Home ಕರ್ನಾಟಕ ಹಾಸನ | ಪ್ರಜ್ವಲ್‌ ಸರಕಾರಿ ನಿವಾಸಕ್ಕೆ ಎಫ್‌ಎಸ್‌ಎಲ್‌ ತಂಡ ಭೇಟಿ

ಹಾಸನ | ಪ್ರಜ್ವಲ್‌ ಸರಕಾರಿ ನಿವಾಸಕ್ಕೆ ಎಫ್‌ಎಸ್‌ಎಲ್‌ ತಂಡ ಭೇಟಿ

21
0

ಹಾಸನ : ಲೈಂಗಿಕ ಹಗರಣ ಸಂಬಂಧ  ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿರುವ ಹಿನ್ನಲೆ ನಗರದಲ್ಲಿರುವ ಸಂಸದರ ನಿವಾಸಕ್ಕೆ ಎಫ್‌ಎಸ್‌ಎಲ್‌  ಅಧಿಕಾರಿಗಳ ತಂಡ ಭೇಟಿ ನೀಡಿದ್ದು, ಸಾಕ್ಷ್ಯ ಸಂಗ್ರಹ ಮಾಡುತ್ತಿರುವುದಾಗಿ ವರದಿಯಾಗಿದೆ.

ಹಾಸನದ ಆರ್.ಸಿ.ರಸ್ತೆಯಲ್ಲಿರುವ ಸಂಸದರ ನಿವಾಸಕ್ಕೆ ಹಾಕಿದ್ದ ಬೀಗವನ್ನು ಸ್ಥಳೀಯ ಪೊಲೀಸರ ನೆರವಿನಿಂದ ತೆರೆದು ಎಫ್‌ಎಸ್‌ಎಲ್‌ ಸಿಬ್ಬಂದಿ ಒಳ ಪ್ರವೇಶಿಸಿ ಸಾಕ್ಷ್ಯಗಳ ಹುಡುಕಾಟ ಆರಂಭಿಸಿದ್ದಾರೆ.

ಪ್ರಕರಣದ ಪ್ರಮುಖ ಆರೋಪಿ ಸಂಸದ ಪ್ರಜ್ವಲ್‌ ರೇವಣ್ಣ ಪತ್ತೆಗೆ ಇಂಟರ್‌ ಪೋಲ್‌ ಬ್ಲೂ ಕಾರ್ನರ್‌  ನೋಟಿಸ್‌ ಜಾರಿಗೊಳಿಸಿದ್ದರೂ ಆರೋಪಿಯು ಯಾವ ದೇಶದಲ್ಲಿ ಇದ್ದಾರೆ ಎಂಬ ಸುಳಿವು ಪತ್ತೆಯಾಗಿಲ್ಲ ಎನ್ನಲಾಗಿದೆ.

LEAVE A REPLY

Please enter your comment!
Please enter your name here