Home ಕರ್ನಾಟಕ ಹಾವೇರಿ: : ಮನೆಯ ಯಜಮಾನನ್ನು ಕಳೆದುಕೊಂಡ ದುಃಖದ ನಡುವೆಯೂ ಮತ ಚಲಾಯಿಸಿ ಮಾದರಿಯಾದ ಕುಟುಂಬ

ಹಾವೇರಿ: : ಮನೆಯ ಯಜಮಾನನ್ನು ಕಳೆದುಕೊಂಡ ದುಃಖದ ನಡುವೆಯೂ ಮತ ಚಲಾಯಿಸಿ ಮಾದರಿಯಾದ ಕುಟುಂಬ

39
0

ಹಾವೇರಿ, ಮೇ 7: ಮನೆಯ ಯಜಮಾನನ್ನು ಕಳೆದುಕೊಂಡ ದುಃಖದ ನಡುವೆಯೂ ಕುಟುಂಬದ ಸದಸ್ಯರು ಬೆಳಗ್ಗೆಯೇ ಮತಗಟ್ಟೆಗೆ ಆಗಮಿಸಿ ಮತದಾನ ಮಾಡುವ ಮೂಲಕ ಮಾದರಿಯಾದ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಶಂಕ್ರಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ಶಂಕ್ರಿಕೊಪ್ಪ ಗ್ರಾಮದ ವಾಟರ್ ಮ್ಯಾನ್ ಆಗಿದ್ದ ನಾಗಪ್ಪ ಕಾಳಂಗಿ ಅವರು ಸೋಮವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಅಂತ್ಯಕ್ರಿಯೆ ಇಂದು ನೆರವೇರಬೇಕಿದೆ. ಈ ನಡುವೆ ಇಂದು ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಚುನಾವಣೆಯಲ್ಲಿ ನಾಗಪ್ಪ ಕಾಳಂಗಿಯವರ ಕುಟುಂಬ ದುಃಖದ ನಡುವೆಯೂ ಮತದಾನ ಮಾಡಿ ಗಮನ ಸೆಳೆದರು.

ಮನೆ ಯಜಮಾನನ ಅಂತ್ಯಕ್ರಿಯೆಗೂ ಮುನ್ನ ನಾಗಪ್ಪರ ಪತ್ನಿ ಚಿನ್ನವ್ವ, ಮಗ ಮಾಲತೇಶ್, ಮಗಳು ಜ್ಯೋತಿ ಅವರು ಗ್ರಾಮದ ಪ್ರಾಥಮಿಕ ಶಾಲೆಯಲ್ಲಿರುವ ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸಿದರು.

LEAVE A REPLY

Please enter your comment!
Please enter your name here