Home ಕರ್ನಾಟಕ 1500 ಮೀ.ಓಟದಲ್ಲಿ ರಾಷ್ಟ್ರೀಯ ದಾಖಲೆ ಮುರಿದ ದೀಕ್ಷಾ

1500 ಮೀ.ಓಟದಲ್ಲಿ ರಾಷ್ಟ್ರೀಯ ದಾಖಲೆ ಮುರಿದ ದೀಕ್ಷಾ

20
0

ಚೆನ್ನೈ: ಮಧ್ಯಪ್ರದೇಶದ ಟ್ರ್ಯಾಕ್ ಅತ್ಲೀಟ್ ಕೆ.ಎಂ. ದೀಕ್ಷಾ ಲಾಸ್ ಏಂಜಲೀಸ್‌ನಲ್ಲಿ ಶನಿವಾರ ನಡೆದ ಸೌಂಡ್ ರನ್ನಿಂಗ್ ಟ್ರ್ಯಾಕ್ ಫೆಸ್ಟಿವಲ್‌ನಲ್ಲಿ 1500 ಮೀ.ಓಟದಲ್ಲಿ ರಾಷ್ಟ್ರೀಯ ದಾಖಲೆಯನ್ನು ಮುರಿದರು.

25ರ ಹರೆಯದ ದೀಕ್ಷಾ 4:04.78 ಸೆಕೆಂಡ್‌ನಲ್ಲಿ ಗುರಿ ತಲುಪಿದರು. 2021ರಲ್ಲಿ ವಾರಂಗಲ್‌ನಲ್ಲಿ ನಡೆದಿದ್ದ ನ್ಯಾಶನಲ್ ಓಪನ್ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಹರ್ಮಿಲನ್ ಬೈನ್ಸ್ ನಿರ್ಮಿಸಿರುವ ಹಿಂದಿನ ದಾಖಲೆ(4:05.39)ಮುರಿದರು.

ಬೈನ್ಸ್ ಅವರು 19 ವರ್ಷಗಳ ಹಿಂದೆ 2002ರಲ್ಲಿ ದಕ್ಷಿಣ ಕೊರಿಯಾದ ಬುಸಾನ್‌ನಲ್ಲಿ ನಡೆದ ಏಶ್ಯನ್ ಗೇಮ್ಸ್‌ನಲ್ಲಿ ಸುನೀತಾ ರಾಣಿ 4:06.03 ಸೆಕೆಂಡ್‌ನಲ್ಲಿ ಗುರಿ ತಲುಪಿ ನಿರ್ಮಿಸಿದ್ದ ದಾಖಲೆಯನ್ನು ಮುರಿದಿದ್ದರು. ಚಿನ್ನದ ಪದಕ ಜಯಿಸಿದ್ದರು.

ದೀಕ್ಷಾ 2023ರಲ್ಲಿ ಭುವನೇಶ್ವರದ ಕಳಿಂಗ ಸ್ಟೇಡಿಯಮ್‌ನಲ್ಲಿ ನಡೆದ ರಾಷ್ಟ್ರೀಯ ಅಂತರ್-ರಾಜ್ಯ ಅತ್ಲೆಟಿಕ್ಸ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ 4:06.07 ಸೆಕೆಂಡ್‌ನಲ್ಲಿ ಗುರಿ ತಲುಪಿ ವೈಯಕ್ತಿಕ ಶ್ರೇಷ್ಠ ಪ್ರದರ್ಶನ ನೀಡಿದ್ದರು. ಆಗ ಬೈನ್ಸ್‌ಗೆ ಸೋಲುಣಿಸಿ ಚಿನ್ನ ಜಯಿಸಿದ್ದರು.

ಲಾಸ್ ಏಂಜಲೀಸ್‌ನಲ್ಲಿ ನಡೆದ ಮಹಿಳೆಯರ 5,000 ಮೀ.ಓಟದಲ್ಲಿ ಪಾರುಲ್ ಚೌಧರಿ ಕೂದಲೆಳೆ ಅಂತರದಿಂದ ತನ್ನ ರಾಷ್ಟ್ರೀಯ ದಾಖಲೆ ಸುಧಾರಿಸುವುದರಿಂದ ವಂಚತರಾದರು. ಪಾರುಲ್ 15:10.69 ಸೆಕೆಂಡ್‌ನಲ್ಲಿ ಗುರಿ ತಲುಪಿ ಐದನೇ ಸ್ಥಾನ ಪಡೆದಿದ್ದಾರೆ. ಸಹ ಓಟಗಾರ್ತಿ ಅಂಕಿತಾ 15:28.88 ಸೆಕೆಂಡ್‌ನಲ್ಲಿ ಗುರಿ ತಲುಪಿ 10ನೇ ಸ್ಥಾನ ಪಡೆದಿದ್ದಾರೆ.

ಅವಿನಾಶ್ ಸಾಬ್ಳೆ ಪುರುಷರ 5,000 ಮೀ.ಓಟದಲ್ಲಿ 13:30.37 ಸೆಕೆಂಡ್‌ನಲ್ಲಿ ಗುರಿ ತಲುಪಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟರು.

LEAVE A REPLY

Please enter your comment!
Please enter your name here