Home Uncategorized ಹಮಾಸ್ ಹಣಕಾಸಿನ ಜಾಲದ ಬಗ್ಗೆ ಮಾಹಿತಿಗೆ 10 ದಶಲಕ್ಷ ಡಾಲರ್ ಬಹುಮಾನ ಘೋಷಿಸಿದ ಅಮೆರಿಕ

ಹಮಾಸ್ ಹಣಕಾಸಿನ ಜಾಲದ ಬಗ್ಗೆ ಮಾಹಿತಿಗೆ 10 ದಶಲಕ್ಷ ಡಾಲರ್ ಬಹುಮಾನ ಘೋಷಿಸಿದ ಅಮೆರಿಕ

79
0

ವಾಷಿಂಗ್ಟನ್: ಹಮಾಸ್ ಗೆ ಆರ್ಥಿಕ ನೆರವು ನೀಡುವ ಐದು ಜನರ ಬಗ್ಗೆ ಅಥವಾ ಹಮಾಸ್‌ ನ ಆರ್ಥಿಕ ವ್ಯವಸ್ಥೆಯ ಕಾರ್ಯವಿಧಾನಗಳನ್ನು ಅಡ್ಡಿಪಡಿಸಲು ಕಾರಣವಾಗುವ ಮಾಹಿತಿ ನೀಡಿದವರಿಗೆ 10 ದಶಲಕ್ಷ ಡಾಲರ್ ಬಹುಮಾನ ನೀಡುವುದಾಗಿ ಅಮೆರಿಕದ ವಿದೇಶಾಂಗ ಇಲಾಖೆ ಶುಕ್ರವಾರ ಘೋಷಿಸಿದೆ.

ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ಹಮಾಸ್ ನಡೆಸಿದ ಮಾರಣಾಂತಿಕ ದಾಳಿಯ ಬಳಿಕ ಹಮಾಸ್ ವಿರುದ್ಧ ಅಮೆರಿಕ 4 ಸುತ್ತಿನ ನಿರ್ಬಂಧ ಜಾರಿಗೊಳಿಸಿತ್ತು. ಇದಕ್ಕೆ ಪೂರಕವಾಗಿ ಹಮಾಸ್‌ ನ ಹಣಕಾಸು ನೆರವಿನ ಮೂಲವನ್ನು ನಾಶಗೊಳಿಸಲು ಅಮೆರಿಕ ನಿರ್ಧರಿಸಿದೆ. ಹಮಾಸ್‌ ನ ಯಾವುದೇ ಆದಾಯ ಮೂಲಗಳು, ಪ್ರಮುಖ ದೇಣಿಗೆದಾರರು, ಹಮಾಸ್‌ ಗೆ ವಹಿವಾಟುಗಳನ್ನು ಸುಗಮಗೊಳಿಸುವ ಹಣಕಾಸು ಸಂಸ್ಥೆಗಳು, ದ್ವಿ-ಬಳಕೆಯ ತಂತ್ರಜ್ಞಾನವನ್ನು ಸಂಗ್ರಹಿಸುವ ಮುಂಚೂಣಿ ಸಂಸ್ಥೆಗಳು ಮತ್ತು ಹಮಾಸ್‌ ಗೆ ಪ್ರಯೋಜನವಾಗುವ ಕ್ರಿಮಿನಲ್ ಯೋಜನೆಗಳ ಕುರಿತ ಮಾಹಿತಿ ಒದಗಿಸುವವರಿಗೆ 10 ದಶಲಕ್ಷ ಡಾಲರ್ ಬಹುಮಾನ ನೀಡುವುದಾಗಿ ವಿದೇಶಾಂಗ ಇಲಾಖೆ ಘೋಷಿಸಿದೆ.

LEAVE A REPLY

Please enter your comment!
Please enter your name here