Home ಕರ್ನಾಟಕ ಸ್ವಾಮೀಜಿ ಹೇಳಿದರೆ ಸಿಎಂ ಬದಲಾವಣೆ ಆಗಲ್ಲ : ಶಾಮನೂರು ಶಿವಶಂಕರಪ್ಪ

ಸ್ವಾಮೀಜಿ ಹೇಳಿದರೆ ಸಿಎಂ ಬದಲಾವಣೆ ಆಗಲ್ಲ : ಶಾಮನೂರು ಶಿವಶಂಕರಪ್ಪ

16
0

ದಾವಣಗೆರೆ : ಮುಖ್ಯಮಂತ್ರಿ ಬದಲಾವಣೆ ಮಾಡಬೇಕೆಂದು ಸ್ವಾಮೀಜಿಗಳು ಹೇಳಿದರೆ ಬದಲಾಯಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.

ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿ ಒಳ್ಳೆ ಆಡಳಿತ ಮಾಡುತ್ತಿದ್ದಾರೆ. ಇದಕ್ಕೆ ಹೈಕಮಾಂಡ್ ಸರಿಯಾದ ಉತ್ತರ ನೀಡುತ್ತೆ, ಹೈಕಮಾಂಡ್ ಹೇಳಿದಂತೆ ಅವರು ನಡೆಯಬೇಕು ಎಂದರು.

ಜಾತಿವಾರು ಡಿಸಿಎಂ ಹುದ್ದೆಯನ್ನು ಮಾಡಲು ಸಾಧ್ಯವಿಲ್ಲ. ಒಂದು ವೇಳೆ ಈ ಹುದ್ದೆ ಹೆಚ್ಚುವರಿ ಮಾಡಬೇಕಾದರೆ ಹೈಕಮಾಂಡ್ ಮಾತ್ರ ಮಾಡಬಹುದಾಗಿದೆ ಎಂದ ಅವರು, ರಾಜ್ಯ ಸರಕಾರವೂ ಒಳ್ಳೆಯ ರೀತಿಯಲ್ಲಿ ಆಡಳಿತ ನೀಡುತ್ತಿದ್ದು, ಜನರಿಗೆ ಅನುಕೂಲವಾಗುವಂತೆ ನಡೆದುಕೊಳ್ಳುತ್ತಿದೆ ಎಂದು ಹೇಳಿದರು.

LEAVE A REPLY

Please enter your comment!
Please enter your name here