ಗಂಡ ಮಕ್ಕಳು ಇರುವ ವಿವಾಹಿತೆಯ ಹಿಂದೆ ಬಿದ್ದ ಮತ್ತೊಬ್ಬ ವಿವಾಹಿತ, ತನ್ನನ್ನು ಪ್ರೀತಿಸುವಂತೆ ವಿವಾಹಿತೆಗೆ ದುಂಬಾಲು ಬಿದ್ದಿದ್ದ, ಮನವೊಲಿಸಲು ಆಕೆಯ ಹೆಸರನ್ನು ತನ್ನ ಎದೆಯ ಮೇಲೆ ಹಚ್ಚೆ ಹಾಕಿಸಿಕೊಂಡಿದ್ದ (Extra Marital affair). ಆಕೆ ಒಂದು ದಿನ ಐ ಲವ್ ಯೂ ಅಂತ ಮೆಸೇಜ್ ಮಾಡ್ಲಿಲ್ಲ ಅಂದ್ರೆ.. ಹುಚ್ಚನಂತಾಗುತ್ತಿದ್ದು, ಕೊನೆಗೆ ಇಬ್ಬರ ಮಧ್ಯೆ ಅದೇನ್ ಆಯಿತೊ ಗೊತ್ತಿಲ್ಲ… ಮನೆಯಲ್ಲೆ ಅವಯ್ಯ ನೇಣಿಗೆ ಶರಣಾದ (suicide) ವಿಚಿತ್ರ, ದುರಂತ ಘಟನೆ ನಡೆದಿದೆ. ಅಷ್ಟಕ್ಕೂ ಅದೆಲ್ಲಿ ಅಂತೀರಾ ಈ ವರದಿ ನೋಡಿ!
ಮೇಲಿನ ಫೋಟೊದಲ್ಲಿರುವ ಇವನ ಹೆಸರು ನವೀನ್. ಇನ್ನೂ ಈಗ ತಾನೆ 27 ವರ್ಷ ವಯಸ್ಸು. ಚಿಕ್ಕಬಳ್ಳಾಪುರ ನಗರದ (chikkaballapur) ಕೋಟೆ ಬಡಾವಣೆಯ ನಿವಾಸಿ. ಮದುವೆಯಾಗಿ ಇಬ್ಬರು ಮುದ್ದಾದ ಹೆಣ್ಣು ಮಕ್ಕಳು ಇದ್ದಾರೆ. ಸುಂದರಿಗಿಂತ ಸುಂದರಿ ಪತ್ನಿ ಸುಪ್ರಿಯಾ ಸಹ ಇದ್ದಾಳೆ. ನಗರದಲ್ಲಿ ಕಾರ್ಪೇಂಟರ್ ಕೆಲಸ ಮಾಡಿಕೊಂಡಿದ್ದ ನವೀನ್… ಮೊನ್ನೆ ತಡರಾತ್ರಿ ತನ್ನ ತಾಯಿ ಪದ್ಮಾವತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯಗೆ ಶರಣಾಗಿದ್ದಾನೆ. ಮತ್ತೊಂದೆಡೆ ನವೀನ್ ತಾಯಿ ಕಾಶಿ ಯಾತ್ರೆಗೆ ಹೋಗಿದ್ದು, ದೇವರ ಸನ್ನಿಧಿಯಲ್ಲಿ ಇರುವಾಗಲೇ ಮಗ ಸಾವಿನ ಮನೆ ಸೇರಿದ್ದಾನೆ. ಇದ್ರಿಂದ ನವೀನ್ ಸಾವಿನ ಹಿಂದೆ ಆ ಹೆಣ್ಣಿನ ಕರಿನೆರಳು ಮೂಡಿದ್ದು (Illicit Relation), ಮೃತನ ಪತ್ನಿ ಹಾಗೂ ತಾಯಿ ಆಕೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮನೆಯಲ್ಲಿ ಸುಂದರಿಯಂಥ ಹೆಂಡತಿ ಇದ್ರೂ.. ನವೀನ್ ಮಾತ್ರ ಬೇರೊಬ್ಬರ ಪತ್ನಿಯಾಗಿದ್ದ ದೀಪಾ ಎಂಬಾಕೆಯ ಮೇಲೆ ಮೋಹಿತನಾಗಿದ್ದ, ಮೊದ ಮೊದಲು ದೀಪಾ ನವೀನ್ ನನ್ನು ನಿರಾಕರಿಸಿದ್ದಳು. ನಂತರ ಆತನ ಬ್ಲಾಕ್ ಮೇಲ್, ಹಿಂಸೆ, ಹುಚ್ಚು ಪ್ರೀತಿಗೆ ಮನಸೋತು ಆಗಾಗ ಲವ್ ಯೂ ಅಂತ ಮೇಸೆಜ್ ಮಾಡ್ತಿದ್ದಳಂತೆ. ಸ್ವತಃ ಆಕೆಯ ಗಂಡನ ಎದರುಲ್ಲೆ ನವೀನ್ ಆಗಮಿಸಿ… ಲವ್ ಮಾಡು ಲವ್ ಮಾಡು ಅಂತಾ ಹಿಂಸಿಸುತ್ತಿದ್ದಂತೆ.
