ಜೆರುಸಲೆಂ/ವಾಷಿಂಗ್ಟನ್: ಇಸ್ರೇಲ್ (Israel) ಮೇಲೆ ನಡೆಯುತ್ತಿರುವ ಹಮಾಸ್ ಉಗ್ರರ ಅಟ್ಟಹಾಸವನ್ನು ಹತ್ತಿಕ್ಕಲು ಅಮೆರಿಕ (USA) ಇಸ್ರೇಲ್‌ಗೆ ಬೆಂಬಲ ಘೋಷಣೆ ಮಾಡಿದ್ದು, ಅಮೆರಿಕದ ಶಸ್ತ್ರಾಸ್ತ್ರಗಳನ್ನು ಹೊತ್ತ ಮೊದಲ ವಿಮಾನವು ದಕ್ಷಿಣ ಇಸ್ರೇಲ್‌ಗೆ ಬಂದಿಳಿದಿದೆ.
ಭಾರೀ ಶಸ್ತ್ರಾಸ್ತ್ರಗಳನ್ನು ಹೊತ್ತ ಯುಎಸ್ ಮೊದಲ ವಿಮಾನವು ದಕ್ಷಿಣ ಇಸ್ರೇಲ್‌ನ ನೆವಾಟಿಮ್ ವಾಯುನೆಲೆಗೆ ಬಂದಿಳಿದಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (IDF) ಹೇಳಿಕೊಂಡಿದೆ. ಆದ್ರೆ ಯಾವೆಲ್ಲಾ ಮಿಲಿಟರಿ ಉಪಕರಣಗಳನ್ನು ಬಹಿರಂಗಪಡಿಸಿಲ್ಲ
ಈ ಕುರಿತು ಮಾತನಾಡಿರುವ ಯುಎಸ್ ಅಧ್ಯಕ್ಷ ಜೋ ಬೈಡನ್ (Joe Biden), ಇಸ್ರೇಲ್ ಅನ್ನು ನಿರ್ನಾಮ ಮಾಡುವುದು ಹಾಗೂ ಯಹೂದಿ ಜನರನ್ನು ಕೊಲ್ಲುವುದೇ ಹಮಾಸ್‌ನ ಉದ್ದೇಶವಾಗಿದೆ. ಇಸ್ರೇಲ್ ಹಾಗೂ ಹಮಾಸ್ ಸಂಘರ್ಷದಲ್ಲಿ ಇಲ್ಲಿಯವರೆಗೆ 14 ಜನ ಅಮೆರಿಕನ್ನರು ಸಾವನ್ನಪ್ಪಿದ್ದಾರೆ. ಇಸ್ರೇಲ್‌ನಲ್ಲಿ ಸುಮಾರು 1,000 ನಾಗರಿಕರ ಹತ್ಯೆಯಾಗಿದೆ.ಹಮಾಸ್ ಶನಿವಾರ ಇಸ್ರೇಲ್ ಮೇಲೆ ದಾಳಿ ಪ್ರಾರಂಭಿಸಿದ್ದು, ನೂರಾರು ಜನರನ್ನು ಕೊಂದಿದೆ. ಇದು ದಶಕದಲ್ಲಿಯೇ ಅತಿ ದೊಡ್ಡ ಹಿನ್ನಡೆಯಾಗಿದೆ. ಇಸ್ರೇಲ್ ಈ ದಾಳಿಗೆ ಪ್ರತಿಯಾಗಿ ಈಗಾಗಲೇ ಗಾಜಾದ ಮೇಲೆ ವೈಮಾನಿಕ ದಾಳಿ ನಡೆಸಿದೆ ಹಾಗೂ 800ಕ್ಕೂ ಅಧಿಕ ಜನರನ್ನು ಕೊಂದಿದೆ. ಈ ಪ್ರದೇಶದಲ್ಲಿ ಅಮೆರಿಕ ತನ್ನ ಮಿಲಿಟರಿ ಬಲವನ್ನು ಹೆಚ್ಚಿಸಿದೆ ಎಂದು ಹೇಳಿದ್ದಾರೆ.
The post ಹಮಾಸ್ ಉಗ್ರರ ಅಟ್ಟಹಾಸ: ಇಸ್ರೇಲ್‌ಗೆ ಬಂದಿಳಿದ ಅಮೆರಿಕದ ಶಸ್ತ್ರಾಸ್ತ್ರ ಹೊತ್ತ ಮೊದಲ ವಿಮಾನ appeared first on Ain Live News.