Home Uncategorized ಹಿರಿಯ ಶಾಸ್ತ್ರೀಯ ಸಂಗೀತ ಗಾಯಕಿ ಡಾ. ಪ್ರಭಾ ಅತ್ರೆ ನಿಧನ

ಹಿರಿಯ ಶಾಸ್ತ್ರೀಯ ಸಂಗೀತ ಗಾಯಕಿ ಡಾ. ಪ್ರಭಾ ಅತ್ರೆ ನಿಧನ

20
0

ಪುಣೆ: ಖ್ಯಾತ ಶಾಸ್ತ್ರೀಯ ಗಾಯಕಿ ಡಾ. ಪ್ರಭಾ ಅತ್ರೆ ಇಂದು ಮುಂಜಾನೆ ಪುಣೆಯಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ನಿಧನರಾದರು. ಅವರಿಗೆ 92 ವರ್ಷ ವಯಸ್ಸಾಗಿತ್ತು.

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಕಿರಾನ ಘರಾನದವರಾಗಿದ್ದ ಪ್ರಭಾ ಭಾರತ ಸರ್ಕಾರದ ಮೂರೂ ಪದ್ಮ ಪ್ರಶಸ್ತಿಗಳಿಗೆ ಭಾಜನರಾಗಿದ್ದರು. ಅವರಿಗೆ ಪದ್ಮ ಶ್ರೀ ಪ್ರಶಸ್ತಿ 1990ರಲ್ಲಿ ನೀಡಲಾಗಿದ್ದರೆ, ಪದ್ಮ ಭೂಷಣ ಪ್ರಶಸ್ತಿಯನ್ನು 2002ರಲ್ಲಿ ನೀಡಲಾಗಿತ್ತು, 2022 ರಲ್ಲಿ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಅವರನ್ನು ಗೌರವಿಸಲಾಗಿತ್ತು. 1991ರಲ್ಲಿ ಅವರು ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಪಡೆದಿದ್ದರು.

ಸೆಪ್ಟೆಂಬರ್‌ 13, 1932 ರಂದು ಜನಿಸಿದ್ದ ಡಾ. ಪ್ರಭಾ ಶಾಸ್ತ್ರೀಯ ಗಾಯಕಿಯಾಗಿರುವ ಹೊರತಾಗಿ ಶಿಕ್ಷಣ ತಜ್ಞೆ, ಸಂಶೋಧಕಿ, ಲೇಖಕಿಯೂ ಆಗಿದ್ದರು. ವಿಜ್ಞಾನ ಮತ್ತು ಕಾನೂನು ಪದವೀಧರೆಯಾಗಿದ್ದ ಅವರು ಸಂಗೀದಲ್ಲಿ ಡಾಕ್ಟರೇಟ್‌ ಪಡೆದಿದ್ದರು.

ಕಳೆದ ಐದು ದಶಕಗಳಿಂದ ಆಕೆ ಹಲವಾರು ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಕಿಯಾಗಿದ್ದರು.

LEAVE A REPLY

Please enter your comment!
Please enter your name here