆಗೆ ಸಂಬಂಧಿಸಿದಂತೆ ಕೆಲವು ಸಾಕ್ಷಿಗಳಿಗಾಗಿ ಇಲ್ಲಿನ ಸ್ಥಳದ ಪರಿಶೀಲನೆ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕೆಫೆ ಪುನಾರಂಭ ಮಾಡುವುದು ಬೇಡವೆಂದು ಪೊಲೀಸ್ ಇಲಾಖೆಯಿಂದ ಸೂಚನೆ ಬಂದಿರುವುದಾಗಿ ಮಾಲಕ ರಾಘವೇಂದ್ರ ರಾವ್ ಹೇಳಿದ್ದಾರೆ.