Home Uncategorized ಹತ್ತು ಬಾರಿ ಹುಟ್ಟಿ ಬಂದ್ರೂ ಕಾಂಗ್ರೆಸ್​ ಪಕ್ಷ ಬ್ಯಾನ್ ಆಗಲ್ಲ: ಈಶ್ವರಪ್ಪಗೆ ಟಾಂಗ್​ ಕೊಟ್ಟ ಬಿ.ಕೆ.‌ಹರಿಪ್ರಸಾದ್

ಹತ್ತು ಬಾರಿ ಹುಟ್ಟಿ ಬಂದ್ರೂ ಕಾಂಗ್ರೆಸ್​ ಪಕ್ಷ ಬ್ಯಾನ್ ಆಗಲ್ಲ: ಈಶ್ವರಪ್ಪಗೆ ಟಾಂಗ್​ ಕೊಟ್ಟ ಬಿ.ಕೆ.‌ಹರಿಪ್ರಸಾದ್

43
0

ಕಾರವಾರ: ಕಾಂಗ್ರೆಸ್ ಪಕ್ಷವನ್ನು ಯಾರೂ ಬ್ಯಾನ್ (banned) ಮಾಡಲು ಆಗುವುದಿಲ್ಲ. ಇವರು ಮಾತ್ರವಲ್ಲ ಇಡೀ ವಂಶ 10 ಬಾರಿ ಹುಟ್ಟಿ ಬಂದ್ರೂ ಬ್ಯಾನ್ ಆಗಲ್ಲ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ವಿರುದ್ಧ ಕಾಂಗ್ರೆಸ್ ಮುಖಂಡ ಬಿ.ಕೆ.‌ಹರಿಪ್ರಸಾದ್ ವಾಗ್ದಾಳಿ ಮಾಡಿದರು. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಸುಳ್ಳನ್ನೇ ಪದೇ ಪದೆ ಹೇಳಿ ಸತ್ಯ ಮಾಡುವುದೇ ಈಶ್ವರಪ್ಪ ಕೆಲಸ. ಕಾಂಗ್ರೆಸ್ ಜನ ಕಟ್ಟಿದ ಪಕ್ಷವೇ ಹೊರತು ನಾಗ್ಪುರ ಪಾರ್ಟಿ ಅಲ್ಲ. ಜನರು ಕಟ್ಟಿದ ಕಾಂಗ್ರೆಸ್ ಪಕ್ಷವನ್ನು ಏನೂ ಮಾಡಲು ಆಗಲ್ಲ ಎಂದು ಕಿಡಿಕಾರಿದರು. ಉಗ್ರರ ವಿರುದ್ಧ ಹೋರಾಡಲು ನಾವು ಬಿಜೆಪಿಯಿಂದ ಕಲಿಬೇಕಿಲ್ಲ. ಬಿಜೆಪಿಯವರ ಸರ್ಟಿಫಿಕೇಟ್​ ಕೂಡ ಬೇಕಿಲ್ಲ. ಮಹಾತ್ಮ ಗಾಂಧಿ ಕೊಂದಿದ್ದು ಯಾರು ಎಂದು ಇವರು ಹೇಳಲಿ. ರಾಷ್ಟ್ರದ ಏಕತೆಗೆ ಧಕ್ಕೆ ಬಂದಾಗ ಪ್ರಾಣಾರ್ಪಣೆ ಮಾಡಿದ್ದು ಇಂದಿರಾ. ಸಾವಿರಾರು ಜನ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ್ದಾರೆ ಎಂದರು.