ಇದ್ರಿಂದ ಎರಡು ಕುಟುಂಗಳ ಮಧ್ಯೆ ಗಲಾಟೆ ನ್ಯಾಯ ಪಂಚಾಯತಿ ಸಹ ಆಗಿದೆಯಂತೆ… ಇತ್ತೀಚಿಗೆ ದೀಪಾ, ಹುಚ್ಚು ಪ್ರೇಮಿ ನವೀನನ ಕಾಟ ತಾಳದೆ.. ಫೋನ್ ಬಳಸುವುದನ್ನೆ ಬಿಟ್ಟಿದ್ದಳಂತೆ. ಸ್ವತಃ ನವೀನ್, ದೀಪಾ ಮನೆಗೆ ಬಂದು ಬಾಟಲಿಯಿಂದ ತಲೆಗೆ ಹೊಡೆದುಕೊಂಡು ಲವ್ ಮಾಡಲಿಲ್ಲ ಅಂದ್ರೆ… ನಿನ್ನ ಮನೆಯಲ್ಲಿಯೇ ಸತ್ತುಹೋಗ್ತೀನಿ ಅಂತ ಬ್ಲಾಕ್ ಮೇಲ್ ಮಾಡಿದ್ದನಂತೆ. ಈಗ ಅವನು ಸತ್ತು ಹೋಗಿದ್ದು ನನಗೂ ಅದಕ್ಕೂ ಸಂಬಂಧವಿಲ್ಲ ಅಂತ ದೀಪಾ ಜಾರಿಕೊಳ್ತಿದ್ದಾಳೆ.
ಮನೆಯಲ್ಲಿ ಸುಂದರ ಪತ್ನಿಯಿದ್ದು, ದೇವರಂಥ ಸುಂದರ ಮಕ್ಕಳು ಇದ್ದರೂ … ಪತ್ನಿ ಮಕ್ಕಳ ಬದಲು ಬೇರೊಬ್ಬರ ಪತ್ನಿಯ ಮೇಲೆ ಕಣ್ಣು ಹಾಕಿದ ನವೀನ್… ಅವಳ ಮೋಹವೋ… ಇವನ ಹುಚ್ಚು ಪ್ರೀತಿಯೊ… ಗೊತ್ತಿಲ್ಲ. ಕೊನೆಗೆ ಪತ್ನಿ, ಮಕ್ಕಳು ಹಾಗೂ ತಾಯಿಯನ್ನು ಬಿಟ್ಟು ನೇಣಿಗೆ ಶರಣಾಗಿದ್ದಾನೆ. ಚಿಕ್ಕಬಳ್ಳಾಪುರ ನಗರ ಠಾಣೆ ಪೊಲೀಸರು ಅನುಮಾನಸ್ಪದ ಸಾವು ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ.
ವರದಿ: ಭೀಮಪ್ಪ ಪಾಟೀಲ್, ಟಿವಿ 9, ಚಿಕ್ಕಬಳ್ಳಾಪುರ
ಇದನ್ನೂ ಓದಿ: Crime News: ಪತಿ ಅಗಲಿಕೆ ನೋವಿನಿಂದ ಮನನೊಂದು ಪತ್ನಿಯೂ ನೇಣಿಗೆ ಶರಣು