Home Uncategorized ಹಾಸನ ಮಿಕ್ಸರ್ ಗ್ರೈಂಡರ್ ಸ್ಫೋಟ ಪ್ರಕರಣ: ಪೊಲೀಸರಿಂದ ಓರ್ವನ ಬಂಧನ; ವಿಚ್ಛೇದಿತ ಮಹಿಳೆಯ ಹಿಂದೆ ಬಿದ್ದ...

ಹಾಸನ ಮಿಕ್ಸರ್ ಗ್ರೈಂಡರ್ ಸ್ಫೋಟ ಪ್ರಕರಣ: ಪೊಲೀಸರಿಂದ ಓರ್ವನ ಬಂಧನ; ವಿಚ್ಛೇದಿತ ಮಹಿಳೆಯ ಹಿಂದೆ ಬಿದ್ದ ಪಾಗಲ್ ಪ್ರೇಮಿ ಕೃತ್ಯ?

52
0

ಹಾಸನದ ಕುವೆಂಪುನಗರ ಕೊರಿಯರ್ ಸೆಂಟರ್‌ನಲ್ಲಿ ಮಿಕ್ಸರ್ ಗ್ರೈಂಡರ್ ಸ್ಫೋಟಗೊಂಡು ಡಿಟಿಡಿಸಿ ಕೊರಿಯರ್ ಸೆಂಟರ್ ಮಾಲೀಕ ಶಶಿಕುಮಾರ್ ತೀವ್ರವಾಗಿ ಗಾಯಗೊಂಡ ಪ್ರಕರಣ ಸಂಬಂಧ ಓರ್ವನನ್ನು ಪೊಲೀಸರು ಬಂದಿಸಿದ್ದಾರೆ ಬೆಂಗಳೂರು: ಹಾಸನದ ಕುವೆಂಪುನಗರ ಕೊರಿಯರ್ ಸೆಂಟರ್‌ನಲ್ಲಿ ಮಿಕ್ಸರ್ ಗ್ರೈಂಡರ್ ಸ್ಫೋಟಗೊಂಡು ಡಿಟಿಡಿಸಿ ಕೊರಿಯರ್ ಸೆಂಟರ್ ಮಾಲೀಕ ಶಶಿಕುಮಾರ್ ತೀವ್ರವಾಗಿ ಗಾಯಗೊಂಡ ಪ್ರಕರಣ ಸಂಬಂಧ ಓರ್ವನನ್ನು ಪೊಲೀಸರು ಬಂದಿಸಿದ್ದಾರೆ.

ಮಹಿಳೆಗೆ ಪಾರ್ಸೆಲ್ ಕಳುಹಿಸದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ, ಆದರೆ ಸೋಮವಾರ ಸಂಜೆ ಅದನ್ನು ತೆರೆದ ನಂತರ ಏಕೆ ಸ್ಫೋಟಿಸಿತು ಎಂಬ ಬಗ್ಗೆ ಪೊಲೀಸರಿಗೆ ಇನ್ನೂ ಸರಿಯಾದ ಮಾಹಿತಿ ಸಿಕ್ಕಿಲ್ಲ. ಪಾರ್ಸೆಲ್ ಕಳುಹಿಸಿದ್ದವರ ವಿಳಾಸವಿಲ್ಲದ ಕಾರಣ ಮಹಿಳೆ ಅದನ್ನು ಹಿಂತಿರುಗಿಸಿದ್ದಾರೆ.

ಕಳುಹಿಸಿದವರ ಹೆಸರು ಮತ್ತು ವಿಳಾಸವನ್ನು ಬಹಿರಂಗಪಡಿಸಲು ನಿರಾಕರಿಸಿದ ಎಸ್ಪಿ ಹರಿರಾಮ್ ಶಂಕರ್, ವಿಧಿ ವಿಜ್ಞಾನ ಪ್ರಯೋಗಾಲಯದಿಂದ ವರದಿ ಪಡೆದ ನಂತರ ವಿವರಗಳನ್ನು ಹಂಚಿಕೊಳ್ಳುವುದಾಗಿ ಹೇಳಿದರು. ಘಟನೆಯ ಹಿಂದೆ ವೈಯಕ್ತಿಕ ದ್ವೇಷ ಇರಬಹುದೆಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.

ವಿಧವೆಯಾಗಿರುವ ಮಹಿಳೆ ಒಂದೇ ವ್ಯಕ್ತಿಯಿಂದ ಮೂರು ಸಣ್ಣ ಪಾರ್ಸೆಲ್‌ಗಳು ಬಂದಿದ್ದವು, ಆದರೆ  ಅವುಗಳನ್ನು ತೆರೆಯದೆ ಬಿಸಾಡಿದ್ದರು ಎಂದು ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here