ಬ್ರಿಟಿಷರ ಬೂಟು ನೆಕ್ಕುವ ಜನರಿಂದ ನಾವೇನು ಕಲಿಯಬೇಕಾಗಿಲ್ಲ. ಭಯೋತ್ಪಾದಕರು ಅಂದ್ರೆ ಕಾಂಗ್ರೆಸ್​ಗೆ ಪ್ರೀತಿ ಅಂತಾ ಹೇಳುವ ಇವರು ಮನೆ ಅಳಿಯನ ನೀರಿ ಉಗ್ರಗಾಮಿಯನ್ನ ಕಂದಹಾರ್​ನಲ್ಲಿ ಬಿಟ್ಟರು. ಬಿಜೆಪಿ ನಾಯಕರಿಂದ ನಾವು ದೇಶ ಪ್ರೇಮ ಕಲಿಯಬೇಕಿಲ್ಲ ಎಂದು ಬಿ.ಕೆ.ಹರಿಪ್ರಸಾದ್​ ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಡಿಕೆ ಶಿವಕುಮಾರ್ ಉಗ್ರನ ಪರ ಮಾತನಾಡಿದ್ದಾರೆ, ಕೂಡಲೇ ಅವರನ್ನು ಕಾಂಗ್ರೆಸ್​ನಿಂದ ವಜಾ ಮಾಡಬೇಕು: ಕೆ.ಎಸ್.ಈಶ್ವರಪ್ಪ ಆಗ್ರಹ

ಕಾಂಗ್ರೆಸ್ ಪಕ್ಷದ ನಾಯಕತ್ವ, ಸಿದ್ಧಾಂತ ಒಪ್ಪಿಕೊಂಡು ಬರುವವರಿಗೆ ಸ್ವಾಗತ

ಕಾಂಗ್ರೆಸ್ ಪಕ್ಷದ ನಾಯಕತ್ವ, ಸಿದ್ಧಾಂತ ಒಪ್ಪಿಕೊಂಡು ಬರುವವರಿಗೆ ಸ್ವಾಗತ ಮಾಡುತ್ತೇವೆ. ಅದು ರಿವರ್ಸ್ ಆಗೋದಿಲ್ಲ. ಬಿಜೆಪಿಯವರು ಕಾಂಗ್ರೆಸ್ ನಾಯಕರನ್ನೇ ಖರೀದಿಸಿ, ಕಳ್ಳತನ ಮಾಡಿಕೊಂಡು ಕರೆದುಕೊಂಡು ಹೋಗಿರುವಂತದ್ದು. ಬಿಜೆಪಿ ಸರ್ಕಾರ ಬಂದ್ರೆ ಏನೋ ಮಾಡ್ತವಿ ಅಂತಾ ಆಕಾಶ ತೋರಿಸುತ್ತಿದ್ದರು. ಮಾಡೋ ತಪ್ಪು ಎಲ್ಲ ಮಾಡ್ಬಿಟ್ಟು ಆ ಮೇಲೆ ದೇಶಭಕ್ತಿ, ರಾಷ್ಟ್ರ ಭಕ್ತಿ ಅಂತಾರೆ ಎಂದು ಕಿಡಿಕಾರಿದರು.

ನಾಥುರಾಮ ಗೊಡ್ಸೆಯನ್ನು ಉಗ್ರವಾದಿ ಎಂದು ಬಿಜೆಪಿ ಮೊದಲು ಒಪ್ಪಲಿ: ಬಿ.ಕೆ.ಹರಿಪ್ರಸಾದ್ ಸವಾಲ್

ಉಗ್ರವಾದಕ್ಕೆ ಕಾಂಗ್ರೆಸ್ ಬೆಂಬಲ ನೀಡುತ್ತಿದೆ ಎಂಬ ಬಿಜೆಪಿ ಆರೋಪ ವಿಚಾರವಾಗಿ ಪ್ರತ್ರಿಕ್ರಿಯೆ ನೀಡಿದ್ದು, ರಾಷ್ಟ್ರದ ಮೊಟ್ಟ ಮೊದಲನೇಯ ಟೆರರಿಸ್ಟ್, ಕೊಲೆಗಟುಕ ನಾಥುರಾಮ ಗೊಡ್ಸೆಯನ್ನು ಉಗ್ರವಾದಿ ಎಂದು ಬಿಜೆಪಿ ಮೊದಲು ಒಪ್ಪಲಿ. ಆಗ ನಾವು ಹೇಳ್ತೇವೆ ಯಾರು ಉಗ್ರವಾದಿ, ಯಾರು ಉಗ್ರವಾದಿಯಲ್ಲ ಎಂದು ಸವಾಲ್​ ಹಾಕಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

LEAVE A REPLY

Please enter your comment!
Please enter your name here