ಉಡುಪಿ, ಜ.1: ಮೂಲತಃ ಹಾವೇರಿ ಜಿಲ್ಲೆ ಹಾನಗಲ್ ತಾಲೂಕು ಕುಂಬಾರಿ ಓಣಿ ನಿವಾಸಿಯಾಗಿರುವ ಹುಲಗೆಪ್ಪ ಬಂಗಾರಿ (32) ಎಂಬ ಯುವಕ ಕೆಲಸಕ್ಕಾಗಿ ಕಟಪಾಡಿಗೆ ಬಂದಿದ್ದು, ಅಕ್ಟೋಬರ್ 12ರಿಂದ ನಾಪತ್ತೆಯಾಗಿದ್ದಾರೆ.
5 ಅಡಿ 10 ಇಂಚು ಎತ್ತರ, ಎಣ್ಣೆ ಕಪ್ಪು ಮೈ ಬಣ್ಣ ಹೊಂದಿದ್ದು, ಕನ್ನಡ ಮತ್ತು ಹಿಂದಿ ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಕಾಪು ಪೊಲೀಸ್ ಠಾಣೆ ದೂ.ಸಂಖ್ಯೆ: 0820-2551033, ಕಾಪು ವೃತ್ತ ನಿರೀಕ್ಷಕರ ಕಚೇರಿ ದೂ.ಸಂಖ್ಯೆ: 0820-2572333, ಪೊಲೀಸ್ ಉಪಾಧೀಕ್ಷಕರ ಕಛೇರಿ ದೂ.ಸಂಖ್ಯೆ :08258-231333, ಪೊಲೀಸ್ ಅಧೀಕ್ಷಕರ ಕಛೇರಿ ದೂ.ಸಂಖ್ಯೆ:0820-2534777 ಹಾಗೂ ಜಿಲ್ಲಾ ನಿಸ್ತಂತು ಕೊಠಡಿ ದೂ.ಸಂಖ್ಯೆ: 0820-2526444 ಅನ್ನು ಸಂಪರ್ಕಿಸಬಹುದು ಎಂದು ಕಾಪು ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.