ಹಾಸನ: ರಾಜ್ಯದಲ್ಲಿ 108 ಆಂಬುಲೆನ್ಸ್ (108 Ambulance) ಸಿಬ್ಬಂದಿಗಳು ವೇತನವಿಲ್ಲದೆ ಪರದಾಡುತ್ತಿದ್ದು, ಸಿಬ್ಬಂದಿಗಳ ಪರಿಸ್ಥಿತಿ ದೇವರು ವರ ಕೊಟ್ಟರು ಪೂಜಾರಿ ವರ ಕೊಡದಂತಾಗಿದೆ. 108 ಆಂಬುಲೆನ್ಸ್ ಸೇವೆಯಲ್ಲಿ ಅನೇಕ ಲೋಪ ದೋಷಗಳ ಬಗ್ಗೆ ದೂರುಗಳಿದ್ದವು. ಗುತ್ತಿಗೆದಾರರು ಸರಿಯಾದ ಸೇವೆ ನೀಡಿಲ್ಲ ಎಂದು ಹೈಕೋರ್ಟ್ನಿಂದ ನಿರ್ದೇಶನ ಬಂದಿತ್ತು. ಹೀಗಾಗಿ ಹೊಸ ಟೆಂಡರ್ ಕರೆಯಲಾಗಿದೆ, ಬಹುಶಃ ಮುಂದಿನ ಜನವರಿ ಕೊನೆ ವೇಳೆಗೆ ಹೊಸ ಗುತ್ತಿಗೆದಾರರ ನೇಮಕವಾಗುತ್ತೆ ಎಂದು ಹಾಸನದಲ್ಲಿ ಅರೋಗ್ಯ ಸಚಿವ ಕೆ ಸುದಾಕರ್ (K Sudhakar) ತಿಳಿಸಿದ್ದಾರೆ.
ಹಾಸನ ವೈದ್ಯಕೀಯ ಕಾಲೇಜು ಸಭಾಂಗಣದಲ್ಲಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಹೊಸ ವ್ಯವಸ್ಥೆ ಉತ್ಕೃಷ್ಟವಾಗಿರಲಿದೆ. ಜಾಗತಿಕವಾಗಿ ಮುಂದುವರೆದ ದೇಶಗಳ ಆಂಬುಲೆನ್ಸ್ ಸೇವೆಯನ್ನು ಅದ್ಯಯನ ನಡೆಸಿ ಸೇರಿಸಿದ್ದೇವೆ. ಸಂಪೂ ಉನ್ನತ ತಂತ್ರಜ್ಞಾನ ಒಳಗೊಂಡ ಅಂಬುಲೆನ್ಸ್ ಸೇವೆ ಬರಲಿದೆ. ಎಲ್ಲಾ ವಾಹನಗಳಿಗೆ ಜಿಪಿಎಸ್ ಇರಲಿದೆ, ಎ.ಎಲ್.ಎಸ್ ಸೇವೆ ಜೊತೆಗೆ ಹೊಸ ಸೇವೆ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಬೆಳಗಾವಿ–ಹುನಗುಂದ–ರಾಯಚೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಕೇಂದ್ರದ ಅನುಮೋದನೆ: ಪ್ರಧಾನಿಗೆ ಸಚಿವ ಜೋಶಿ ಕೃತಜ್ಞತೆ
ನಗರ ಕೇಂದ್ರಿತವಾಗಿ 100 ನಮ್ಮ ಕ್ಲಿನಿಕ್ ಸ್ಥಾಪನೆ ಮಾಡುತ್ತೇವೆ
ಹಾಸನದಲ್ಲಿ ನಗರ ಕೇಂದ್ರಿತವಾಗಿ 100 ನಮ್ಮ ಕ್ಲಿನಿಕ್ ಸ್ಥಾಪನೆ ಮಾಡುತ್ತೇವೆ. ಜನಸಂಖ್ಯೆಗೆ ಅನುಗುಣವಾಗಿ ಆರೋಗ್ಯ ಸೇವೆ ಒದಗಿಸಲು ಕ್ರಮ ಕೈಗೊಳ್ಳುತ್ತೇವೆ. ಹಾಸನ ಜಿಲ್ಲೆಯಲ್ಲಿ ಒಟ್ಟು 5 ನಮ್ಮ ಕ್ಲಿನಿಕ್ ಓಪನ್ ಆಗಲಿದೆ. ಇದಕ್ಕೆ ಡಿ.14ರಂದು ಮುಖ್ಯಮಂತ್ರಿ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಮಾರ್ಚ್ ತಿಂಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕಾರ್ಯಾರಂಭವಾಗಲಿದೆ ಎಂದು ಹೇಳಿದರು.
