ಬೆಂಗಳೂರು, ಜನವರಿ 17 (ಕರ್ನಾಟಕ ವಾರ್ತೆ): ಬೆಂಗಳೂರು ನಗರ ಜಿಲ್ಲೆಯಲ್ಲಿ ಅಕ್ರಮವಾಗಿ ಒತ್ತುವರಿಯಾಗಿದ್ದ ₹80.90 ಕೋಟಿ ಅಂದಾಜು ಮೌಲ್ಯದ 16 ಎಕರೆ 23 ಗುಂಟೆ ಸರ್ಕಾರಿ ಜಮೀನನ್ನು ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ನೇತೃತ್ವದಲ್ಲಿ ತೆರವುಗೊಳಿಸಿ ಸರ್ಕಾರದ ವಶಕ್ಕೆ ಪಡೆಯಲಾಗಿದೆ.
ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ತಹಶೀಲ್ದಾರ್ಗಳ ನೇತೃತ್ವದಲ್ಲಿ ಸಮನ್ವಯಿತ ಕಾರ್ಯಾಚರಣೆ ನಡೆಸಿ, ಸ್ಮಶಾನ, ಗೋಮಾಳ, ರಾಜಕಾಲುವೆ, ಡ್ರೈನೇಜ್, ಸರ್ಕಾರಿ ಕೆರೆ ಹಾಗೂ ಹಿಡುವಳಿ ಸರ್ವೆ ನಂಬರ್ಗಳ ಜಾಗಗಳಲ್ಲಿ ನಡೆದಿದ್ದ ಅಕ್ರಮ ಒತ್ತುವರಿಗಳನ್ನು ತೆರವುಗೊಳಿಸಲಾಗಿದೆ.
ತಾಲ್ಲೂಕುವಾರು ಒತ್ತುವರಿ ತೆರವು ವಿವರ
ಬೆಂಗಳೂರು ಪೂರ್ವ ತಾಲ್ಲೂಕು
- ಬಿದರಹಳ್ಳಿ ಹೋಬಳಿ, ರಾಂಪುರ (ಸ.ನಂ.103 – ಸ್ಮಶಾನ):
0.10 ಗುಂಟೆ | ಅಂದಾಜು ಮೌಲ್ಯ ₹1.50 ಕೋಟಿ - ಹಿರಂಡಹಳ್ಳಿ (ಸ.ನಂ.11 – ಗುಂಡುತೋಪು):
0.05 ಗುಂಟೆ | ₹0.50 ಲಕ್ಷ
ಆನೇಕಲ್ ತಾಲ್ಲೂಕು
- ಮರಸೂರು (ಸ.ನಂ.499 – ಡ್ರೈನೇಜ್):
1 ಎಕರೆ 02 ಗುಂಟೆ | ₹1.00 ಕೋಟಿ - ಇಂಡಬೆಲೆ (ಸ.ನಂ.131 – ಪಕ್ಕದ ರಾಜಕಾಲುವೆ):
0.30 ಗುಂಟೆ | ₹0.60 ಲಕ್ಷ - ಯಡವನಹಳ್ಳಿ (ಸ.ನಂ.164 – ಸರ್ಕಾರಿ ಜಾಗ):
0.06 ಗುಂಟೆ | ₹0.20 ಲಕ್ಷ - ಜಿಗಣಿ ಹೋಬಳಿ, ಕೊಪ್ಪ (ಸ.ನಂ.110 – ಗೋಮಾಳ):
7 ಎಕರೆ 21 ಗುಂಟೆ | ₹60 ಕೋಟಿ
ಸರ್ಜಾಪುರ ಹೋಬಳಿ
- ದೊಮ್ಮಸಂದ್ರ–ತಿಗಳಚೌಡೇನಹಳ್ಳಿ (ಸ.ನಂ.214/1A & 84/2 – ಮಧ್ಯ ರಾಜಕಾಲುವೆ):
0.10 ಗುಂಟೆ | ₹0.50 ಲಕ್ಷ - ಅಡಿಗಾರಕಲ್ಲಹಳ್ಳಿ (ಸ.ನಂ.65 – ಸರ್ಕಾರಿ ಕೆರೆ):
0.20 ಗುಂಟೆ | ₹0.62 ಲಕ್ಷ
ಬೆಂಗಳೂರು ದಕ್ಷಿಣ ತಾಲ್ಲೂಕು
- ದೊಡ್ಡಮಾರನಹಳ್ಳಿ, ತಾವರೆಕೆರೆ ಹೋಬಳಿ (ಸ.ನಂ.21 – ಗೋಮಾಳ):
0.14 ಗುಂಟೆ | ₹0.53 ಲಕ್ಷ
ಬೆಂಗಳೂರು ಉತ್ತರ ತಾಲ್ಲೂಕು
- ಬೆಟ್ಟಹಳ್ಳಿ, ದಾಸನಪುರ ಹೋಬಳಿ (ಸ.ನಂ.31 – ಗೋಮಾಳ):
5 ಎಕರೆ 10 ಗುಂಟೆ | ₹15 ಕೋಟಿ
ಯಲಹಂಕ ತಾಲ್ಲೂಕು
- ಹೆಸರಘಟ್ಟ ಹೋಬಳಿ, ಬಿಳಿಜಾಜಿ (ಸ.ನಂ.26, 23, 22 & 3 – ಹಿಡುವಳಿ ಜಾಗ):
0.15 ಗುಂಟೆ | ₹0.45 ಲಕ್ಷ
ಆಡಳಿತದ ಎಚ್ಚರಿಕೆ
ಸಾರ್ವಜನಿಕ ಉಪಯೋಗಕ್ಕೆ ಮೀಸಲಾದ ಭೂಮಿಗಳ ಮೇಲೆ ಅಕ್ರಮ ಒತ್ತುವರಿ ಯಾವುದೇ ಕಾರಣಕ್ಕೂ ಸಹಿಸಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟಪಡಿಸಿದ್ದಾರೆ. ಮುಂದಿನ ದಿನಗಳಲ್ಲಿಯೂ ನಿರಂತರ ತೆರವು ಕಾರ್ಯಾಚರಣೆ ಮುಂದುವರಿಯಲಿದೆ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಜಗದೀಶ್ ಕೆ. ನಾಯಕ್, ಜಿಲ್ಲಾಧಿಕಾರಿಗಳ ಕಚೇರಿ ಸಿಬ್ಬಂದಿ, ಸಂಬಂಧಪಟ್ಟ ತಾಲ್ಲೂಕುಗಳ ತಹಶೀಲ್ದಾರ್ಗಳು ಉಪಸ್ಥಿತರಿದ್ದರು.
