Home Uncategorized ಹಿಜಾಬ್ ನಿಷೇಧ ಹಿಂಪಡೆಯುತ್ತೇವೆ: ಕಾಂಗ್ರೆಸ್‌ನ ಏಕೈಕ ಮುಸ್ಲಿಂ ಮಹಿಳಾ ಶಾಸಕಿ

ಹಿಜಾಬ್ ನಿಷೇಧ ಹಿಂಪಡೆಯುತ್ತೇವೆ: ಕಾಂಗ್ರೆಸ್‌ನ ಏಕೈಕ ಮುಸ್ಲಿಂ ಮಹಿಳಾ ಶಾಸಕಿ

66
0

ರಾಜ್ಯದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿನ ಹಿಜಾಬ್ ನಿಷೇಧವನ್ನು ನಮ್ಮ ಸರ್ಕಾರ ಹಿಂಪಡೆಯಲಿದೆ ಎಂದು ರಾಜ್ಯದ ಏಕೈಕ ಮುಸ್ಲಿಂ ಮಹಿಳಾ ಶಾಸಕಿ ಕನೀಜ್ ಫಾತಿಮಾ ಅವರು ಹೇಳಿದ್ದಾರೆ. ಕಲಬುರಗಿ: ರಾಜ್ಯದ ಸರ್ಕಾರಿ ಶಿಕ್ಷಣ ಸಂಸ್ಥೆಗಳಲ್ಲಿನ ಹಿಜಾಬ್ ನಿಷೇಧವನ್ನು ನಮ್ಮ ಸರ್ಕಾರ ಹಿಂಪಡೆಯಲಿದೆ ಎಂದು ರಾಜ್ಯದ ಏಕೈಕ ಮುಸ್ಲಿಂ ಮಹಿಳಾ ಶಾಸಕಿ ಕನೀಜ್ ಫಾತಿಮಾ ಅವರು ಹೇಳಿದ್ದಾರೆ.

ಕಲಬುರಗಿ ಉತ್ತರದ ಹಾಲಿ ಕಾಂಗ್ರೆಸ್ ಶಾಸಕಿಯಾಗಿದ್ದ ಫಾತಿಮಾ ಅವರು, ಹಿಂದಿನ ಬಿಜೆಪಿ ಸರ್ಕಾರ ಹಿಜಾಬ್ ನಿಷೇಧಿಸಿದ್ದನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ್ದರು. 

ಇದನ್ನು ಓದಿ: ಒಂದು ಡಿಸಿಎಂ ಹುದ್ದೆ, ಐವರು ಮುಸ್ಲಿಂ ಶಾಸಕರನ್ನು ಮಂತ್ರಿ ಮಾಡಬೇಕು: ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ

ನಾವು ಮುಂಬರುವ ದಿನಗಳಲ್ಲಿ ಹಿಜಾಬ್ ನಿಷೇಧವನ್ನು ಹಿಂತೆಗೆದುಕೊಳ್ಳುತ್ತೇವೆ ಮತ್ತು ನಾವು ಆ ವಿದ್ಯಾರ್ಥಿನಿಯರಿಗೆ ತರಗತಿಗಳಿಗೆ ಪ್ರವೇಶ ನೀಡುತ್ತೇವೆ. ಅವರು ತಮ್ಮ ಪರೀಕ್ಷೆಗಳಿಗೆ ಹಾಜರಾಗಲು ಸಾಧ್ಯವಾಗುತ್ತದೆ. ಅವರು ಅಮೂಲ್ಯವಾದ ಎರಡು ವರ್ಷಗಳ ಸಮಯವನ್ನು ಕಳೆದುಕೊಂಡಿದ್ದಾರೆ ಎಂದು ಫಾತಿಮಾ ಅವರು ಸ್ಕ್ರೋಲ್‌ಗೆ ತಿಳಿಸಿದ್ದಾರೆ.

ಫಾತಿಮಾ ಅವರು ಬಿಜೆಪಿಯ ಚಂದ್ರಕಾಂತ್ ಪಾಟೀಲ್ ಅವರನ್ನು 2,712 ಮತಗಳಿಂದ ಸೋಲಿಸಿದ್ದಾರೆ. 2018 ರ ಚುನಾವಣೆಯಲ್ಲೂ ಫಾತಿಮಾ ಅವರು ಇದೇ ಚಂದ್ರಕಾಂತ್ ಪಾಟೀಲ್ ಅವರ ವಿರುದ್ಧ ಗೆಲುವು ಸಾಧಿಸಿದ್ದರು.

“ನಾನೂ ಹಿಜಾಬ್ ಧರಿಸಿ ವಿಧಾನಸಭೆಯಲ್ಲಿ ಕುಳಿತುಕೊಳ್ಳುತ್ತೇನೆ. ಯಾರಿಗಾದರೂ ಧೈರ್ಯವಿದ್ದರೆ ನನ್ನನ್ನು ತಡೆದು ತೋರಿಸಲಿ. ಹಿಜಾಬ್ ಧರಿಸಲು ಬಯಸುವವರು ಅದನ್ನು ಧರಿಸುವುದನ್ನು ಮುಂದುವರಿಸುತ್ತಾರೆ. ಇದು ನಮ್ಮ ಸಂಸ್ಕೃತಿಯ ಭಾಗವಾಗಿದೆ ಮತ್ತು ತಡೆಯುವ ಹಕ್ಕು ಯಾರಿಗೂ ಇಲ್ಲ” ಎಂದು ಫಾತಿಮಾ ಕಳೆದ ವರ್ಷ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ಹೇಳಿದ್ದರು.

LEAVE A REPLY

Please enter your comment!
Please enter your name here