ಜಿಲ್ಲೆಯಲ್ಲಿ 339 ವೈದ್ಯ ಹುದ್ದೆಗಳ ಪೈಕಿ 269 ಭರ್ತಿಯಾಗಿದೆ. ಜಿಲ್ಲೆಯಲ್ಲಿ 18 ತಜ್ಞ ವೈದ್ಯರ ಹುದ್ದೆಗಳು ಮಾತ್ರ ಖಾಲಿ ಇವೆ. ಹೆಲ್ತ್ ಅಂಡ್ ವೆಲ್ನೆಸ್ ಕೇಂದ್ರಗಳ ಮೂಲಕ ರಕ್ತದೊತ್ತಡ, ಮಧುಮೇಹ ಹಾಗೂ ಕ್ಯಾನ್ಸರ್ ರೋಗಿಗಳ ಪತ್ತೆಗೆ ಕ್ರಮ ಕೈಗೊಳ್ಳಾಲಾಗುವುದು. ಸಾಂಕ್ರಾಮಿಕ ರೋಗ ಆರಂಭಿಕ ಹಂತದಲ್ಲಿ ಪತ್ತೆ ಕಾರ್ಯ ಮಾಡಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಷ್ಕ್ರಿಯ ಪಶು ಇಲಾಖೆ, 13 ಸಂಚಾರಿ ಪಶು ಸಂಜೀವಿನಿ ಅಂಬ್ಯುಲೆನ್ಸ್ಗಳಿಗೆ ಸಿಬ್ಬಂದಿ ಕೊರತೆ
ರಾಜ್ಯದಲ್ಲಿ ಶೇ.70ರಷ್ಟು ಇ-ಸ್ಕ್ರೀನಿಂಗ್ ಪ್ರಾರಂಭವಾಗಿದೆ
ರಾಜ್ಯದಲ್ಲಿ ಶೇ.70ರಷ್ಟು ಇ-ಸ್ಕ್ರೀನಿಂಗ್ ಪ್ರಾರಂಭವಾಗಿದೆ. 60 ವರ್ಷ ಮೇಲ್ಪಟ್ಟ ಎಲ್ಲರಿಗೂ ಸರ್ಕಾರದಿಂದ ಕಣ್ಣಿನ ತಪಾಸಣೆ ಮಾಡಲಾಗುವುದು. ಈ ಬಗ್ಗೆ ಸ್ವತಃ ಮುಖ್ಯಮಂತ್ರಿಗಳು ಮುತುವರ್ಜಿ ವಹಿಸಿದ್ದಾರೆ. ಅಗತ್ಯ ಇದ್ದವರಿಗೆ ಶಸ್ತ್ರಚಿಕಿತ್ಸೆ ಬಳಿಕ ಕನ್ನಡಕ ನೀಡಲಾಗುವುದು. 330 ಕೋಟಿ ವೆಚ್ಚದ ಮಹತ್ವದ ಯೋಜನೆ ಜಾರಿ ಮಾಡಿದ್ದೇವೆ. ಅರೋಗ್ಯ ಕರ್ನಾಟಕ ಯೋಜನೆಯಡಿ ಕಾರ್ಡ್ ವಿತರಿಸಲಾಗುತ್ತಿದೆ. ಸಂಪೂರ್ಣ ಉಚಿತವಾಗಿ ನೀಡಲು 1 ಕೋಟಿ ಕಾರ್ಡ್ ಸಿದ್ಧವಾಗಿದೆ. ಜನವರಿ ವೇಳೆಗೆ 5 ಕೋಟಿ ಆಯುಷ್ಮಾನ್ ಕಾರ್ಡ್ ವಿತರಣೆಗೆ ಕ್ರಮವಹಿಸಲಾಗುವುದು ಎಂದು ಮಾತಾನಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ್ ಕ್ಲಿಕ್ ಮಾಡಿ
