Home Uncategorized ಹಿಮಾಚಲ ಪ್ರದೇಶ: ಬಿಜೆಪಿ ಪರ ಅಡ್ಡ-ಮತದಾನ ಮಾಡಿದ ಆರು ಕಾಂಗ್ರೆಸ್‌ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್‌

ಹಿಮಾಚಲ ಪ್ರದೇಶ: ಬಿಜೆಪಿ ಪರ ಅಡ್ಡ-ಮತದಾನ ಮಾಡಿದ ಆರು ಕಾಂಗ್ರೆಸ್‌ ಶಾಸಕರನ್ನು ಅನರ್ಹಗೊಳಿಸಿದ ಸ್ಪೀಕರ್‌

15
0

ಶಿಮ್ಲಾ: ಹಿಮಾಚಲ ಪ್ರದೇಶದಲ್ಲಿ ಇತ್ತೀಚೆಗೆ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿ ಪರ ಅಡ್ಡ-ಮತದಾನ ಮಾಡಿದ್ದ ಆರು ಮಂದಿ ಕಾಂಗ್ರೆಸ್‌ ಶಾಸಕರನ್ನು ಅನರ್ಹಗೊಳಿಸಲಾಗಿದೆ ಎಂದು ರಾಜ್ಯ ವಿಧಾನಸಭೆಯ ಸ್ಪೀಕರ್‌ ಇಂದು ಘೋಷಿಸಿದ್ದಾರೆ. ಈ ಆರು ಶಾಸಕರನ್ನು ಪಕ್ಷಾಂತರ ನಿಗ್ರಹ ಕಾನೂನಿನನ್ವಯ ಅನರ್ಹಗೊಳಿಸಲಾಗಿದೆ.

“ಕಾಂಗ್ರೆಸ್‌ ಚಿಹ್ನೆಯಡಿ ಸ್ಪರ್ಧಿಸಿದ್ದ ಆರು ಶಾಸಕರು ತಮ್ಮ ವಿರುದ್ಧ ಪಕ್ಷಾಂತರ ನಿಗ್ರಹ ಕಾಯಿದೆಯ ನಿಬಂಧನೆ ಹೇರಲ್ಪಡಲು ಕಾರಣರಾಗಿದ್ದಾರೆ. ಈ ಆರು ಮಂದಿ ಹಿಮಾಚಲ ಪ್ರದೇಶ ವಿಧಾನಸಭೆಯ ಸದಸ್ಯರಾಗಿ ತಕ್ಷಣದಿಂದ ಅನರ್ಹರಾಗುತ್ತಾರೆ,”ಎಂದು ಸ್ಪೀಕರ್‌ ಕುಲದೀಪ್‌ ಸಿಂಗ್‌ ಪಥಾನಿಯನ್‌ ಘೋಷಿಸಿದ್ದಾರೆ.

LEAVE A REPLY

Please enter your comment!
Please enter your name here